Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ವೆಯಾಗಿದ್ರೂ ಪರಪುರುಷನ ಜತೆ ಲವ್ವಿಡವ್ವಿ.. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಪ್ರಿಯಕರನ ಕೈಯಿಂದಲೇ ಕೊಲೆ

ಆಕೆ ವಿವಾಹಿತೆ.. ಪ್ರೀತಿಸಿಯೇ ಅವನ ಜತೆ ಏಳು ಹೆಜ್ಜೆ ಹಾಕಿದ್ದಳು. ಸಂಸಾರ ಸುಖಮಯವಾಗಿ ಸಾಗುತ್ತಿತ್ತು. ಆದ್ರೆ ಸಂಸಾರ ದೋಣಿ ಸಾಗಿಸೋದು ಕಷ್ಟಕರ ಅನ್ಕೋಂಡು ದುಡಿಮೆಗಾಗಿ ಪತಿ ಬೇರೆ ಊರಿಗೆ ಹೋಗಿದ್ದಷ್ಟೇ, ಬಳಿಕ ನಡೆದಿದ್ದೆಲ್ಲಾ ಥೇಟ್ ಸಿನಿಮಾ ಸ್ಪೋರಿ.

ಮದ್ವೆಯಾಗಿದ್ರೂ ಪರಪುರುಷನ ಜತೆ ಲವ್ವಿಡವ್ವಿ.. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಪ್ರಿಯಕರನ ಕೈಯಿಂದಲೇ ಕೊಲೆ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸ್
Follow us
ಆಯೇಷಾ ಬಾನು
|

Updated on:Mar 17, 2021 | 9:42 AM

ಹುಬ್ಬಳ್ಳಿ: 32 ವರ್ಷ ವಯಸ್ಸಿನ ರೇಣುಕಾ ಎಂಬ ಮಹಿಳೆ ಹುಬ್ಬಳ್ಳಿಯ ಹನಮಂತನಗರದಲ್ಲಿರುವ ತನ್ನ ಮನೆಯಲ್ಲೇ ಮಲಗಿದ್ದ ಚಾಪೆ ಮೇಲೆಯೇ ಹೆಣವಾಗಿ ಬಿದ್ದಿದ್ದಾಳೆ. ಈಕೆಯ ಪ್ರಿಯಕರ ಮಹಾದೇವ್‌ ಈಕೆಯನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ನಾಟಕವಾಡಿದ್ದ. ಆದ್ರೆ ಅನುಮಾನಗೊಂಡ ಪೊಲೀಸರು ಮಹಾದೇವ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಮೊನ್ನೆ ರಾತ್ರಿಯಿಡಿ ರೇಣುಕಾಳ ಜತೆಯಲ್ಲಿ ಜಗಳವಾಡಿದ್ದ ಮಹಾದೇವ್, ಅವಳನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ನಂತ್ರ ಫ್ಯಾನ್‌ಗೆ ನೇತು ಹಾಕಬೇಕು ಅಂತಾ ಪ್ರಯತ್ನಪಟ್ಟು ವಿಫಲನಾಗಿದ್ದಾನೆ. ಬೆಳಗಿನ ಜಾವ ಪಕ್ಕದ ಮನೆಯವರಿಗೆ ಹೋಗಿ, ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಕರೆದಿದ್ದಾನೆ.

ಆತ್ಮಹತ್ಯೆ ಅಂತ ಬಿಂಬಿಸಲು ಹೊರಟವ ಖಾಕಿ ಬಲೆಗೆ ರೇಣುಕಾಳನ್ನ ನೋಡಲು ಬಂದಿದ್ದ ಪಕ್ಕದ ಮನೆಯವರಿಗೆ ಹೆಣ ನೋಡಿ ಅನುಮಾನ ಬಂದಿದೆ. ಇದು ಪಕ್ಕಾ ಕೊಲೆ ಅಂತಾ ನಿರ್ಧರಿಸಿ, ರೇಣುಕಾ ಮಕ್ಕಳನ್ನ ವಿಚಾರಿಸಿದ್ದಾರೆ. ನಿನ್ನೆ ರಾತ್ರಿ ನಡೆದ ಘಟನೆ ಬಗ್ಗೆ ಮಕ್ಕಳು ವಿವರಿಸಿದ್ದಾರೆ. ತಕ್ಷಣ ಗ್ರಾಮಸ್ಥರು ವಿದ್ಯಾನಗರ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಮಹಾದೇವನಿಗೆ ಬಿಸಿ ಮುಟ್ಟಿಸಿದಾಗ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಇನ್ನು ಪ್ರೀತಿಸಿ ಮದುವೆಯಾಗಿದ್ದ ರೇಣುಕಾ ಗಂಡ ಪರ ಊರಿಗೆ ದುಡಿಮೆಗೆ ಹೋಗಿದ್ದ. ಆಗ ಕಾರ್‌ ಡ್ರೈವರ್‌ ಮಹದೇವ್‌ ಜೊತೆ ರೇಣುಕಾ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಳು. ಗಂಡನಿಗೆ ಈ ವಿಷ್ಯ ಗೊತ್ತಾಗಿ ಇವರ ಪಾಡಿಗೆ ಇವರನ್ನ ಬಿಟ್ಟು ಆತ ಬೇರೆ ಕಡೆ ಇದ್ದ. ನಂತ್ರ ರೇಣುಕಾ ಮತ್ತು ಮಹಾದೇವ್ ಕಳೆದ ಒಂದೂವರೆ ವರ್ಷದಿಂದ ಜತೆಯಲ್ಲಿ ಸಂಸಾರ ಮಾಡ್ತಿದ್ರು. ಆದ್ರೆ ಮೊನ್ನೆ ರಾತ್ರಿ ಇಬ್ಬರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.

ವಿದ್ಯಾನಗರ ಪೋಲಿಸರು, ಗಂಡನಿಗೂ ವಿಚಾರ ಮುಟ್ಟಿಸಿದ್ದಾರೆ. ಆರೋಪಿ ಮಹಾದೇವ್‌ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಆದ್ರೆ ಏನೂ ತಪ್ಪು ಮಾಡದ ಮಕ್ಕಳು ಮಾತ್ರ ಅನಾಥರಾಗಿದ್ದಾರೆ.

ಇದನ್ನೂ ಓದಿ: ಜೆ.ಸಿ. ರಸ್ತೆ: ಪರಪುರುಷನೊಂದಿಗೆ ಲಾಡ್ಜ್​ಗೆ ಹೋದ ಮಹಿಳೆ ಶವವಾಗಿ ಪತ್ತೆ, ಶಂಕಿತ ಹಂತಕ ಅರೆಸ್ಟ್

Published On - 8:16 am, Tue, 16 March 21

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು