AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಯಾಂಗನೆಯ ಊಸರವಳ್ಳಿ ಆಟ, ಜಿದ್ದಿಗೆ ಬಿದ್ದವರಲ್ಲಿ ಒಬ್ಬ ಮಸಣ ಸೇರಿದ.. ಏನೀ ಪ್ರೇಮ್​ ಕಹಾನಿ?

ಕೊಂದ ಬಳಿಕ ಕೊಲೆಯಾದವನ ಮನೆಗೆ ಬಂದಿದ್ದ ಹಂತಕರ ಟೀಂ, ಹುಡುಕಾಡುವ ಹೈಡ್ರಾಮ ನಡೆಸಿ. ಅದೇ ದಿನ ಕೊಲೆಯಾದವನ ಮನೆಯಲ್ಲೇ ಊಟ ಮಾಡಿದ್ದಾರೆ.

ಮಾಯಾಂಗನೆಯ ಊಸರವಳ್ಳಿ ಆಟ, ಜಿದ್ದಿಗೆ ಬಿದ್ದವರಲ್ಲಿ ಒಬ್ಬ ಮಸಣ ಸೇರಿದ.. ಏನೀ ಪ್ರೇಮ್​ ಕಹಾನಿ?
ಕೊಲೆಯಾದ ರವಿಕುಮಾರ್​
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​|

Updated on: Nov 27, 2020 | 5:04 PM

Share

ಬೆಂಗಳೂರು: ಪ್ರೀತಿಸಿದ ಹುಡುಗಿ ಮೇಲೆ ಕಣ್ಣಾಕಿದ ಟಿಟಿ ವಾಹನದ ಮಾಲೀಕನನ್ನ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟದ ಕೋಳಿ ಫಾರಂ ಬಳಿ ನಡೆದಿದೆ.

ರವಿಕುಮಾರ್ ಕೊಲೆಯಾದ ಟಿಟಿ ವಾಹನದ ಮಾಲೀಕನಾಗಿದ್ದು, ಖಾಸಗಿ ಕಂಪನಿ ಜೊತೆ ಟೈ ಅಪ್ ಆಗಿ ಕೆಲಸ ಮಾಡ್ತಿದ್ದ ಎಂಬುದು ತಿಳಿದುಬಂದಿದೆ. ಈ ವೇಳೆ ಲೋಕೇಶ್ ಎಂಬ ವ್ಯಕ್ತಿ ರವಿಕುಮಾರ್ ಜತೆ ಸೇರಿಕೊಂಡಿದ್ದ ನಂತರ ಲೋಕೇಶ್, ರವಿಕುಮಾರ್ ಒಡೆತನದ ಟಿಟಿ ವಾಹನವನ್ನು ಓಡಿಸಲು ಕೆಲಸಕ್ಕೆ ಸೇರಿಕೊಂಡಿದ್ದ. ಈ ವೇಳೆ ರವಿಕುಮಾರ್ ಮೂಲಕವೇ ಲೋಕೇಶ್​ಗೆ ಹುಡುಗಿಯೊಬ್ಬಳು ಪರಿಚಯವಾಗಿದ್ದಳು. ಕೆಲ ದಿನಗಳ ನಂತರ ಪರಿಚಯ ಪ್ರೇಮವಾಗಿ ಬದಲಾಗಿದೆ. ಇದಾದ ಬಳಿಕ ರವಿಕುಮಾರ್ ಕೂಡ ಹುಡುಗಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ.

ಆರೋಪಿ ಹಂತಕ ಲೋಕೇಶ್​

ರವಿಕುಮಾರ್​ನನ್ನು ಲೋಕೇಶ್​ ಅಲ್ಲಿಂದ ಕಿಡ್ನ್ಯಾಪ್ ಮಾಡಿಸಿದ್ದ.. ಈ ವೇಳೆ ಆ ಯುವತಿ ಲೋಕೇಶ್​ಗೆ ಗೊತ್ತಾಗದಂತೆ ಇಬ್ಬರೊಂದಿಗೂ ಸ್ನೇಹ ಬೆಳೆಸಿದ್ದಳು. ಸ್ವಲ್ಪ ದಿನಗಳ ನಂತರ ಲೋಕೇಶ್​ಗೆ ಈ ಮಾಹಿತಿ ಗೊತ್ತಾಗಿದೆ. ಇದರಿಂದ ಕೋಪಗೊಂಡ ಲೋಕೇಶ್​ ಇದೇ ತಿಂಗಳು 20 ರಂದು ರವಿಕುಮಾರ್ ಒಡಿಸುತ್ತಿದ್ದ ಟಿಟಿ ವಾಹನವನ್ನು ಅಡ್ಡ ಹಾಕಿದ್ದಾನೆ.

ತದ ನಂತರ ತನ್ನ ಮೂವರು ಸ್ನೇಹಿತರನ್ನ ಕರೆಸಿ ರವಿಕುಮಾರ್​ನನ್ನು ಲೋಕೇಶ್​ ಅಲ್ಲಿಂದ ಕಿಡ್ನ್ಯಾಪ್ ಮಾಡಿಸಿದ್ದ. ಬಳಿಕ ರವಿಕುಮಾರ್​ನನ್ನು ಬನ್ನೇರುಘಟ್ಟದ ಕೋಳಿ ಫಾರಂ ಬಳಿ ಕರೆದೊಯ್ದಿದ್ದ. ಈ ವೇಳೆ ಮಾತನಾಡಿಸಿ ತನ್ನ ಹುಡುಗಿಯನ್ನ ಬಿಡಲು ಹೇಳಿದ್ದ. ಆದರೆ ರವಿಕುಮಾರ್ ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಜಗಳವಾಡಿದ್ದಾನೆ.

ಹೀಗಾಗಿ ಕೋಪಗೊಂಡ ಲೋಕೇಶ್​, ರವಿಕುಮಾರ್​ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ಗೊತ್ತಾಗದಂತೆ ಬನ್ನೇರುಘಟ್ಟದ ಗುಡ್ಡದ ಒಂದರ ಪೊದೆಯಲ್ಲಿ ಶವ ಎಸೆದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ರವಿಕುಮಾರ್ ಕಾಣದದಾಗ ಆತನ ಮನೆಯವರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ನೀಡಿದ್ದರು.

ಅದೇ ದಿನ ಕೊಲೆಯಾದವನ ಮನೆಯಲ್ಲೇ ಊಟ ಮಾಡಿದ್ದಾರೆ.. ಈ ವೇಳೆ ಬೈಯ್ಯಪ್ಪನಹಳ್ಳಿ ಪೊಲೀಸರು ತನಿಖೆಗಿಳಿದಿದ್ದಾರೆ. ತನಿಖೆ ವೇಳೆ ಪ್ರಕರಣದ ಅಸಲಿಯತ್ತು ಹೊಬಂದಿದ್ದು, ರವಿಕುಮಾರ್ ಶವ ಪತ್ತೆಯಾಗಿದೆ. ಕೊಂದ ಬಳಿಕ ಕೊಲೆಯಾದವನ ಮನೆಗೆ ಬಂದಿದ್ದ ಹಂತಕರ ಟೀಂ, ಹುಡುಕಾಡುವ ಹೈಡ್ರಾಮ ನಡೆಸಿ. ಅದೇ ದಿನ ಕೊಲೆಯಾದವನ ಮನೆಯಲ್ಲೇ ಊಟ ಮಾಡಿದ್ದಾರೆ. ಅಂತಿಮವಾಗಿ ಆರೋಪಿಗಳಾದ ಲೋಕೇಶ್, ಸಚಿನ್,ರಂಜಿತ್​ನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!