ತರೀಕೆರೆ ಶಾಸಕನ ವಿರುದ್ಧ ಸಿಎಂ ಬಿಎಸ್ವೈ ಪುತ್ರನಿಗೆ ದೂರು.. ನ್ಯಾಯ ಕೊಡ್ಸಿ, ಇಲ್ಲಾ ದಯಾಮರಣಕ್ಕೆ ಅವಕಾಶ ಕೊಡಿ ಎಂದ ಕುಟುಂಬ
ನಮಗೆ ನ್ಯಾಯ ಕೊಡ್ಸಿ.. ಇಲ್ಲಾ ದಯಾಮರಣಕ್ಕೆ ಅವಕಾಶ ಮಾಡಿಕೊಡಿ. ಪೊಲೀಸರ ಬಳಿಯೂ ನ್ಯಾಯ ಸಿಕ್ತಿಲ್ಲ. ಸೂಕ್ತ ನ್ಯಾಯ ಕೊಡಿಸಿ ಅಂತಾ ಆ ಕುಟುಂಬ ಸಿಎಂ ಪುತ್ರ ವಿಜಯೇಂದ್ರನ ಬಳಿ ಬೇಡಿಕೊಂಡಿದೆ. ಬಿಜೆಪಿ ಪಕ್ಷದ ಶಾಸಕನಿಂದ ನಮಗೆ ಮುಕ್ತಿಕೊಡಿಸಿ ಅಂತಾ ಕಣ್ಣೀರು ಹಾಕುತ್ತಿದ್ದಾರೆ.
ಚಿಕ್ಕಮಗಳೂರು: ನಮಗೆ ನ್ಯಾಯ ಕೊಡ್ಸಿ, ಇಲ್ಲಾ ದಯಾಮರಣಕ್ಕೆ ಅವಕಾಶ ಕೊಡ್ಸಿ.. ಪೊಲೀಸ್ ಠಾಣೆಗೆ ಹೋದ್ರೂ ನ್ಯಾಯ ಸಿಗ್ತಿಲ್ಲ.. ನಿಮ್ಮ ಬಳಿ ಬಂದಿದ್ದೇವೆ ಸೂಕ್ತ ನ್ಯಾಯ ಕೊಡ್ಸಿ ಅಂತಾ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಳಿ ಕುಟುಂಬವೊಂದು ಕಣ್ಣೀರಿಡುತ್ತಾ ಅಂಗಲಾಚಿದೆ. ಹೀಗೆ ಕುಟುಂಬ ಸಮೇತ ಕಣ್ಣೀರು ಹಾಕ್ತಿರೋ ಇವ್ರು ಚಿಕ್ಕಮಗಳೂರಿನ ಕಲ್ಯಾಣ ನಗರದ ನಿವಾಸಿಯಾದ ಪ್ರಸನ್ನ ಕುಟುಂಬದವ್ರು.
ಈ ಕುಟುಂಬ 2008ರಲ್ಲಿ ತರೀಕೆರೆ ತಾಲೂಕಿನ ದೊಡ್ಡ ಕುಂದೂರು ಗ್ರಾಮದ ಸುರ್ಜಿತ್ ಎಂಬಾತನ ಬಳಿ 47 ಎಕರೆ ಜಮೀನನ್ನ 1ಕೋಟಿ 85 ಲಕ್ಷಕ್ಕೆ ಖರೀದಿಸಿದೆ. ಆದ್ರೆ ಜಮೀನಿನ ದಾಖಲೆಗಳು ಸರಿಯಿಲ್ಲದ ಕಾರಣ ಪ್ರಸನ್ನ ಕುಟುಂಬಸ್ಥರಿಗೆ ಪಹಣಿ ವರ್ಗಾವಣೆ ಆಗಿಲ್ಲ. ಈ ಬಗ್ಗೆ ಕೇಳಿದ್ರೆ ಜಮೀನು ಮಾರಿದ್ದ ಸುರ್ಜಿತ್ ಸತಾಯಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಜಮೀನು ಖರೀದಿಸಿದ್ದ ಪ್ರಸನ್ನ ಕೋರ್ಟ್ ಮೆಟ್ಟೆಲೇರಿದ್ದಾರೆ.
ಅಂದಹಾಗೆ ಕೋರ್ಟ್ ಜಮೀನು ಸ್ವಾಧೀನವನ್ನ ಪ್ರಸನ್ನ ಕುಟುಂಬಕ್ಕೆ ನೀಡಿದೆ. ಆದ್ರೆ ಸುರ್ಜಿತ್ ತೋಟಕ್ಕೆ ಹೋಗಿ ಬರಲು ಬಿಡದೇ ತೊಂದರೆ ಕೊಡುತ್ತಲೇ ಬರುತ್ತಿದ್ದಾರಂತೆ. ಇದಕ್ಕೆಲ್ಲಾ ಕಾರಣ ಸ್ಥಳೀಯ ಎಂಎಲ್ಎ ಸುರೇಶ್ ಅನ್ನೋದು ಕುಟುಂಬಸ್ಥರ ಆರೋಪ. ಹೀಗಾಗಿ ಪೊಲೀಸ್ ಠಾಣೆಗೆ ನ್ಯಾಯ ಕೊಡಿ ಅಂತಾ ಹೋದ್ರೂ ನಮಗೆ ಅನ್ಯಾಯವೆಸಗುತ್ತಿದ್ದಾರೆ. ಹಾಗಾಗೀ ನಮಗೆ ನ್ಯಾಯ ಕೊಡ್ಸಿ, ಇಲ್ಲಾ ದಯಾಮರಣಕ್ಕೆ ಅವಕಾಶ ಕೊಡ್ಸಿ ಅಂತಾ ಇಡೀ ಕುಟುಂಬ ವಿಜಯೇಂದ್ರ ಬಳಿ ಅವಲತ್ತುಕೊಂಡಿದೆ.
ನಮ್ಮ ತೋಟಕ್ಕೆ ಹೋಗಲು ನಮಗೆ ಬಿಡ್ತಿಲ್ಲ, ಪ್ರತಿ ಬಾರಿ ಹೋದಾಗಲೂ ನಮ್ಮ ಮೇಲೆ ಮಚ್ಚು, ದೊಣ್ಣೆಯಿಂದ ಹಲ್ಲೆ ಮಾಡ್ತಾರೆ. ಗುಂಪು ಕಟ್ಟಿಕೊಂಡು ನಮ್ಮ ಮೇಲೆ ದಾಳಿ ಮಾಡ್ತಾರೆ. ಇದಕ್ಕೆಲ್ಲಾ ಕಾರಣ ಶಾಸಕರ ಕುಮ್ಮಕ್ಕು ಅನ್ನೋದು ಈ ಕುಟುಂಬದ ಆರೋಪ. ಮಾರಣಾಂತಿಕ ಹಲ್ಲೆ ನಡೆದ್ರೂ ಆರೋಪಿಗಳ ವಿರುದ್ಧ ಪೊಲೀಸ್ರು ಯಾವುದೇ ಕ್ರಮತೆಗೆದುಕೊಂಡಿಲ್ಲ ಅನ್ನೋದು ಈ ಕುಟುಂಬಸ್ಥರ ಅಳಲು
ಪ್ರಸನ್ನ ಕುಟುಂಬಸ್ಥರ ನೋವನ್ನ ಆಲಿಸಿರೋ ವಿಜಯೇಂದ್ರ ಯಾವ ರೀತಿ ಸಮಸ್ಯೆಯನ್ನ ಬಗೆಹರಿಸ್ತಾರೆ, ಇವರಿಗಾಗಿರುವ ಅನ್ಯಾಯವನ್ನ ಸರಿಪಡೀಸ್ತಾರ ಕಾದು ನೋಡಬೇಕಿದೆ.
ಇದನ್ನೂ ಓದಿ:ಅವತ್ತೇ ಹೇಳಿದ್ದೇನೆ.. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ನನ್ನ ಬಗ್ಗೆ ತುಂಬಾ ಪ್ರೀತಿ ಇದೆ -ಬಿ.ವೈ.ವಿಜಯೇಂದ್ರ