ಗದಗ: ನಿನ್ನೆ(ಮಾರ್ಚ್ 16) ರಾತ್ರಿ 9 ಗಂಟೆಗೆ ಗದಗ ನಗರದ ಬೆಟಗೇರಿಯ ಟೆಂಗಿನಕಾಯಿ ಬಜಾರ್ನಲ್ಲಿ, ಬೈಕ್ ಮೇಲೆ ಬರ್ತಿದ್ದ ಕಾರ್ಮಿಕನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ. ಅಷ್ಟಕ್ಕೂ ಈ ಹತ್ಯೆ ನಡೆಸಿದವನು ಬೇರಾರೂ ಅಲ್ಲ, ಕೊಲೆ ಆದವನ ಮಗ. ಅಂದ್ರೆ ಕೊಲೆಯಾದವ ಆತನಿಗೆ ಚಿಕ್ಕಪ್ಪ ಆಗಬೇಕು. ಮಂಜುನಾಥ್ ನಡು ರಸ್ತೆಯಲ್ಲಿ ಭೀಕರವಾಗಿ ಕೊಲೆಯಾಗಿದ್ದಾರೆ. ಓಣಿಯಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿ. ಯಾರೊಂದಿಗೂ ಕಿರಿಕ್ ಇಲ್ಲದ ವ್ಯಕ್ತಿ. ಆದ್ರೆ ನಿನ್ನೆ ಈತನೇ ನಡು ರಸ್ತೆಯಲ್ಲಿ ಹೆಣವಾಗಿದ್ದಾನೆ.
ನಡು ರಸ್ತೆಯಲ್ಲೇ ಚಿಕ್ಕಪ್ಪನ ಭೀಕರ ಮರ್ಡರ್
ಸ್ವತಃ ಚಿಕ್ಕಪ್ಪನನ್ನೇ ಪಾಪಿ ಮಗ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಈತನ ಹೆಸ್ರು ಪ್ರವೀಣ. ಈಗಿನ್ನೂ ಮಿಸೆ ಚಿಗುರುವ ವಯಸ್ಸು. ನಡು ರಸ್ತೆಯಲ್ಲಿ ಬೈಕ್ ಮೇಲೆ ಹೊರಟಿದ್ದ ಚಿಕ್ಕಪ್ಪನನ್ನ ನಿಲ್ಲಿಸಿ ಕೊಂದು ಹಾಕಿದ್ದಾನೆ. ಕೊಲೆ ದೃಶ್ಯ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೊಲೆಗಾರ ಪ್ರವೀಣನಿಗೆ ಚಿಕ್ಕಪ್ಪನ ಮೇಲೆ ಅದೇನ್ ದ್ವೇಷನೋ ಏನೋ ಗೋತ್ತಿಲ್ಲ ಏಕಾಏಕಿ ನುಗ್ಗಿದವನೇ ಚಿಕ್ಕಪ್ಪನ ಕೊಲೆ ಮಾಡಿದ್ದಾನೆ. ಇನ್ನು ಚಾಕುವಿನಿಂದ ಬಲವಾಗಿ ಕತ್ತು ಕುಯ್ದಿದ್ದರಿಂದ ಮಂಜುನಾಥ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆ ಪ್ರಕಾರ ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ. ಕೊಲೆಗಾರ ಪ್ರವೀಣ ಇಷ್ಟು ವರ್ಷ ಬೆಂಗಳೂರಿನಲ್ಲೇ ಇದ್ದ. ಆದ್ರೆ, ಕಳೆದ ವರ್ಷ ಲಾಕ್ಡೌನ್ನ ವೇಳೆ ಗದಗಕ್ಕೆ ಆಗಮಿಸಿದ್ದ. ಬೆಂಗಳೂರಿನಲ್ಲಿದ್ದಾಗ ಕಿರುತೆರೆಯಲ್ಲಿ ಸೈಡ್ ಆ್ಯಕ್ಟರ್ ಆಗಿ ಮಿಂಚಿದ್ದಾನಂತೆ. ಬಾಡಿ ಬಿಲ್ಡರ್ ರೀತಿ ಫೋಸ್ ಕೊಡುವ ಈ ಪ್ರವೀಣ, ಚಿಕ್ಕಪ್ಪನನ್ನು ಕೊಲ್ಲಲು ಏನಾದ್ರೂ ಬಲವಾದ ಕಾರಣ ಇರಬೇಕು ಅನ್ನೋ ಅನುಮಾನ ಪೊಲೀಸ್ರಿಗೆ ಮೂಡಿದೆ.
ಒಟ್ನಲ್ಲಿ ಎಂತಹದ್ದೇ ಸಮಸ್ಯೆ ಇದ್ರೂ ಕೂತು ಬಗೆಹರಿಸಿಕೊಳ್ಳೋದು ಬಿಟ್ಟು ಹೀಗೆ ಕೋಪದ ಕೈಗೆ ಬುದ್ಧಿಕೊಟ್ಟು ಚಿಕ್ಕಪ್ಪನನ್ನೇ ಹತ್ಯೆ ಮಾಡಿದವ ಎಸ್ಕೇಪ್ ಆಗಿದ್ದಾನೆ. ಖಾಕಿ ಪಡೆ ಹಂತಕನಿಗೆ ತಲ್ಲಾಷ್ ನಡೆಸಿದೆ. ಮತ್ತೊಂದ್ಕಡೆ ಮನೆ ಯಜಮಾನನನ್ನು ಕಳೆದುಕೊಂಡು ಮಂಜುನಾಥ್ ಪತ್ನಿ ಹಾಗೂ ಮಕ್ಕಳು ಅನಾಥರಾಗಿದ್ದಾರೆ.
ಇದನ್ನೂ ಓದಿ: ಮದ್ವೆಯಾಗಿದ್ರೂ ಪರಪುರುಷನ ಜತೆ ಲವ್ವಿಡವ್ವಿ.. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಪ್ರಿಯಕರನ ಕೈಯಿಂದಲೇ ಕೊಲೆ