ರಾಯಚೂರು: ಮಂತ್ರಾಲಯ ಮಠದ ಮ್ಯಾನೇಜರ್ ದಿಢೀರ್ ಎತ್ತಂಗಡಿಗೆ ಟ್ವಿಸ್ಟ್ ಸಿಕ್ಕಿದೆ. ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಮಂತ್ರಾಲಯ ರಾಯರ ಮಠವನ್ನು ಕ್ಲೋಸ್ ಮಾಡಲಾಗಿತ್ತು. ಹೀಗಾಗಿ ಭಕ್ತರಿಗೆ ರಾಯರ ಬೃಂದಾವನ ದರ್ಶನ ಭಾಗ್ಯವಿರಲಿಲ್ಲ.
ಆದರೆ ಕಳೆದ ಒಂದು ವಾರದಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿ ದಿನಕ್ಕೊಂದು ಹೇಳಿಕೆ ಬಿಡುಗಡೆಯ ಮೂಲಕ ಗೊಂದಲ ಸೃಷ್ಟಿಸಲಾಯಿತು. ಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಿದ್ರು ಎಂಬ ಆರೋಪ ಮಠದ ಮ್ಯಾನೇಜರ್ ಶ್ರೀನಿವಾಸರಾವ್ ವಿರುದ್ಧ ಕೇಳಿ ಬಂದಿತ್ತು. ಅಲ್ಲದೆ ಕೊವಿಡ್ ನಿಯಮ ಉಲ್ಲಂಘಿಸಿ ಸಚಿವ ಈಶ್ವರಪ್ಪ ಭೇಟಿ ವೇಳೆ ರಾಯರ ಮಠ ಓಪನ್ ಮಾಡಿಸಿದ್ರು.
ಸಚಿವರಿಗೆ ಬೃಂದಾವನ ದರ್ಶನ ಮಾಡಿಸಿದ್ದರು. ಈ ವಿಚಾರವಾಗಿ ಭಾರಿ ವಿವಾದ ಉಂಟಾಗಿತ್ತು. ಇದರ ಬೆನ್ನಲ್ಲೆ ಶ್ರೀಮಠ ನಿನ್ನೆ ಮ್ಯಾನೇಜರ್ ಶ್ರೀನಿವಾಸರಾವ್ ದಿಢೀರ್ ಎತ್ತಂಗಡಿ ಮಾಡಿದೆ. ವೆಂಕಟೇಶ ಜೋಷಿಯವರನ್ನು ನೂತನ ಮ್ಯಾನೇಜರ್ ಆಗಿ ನೇಮಕ ಮಾಡಿದೆ.ಮ್ಯಾನೇಜರ್ ಶ್ರೀನಿವಾಸರಾವ್ ದಿಢೀರ್ ಎತ್ತಂಗಡಿ ಹಿಂದೆ ಇನ್ನೂ ಹಲವಾರು ಅನುಮಾನದ ಹುತ್ತ ಬೆಳೆಯುತ್ತಿದೆ ಎಂಬ ಶಂಕೆ ಕೆಲವರಲ್ಲಿ ವ್ಯಕ್ತವಾಗಿದೆ.
Published On - 7:51 am, Mon, 15 June 20