ಚಿನ್ನವನ್ನು ಕದ್ದು ಸಾಗಿಸಲು ಈ ಬುದ್ಧಿವಂತರು ಬಳಸಿದ ತಂತ್ರವೇನು ಗೊತ್ತಾ?
ವಿನೂತನ ರೀತಿಯಲ್ಲಿ ಚಿನ್ನವನ್ನು ಕದ್ದು ಸಾಗಿಸಲು ಮುಂದಾಗಿ ಪರಿಶೀಲನೆಯ ವೇಳೆ ಸಿಕ್ಕಿಬಿದ್ದ ಪುಣ್ಯಾತ್ಮರು... ಕಲ್ಲಿಕೋಟೆ ವಿಮಾನ ನಿಲ್ಧಾಣದಲ್ಲಿ ಘಟನೆ.
ಕೊಚ್ಚಿ: ಚಿನ್ನ ಕಳ್ಳಸಾಗಣೆ ತಡೆಯಲು ಭದ್ರತಾ ಪಡೆಯವರು ಎಷ್ಟೇ ಸಾಹಸಪಟ್ಟರೂ ಖದೀಮರು ಹೊಸದೊಂದು ದಾರಿ ಹುಡುಕಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಇಂದು ಕೇರಳದ ಕೋಯಿಕ್ಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ ಬರೋಬ್ಬರಿ 18 ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ತಪಾಸಣೆ ವೇಳೆ 24 ಕ್ಯಾರೆಟ್ನ ಒಟ್ಟು 364ಗ್ರಾಂ ಚಿನ್ನ ಪತ್ತೆಯಾಗಿದ್ದು ವಿದ್ಯುತ್ ಉಪಕರಣದಲ್ಲಿ ಚಿನ್ನ ಸಿಕ್ಕಿದ್ದು ತನಿಖಾಧಿಕಾರಿಗಳಿಗೂ ಹುಬ್ಬೇರುವಂತೆ ಮಾಡಿದೆ. ವಿದ್ಯುತ್ ಉಪಕರಣ ಹಾಗೂ ಚೆಕ್ ಇನ್ ಬ್ಯಾಗೇಜ್ನಲ್ಲಿ ಚಿನ್ನದ ಸ್ಕ್ರೂ ಬಳಸಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
Air Intelligence Unit at Kozhikode International Airport seized 364 grams 24K gold worth Rs 18 lakhs from two passengers. Gold was concealed in the shape of screws in power extension devices and in check-in baggage: Commissionerate of Customs (Preventive), Kochi pic.twitter.com/npRSsvH7Ub
— ANI (@ANI) November 27, 2020