ಮಂಗಳೂರು: ಮಾಜಿ ಪ್ರಿಯಕರನಿಂದ, ಮಾಜಿ ಪ್ರೇಯಸಿ ಜತೆಗಿದ್ದ ಯುವಕನಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯುವತಿಯ ಮಾಜಿ ಪ್ರಿಯಕರ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪತ್ರಿಕಾಗೋಷ್ಠಿ ನಡೆಸಿ ವಿಚಾರ ತಿಳಿಸಿದ್ದಾರೆ. ಮಾಜಿ ಪ್ರಿಯಕರ ತ್ರಿಶೂಲ್ (19), ಸಂತೋಷ್ ಪೂಜಾರಿ (19), ಡ್ಯಾನಿಶ್ ಅರೆನ್ ಡಿಕ್ರೋಸ್ (18) ಬಂಧಿತ ಆರೋಪಿಗಳಾಗಿದ್ದಾರೆ.
ಕೆಲವು ದಿನಗಳ ಹಿಂದೆ ಯುವತಿ ಲವ್ ಬ್ರೇಕ್ ಅಪ್ ಮಾಡಿಕೊಂಡು, ಯುವಕನಿಗೆ ರಿಂಗ್ ವಾಪಸ್ ಕೊಟ್ಟು ಹೋಗಿದ್ದಳು. ಅದಾದಮೇಲೆ.. ಬ್ರೇಕ್ ಆಪ್ ಮಾಡಿಕೊಂಡಿದ್ದ ಯುವತಿ, ಮತ್ತೊಬ್ಬ ಯುವಕನ ಜೊತೆ ಹೊಟೇಲ್ನಲ್ಲಿ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಳು. ಈ ವಿಚಾರ ತಿಳಿದ ಮಾಜಿ ಪ್ರಿಯಕರ ತ್ರಿಶೂಲ್, ಆತನ ಗೆಳೆಯರೊಂದಿಗೆ ಹೋಟೆಲ್ಗೆ ನುಗ್ಗಿ, ಮಾಜಿ ಪ್ರೇಯಸಿಯ ಜೊತೆಗಿದ್ದ ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು.
ಪರಸ್ತ್ರೀ ಜೊತೆ ಗಂಡನನ್ನು ಕಂಡು ಚಾಕುವಿನಿಂದ ಇರಿದ ಹೆಂಡತಿ; ಕ್ಲೈಮ್ಯಾಕ್ಸ್ನಲ್ಲಿ ಸಿಕ್ತು ಬಿಗ್ ಟ್ವಿಸ್ಟ್