ದೆಹಲಿ ಚಲೋ: ರಾಷ್ಟ್ರ ರಾಜಧಾನಿ ಪ್ರವೇಶಿಸಲು ರೈತರಿಗೆ ಕೊನೆಗೂ ಸಿಕ್ತು ಗ್ರೀನ್ ಸಿಗ್ನಲ್
ದೆಹಲಿ: ಪಂಜಾಬ್ ರೈತರಿಗೆ ತಮ್ಮ ಪ್ರತಿಭಟನೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿಸಲು ಕೊನೆಗೂ ಅನುಮತಿ ಸಿಕ್ಕಿದೆ. ರೈತರಿಗೆ ದೆಹಲಿಯ ನಿರಂಕಾರಿ ಸಮಾಗಮ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ದೆಹಲಿ ಸರ್ಕಾರ ಅವಕಾಶ ನೀಡಿದೆ.
ದೆಹಲಿ: ಪಂಜಾಬ್ ರೈತರಿಗೆ ತಮ್ಮ ಪ್ರತಿಭಟನೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿಸಲು ಕೊನೆಗೂ ಅನುಮತಿ ಸಿಕ್ಕಿದೆ. ರೈತರಿಗೆ ದೆಹಲಿಯ ನಿರಂಕಾರಿ ಸಮಾಗಮ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ದೆಹಲಿ ಸರ್ಕಾರ ಅವಕಾಶ ನೀಡಿದೆ. ಈ ನಿರ್ಧಾರವನ್ನು, ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಸ್ವಾಗತಿಸಿದ್ದಾರೆ.
ನಿರಂಕಾರಿ ಮೈದಾನದಲ್ಲಿ ಪ್ರತಿಭಟನಾಕಾರರಿಗೆ ನೀರಿನ ಟ್ಯಾಂಕ್ರಗಳ ವ್ಯವಸ್ಥೆ ಸಹ ಮಾಡಲಿದೆ. ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ಪ್ರತಿನಿಧಿಗಳು ರೈತರ ಯೋಗಕ್ಷೇಮ ನೋಡಿಕೊಳ್ಳಲು ಎಲ್ಲಾ ಸಿದ್ಧತೆ ನಡೆಸುತ್ತಿದೆ ಎಂದು ಆಪ್ ವಕ್ತಾರ ರಾಘವ್ ಛಡ್ಡಾ ತಿಳಿಸಿದರು.
Delhi govt officials reach Nirankari Samagam Ground, Burari to review arrangements for farmers' ‘Delhi Chalo’ protest.
“We've come here to deploy water tankers for farmers. AAP govt stands by farmers. Arvind Kejriwal-led govt will take care of them," says Raghav Chaddha, AAP pic.twitter.com/2NRkygrc3V
— ANI (@ANI) November 27, 2020