ಪ್ರೊಬೆಷನರಿ PSIಗೆ ಆವಾಜ್ ಹಾಕಿದ್ದ ಬಿಜೆಪಿ ಜಿಲ್ಲಾಧ್ಯಕ್ಷನಿಗೆ ಮುಂದೇನಾಯ್ತು?
ಮಂಡ್ಯ: ಕೊರೊನಾ ವಿರುದ್ಧ ಹೋರಾಡಲು ತಮ್ಮ ಮನೆ ಮಠಗಳ ಬಗ್ಗೆ ಯೋಚಿಸದೆ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ಕೊರೊನಾ ವಾರಿಯಸ್ ಮೇಲಿನ ದರ್ಪ ಮುಂದುವರೆದಿದೆ. ಮಂಡ್ಯ ಜಿಲ್ಲೆ ಕೆಆರ್‌ಪೇಟೆಯ ಪ್ರೊಷನರಿ ಪಿಎಸ್‌ಐ ಮೇಲೆ ದೌರ್ಜನ್ಯ ಮಾಡಿದ್ದ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಟೇಷನ್ ಬೇಲ್ ಮೇಲೆ ರಿಲೀಸ್ ಆಗಿದ್ದಾರೆ. ಹಿನ್ನೆಲೆ: ವಾಹನ ತಪಾಸಣೆ ವೇಳೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಆರ್.ಪೇಟೆಯಲ್ಲಿ ಪ್ರೊಬೆಷನರಿ PSI ನಿಖಿತಾಗೆ ಆವಾಜ್ ಹಾಕಿದ್ದರು. ಸಂಜೆ 7 ಗಂಟೆಯಲ್ಲಿ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ಕಾರಿನಲ್ಲಿ […]
ಮಂಡ್ಯ: ಕೊರೊನಾ ವಿರುದ್ಧ ಹೋರಾಡಲು ತಮ್ಮ ಮನೆ ಮಠಗಳ ಬಗ್ಗೆ ಯೋಚಿಸದೆ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ಕೊರೊನಾ ವಾರಿಯಸ್ ಮೇಲಿನ ದರ್ಪ ಮುಂದುವರೆದಿದೆ. ಮಂಡ್ಯ ಜಿಲ್ಲೆ ಕೆಆರ್‌ಪೇಟೆಯ ಪ್ರೊಷನರಿ ಪಿಎಸ್‌ಐ ಮೇಲೆ ದೌರ್ಜನ್ಯ ಮಾಡಿದ್ದ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಟೇಷನ್ ಬೇಲ್ ಮೇಲೆ ರಿಲೀಸ್ ಆಗಿದ್ದಾರೆ.
ಹಿನ್ನೆಲೆ: ವಾಹನ ತಪಾಸಣೆ ವೇಳೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಆರ್.ಪೇಟೆಯಲ್ಲಿ ಪ್ರೊಬೆಷನರಿ PSI ನಿಖಿತಾಗೆ ಆವಾಜ್ ಹಾಕಿದ್ದರು. ಸಂಜೆ 7 ಗಂಟೆಯಲ್ಲಿ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸಂಜೆ 7 ಗಂಟೆ ನಂತರ ನಿಷೇಧಾಜ್ಞೆ ಇರುವುದರಿಂದ ಸಂಚರಿಸಬಾರದೆಂದು PSI ನಿಖಿತಾ ಸೂಚಿಸಿದ್ರು. ಈ ಮಾತಿಗೆ ಗರಂ ಆದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊಬೆಷನರಿ ಪಿಎಸ್‌ಐ ನಿಖಿತಾಗೆ ಆವಾಜ್ ಹಾಕಿದ್ರು.
ನಾನು ಬಿಜೆಪಿ ಜಿಲ್ಲಾಧ್ಯಕ್ಷ, ನನ್ನನ್ನು ನೀನು ಕೇಳುವಂತಿಲ್ಲ. ನಿನ್ನದು ಅತಿಯಾಗುತ್ತಿದೆ, ನೀನು ಇನ್ನೂ ಪಿಎಸ್‌ಐ ಆಗಿಲ್ಲ. ನೀನು ಇನ್ನೂ ಪ್ರೊಬೆಷನರಿ ಪಿಎಸ್‌ಐ ಅಷ್ಟೇ. ನಾನು ಸಿಎಂ, ಡಿಸಿಎಂ, ಡಿಸಿ, SPಗೆ ಕಾಲ್ ಮಾಡುತ್ತೇನೆ. ನೀನು ನನ್ನ ಮೇಲೆ ಹಲ್ಲೆ ಮಾಡಿದೆ ಎಂದು ದೂರು ನೀಡ್ತೀನಿ. ನಿನನ್ನ ಕೆಲಸದಿಂದ ತೆಗೆಸುತ್ತೇನೆ ಎಂದು ಆವಾಜ್ ಹಾಕಿದ್ರು ಎಂಬ ಆರೋಪ ಕೇಳಿ ಬಂದಿತ್ತು.
ನಿಖಿತಾ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಟೌನ್ ಠಾಣೆಯಲ್ಲಿ ವಿಜಯ್‌ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ ಸ್ಟೇಷನ್ ಬೇಲ್ ಮೇಲೆ ವಿಜಯ್‌ಕುಮಾರ್ ರಿಲೀಸ್ ಆಗಿದ್ದಾರೆ. ಕೊರೊನಾ ವಾರಿಯಸ್ ಮೇಲೆ ದೌರ್ಜನ್ಯ ಮಾಡೋ ರಾಜಕೀಯ ಪುಂಡರಿಗೆ ಜೈಲು ಶಿಕ್ಷೆ ಅಲ್ಲ, ಸ್ಟೇಷನ್ ಬೇಲ್ ಸಿಗುತ್ತೆ.
Published On - 8:20 am, Thu, 7 May 20