ಮದುಮಗಳ ತಂದೆ, ತಂಗಿಗೆ ಕೊರೊನಾ: ಕ್ಯಾನ್ಸಲ್ ಆಯ್ತು ಮದುವೆ

|

Updated on: Jun 10, 2020 | 2:25 PM

ಯಾದಗಿರಿ: ಮದುಮಗಳ ತಂದೆ, ತಂಗಿಗೆ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಮದುವೆ ಕ್ಯಾನ್ಸಲ್ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭೋಜನಾಯಕ ತಾಂಡಾದಲ್ಲಿ ನಡೆದಿದೆ. ಸೋಂಕಿತರು ಯಾದಗಿರಿ ತಾಲೂಕಿನ ಅಲ್ಲಿಪುರ ತಾಂಡಾದವರು. ಮೇ 31ರಂದು ಕ್ವಾರಂಟೈನ್‌ನಿಂದ ಬಂದಿದ್ದ ವಧುವಿನ ತಂದೆ ಸಾಂಸ್ಥಿಕ ಕ್ವಾರಂಟೈನ್ ಬಳಿಕ ಹೋಂ ಕ್ವಾರಂಟೈನ್‌ನಲ್ಲಿರಬೇಕಿತ್ತು. ಆದ್ರೆ ಮಗಳ ಮದುವೆಗಾಗಿ 8 ದಿನದಿಂದ ಹಲವೆಡೆ ಸುತ್ತಾಡಿದ್ದಾರೆ. ಇದೀಗ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಐಸೋಲೇಷನ್ ಮಾಡಲು ತಾಂಡಾಗೆ ಆರೋಗ್ಯ ಇಲಾಖೆಯ ಸಿಬ್ಬಂದಿ […]

ಮದುಮಗಳ ತಂದೆ, ತಂಗಿಗೆ ಕೊರೊನಾ: ಕ್ಯಾನ್ಸಲ್ ಆಯ್ತು ಮದುವೆ
Follow us on

ಯಾದಗಿರಿ: ಮದುಮಗಳ ತಂದೆ, ತಂಗಿಗೆ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಮದುವೆ ಕ್ಯಾನ್ಸಲ್ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭೋಜನಾಯಕ ತಾಂಡಾದಲ್ಲಿ ನಡೆದಿದೆ.

ಸೋಂಕಿತರು ಯಾದಗಿರಿ ತಾಲೂಕಿನ ಅಲ್ಲಿಪುರ ತಾಂಡಾದವರು. ಮೇ 31ರಂದು ಕ್ವಾರಂಟೈನ್‌ನಿಂದ ಬಂದಿದ್ದ ವಧುವಿನ ತಂದೆ ಸಾಂಸ್ಥಿಕ ಕ್ವಾರಂಟೈನ್ ಬಳಿಕ ಹೋಂ ಕ್ವಾರಂಟೈನ್‌ನಲ್ಲಿರಬೇಕಿತ್ತು. ಆದ್ರೆ ಮಗಳ ಮದುವೆಗಾಗಿ 8 ದಿನದಿಂದ ಹಲವೆಡೆ ಸುತ್ತಾಡಿದ್ದಾರೆ.

ಇದೀಗ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಐಸೋಲೇಷನ್ ಮಾಡಲು ತಾಂಡಾಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದ್ರು. ಆದ್ರೆ ಸೋಂಕಿತರು ಅಧಿಕಾರಿಗಳಿಗೆ ಸಿಗದೆ ಪರಾರಿಯಾಗಿದ್ದಾರೆ. ಕಳೆದ 3 ದಿನದಿಂದ ವಧುವಿನ ತಂದೆ ಮತ್ತು ತಂಗಿ ನಾಪತ್ತೆಯಾಗಿದ್ದಾರೆ. ಅಲ್ಲಿಪುರ ತಾಂಡಾ ನಿವಾಸಿಗಳಲ್ಲಿ ಕೊರೊನಾ ಸೋಂಕಿನ ಆತಂಕ ಶುರುವಾಗಿದೆ.

Published On - 9:24 am, Wed, 10 June 20