ಜೆ.ಸಿ. ರಸ್ತೆ: ಪರಪುರುಷನೊಂದಿಗೆ ಲಾಡ್ಜ್ಗೆ ಹೋದ ಮಹಿಳೆ ಶವವಾಗಿ ಪತ್ತೆ, ಶಂಕಿತ ಹಂತಕ ಅರೆಸ್ಟ್
ದಿಲೀಪ್ ಕುಮಾರ್ ಎಂಬಾತನ ಜೊತೆ ಜೆ.ಸಿ ರಸ್ತೆಯ ಖಾಸಗಿ ಲಾಡ್ಜ್ ಗೆ ಕಮಲ ಬಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹೀಗಾಗಿ ದಿಲೀಪ್ ಕುಮಾರ್ನಿಂದ ಈ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು: ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯ ಜೆ.ಸಿ. ರಸ್ತೆಯ ಅರ್ಚನ ಕಂಫರ್ಟ್ಸ್ ಲಾಡ್ಜ್ನಲ್ಲಿ ನಡೆದಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ಕಮಲ ಎಂಬ ಮಹಿಳೆಯ ಶವ ಪತ್ತೆಯಾಗಿದ್ದು, ಸಿದ್ಧಾಪುರದ ನಿವಾಸಿಯಾಗಿದ್ದ ಕಮಲ, ನವೆಂಬರ್ 24 ರಿಂದ ನಾಪತ್ತೆಯಾಗಿದ್ದಳು. ಹೀಗಾಗಿ ಕಮಲ ನಾಪತ್ತೆ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ಕಮಲಳ ಗಂಡ ಓಬಳೇಶ್ ದೂರು ದಾಖಲಿಸಿದ್ದರು.
ದಿಲೀಪ್ ಕುಮಾರ್ ಎಂಬಾತನ ಜೊತೆ ಜೆ.ಸಿ ರಸ್ತೆಯ ಖಾಸಗಿ ಲಾಡ್ಜ್ ಗೆ ಕಮಲ ಬಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಹೀಗಾಗಿ ದಿಲೀಪ್ ಕುಮಾರ್ನಿಂದ ಈ ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಕಲಾಸಿಪಾಳ್ಯ ಠಾಣಾ ಪೊಲೀಸರು ಆರೋಪಿ ದಿಲೀಪ್ ಕುಮಾರ್ನನ್ನು ವಶಕ್ಕೆ ಪಡೆದಿದ್ದಾರೆ.