ಹಾವೇರಿ: ಭಾನುವಾರದ ಬಸವೇಶ್ವರನಗರ ಸಂತೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸುವ ಬದಲು ನಗರಸಭೆ ನೂತನ ಐಡಿಯಾಗೆ ಮುಂದಾಗಿದೆ. ಹೌದು, ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಪುರಸಭೆ ಕಾಂಪ್ಲೆಕ್ಸ್ನಲ್ಲಿ ಕೊರೊನಾ ಟೆಸ್ಟ್ ಮಾಡಿಸಲಾಯಿತು. ಒಂದು ವೇಳೆ, ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೇ ಅಷ್ಟೇ. ವ್ಯಕ್ತಿ ಸೀದಾ ಆಸ್ಪತ್ರೆಗೆ ಅಥವಾ ಐಸೋಲೇಷನ್ಗೆ ಶಿಫ್ಟ್!
ಹೌದು, ನಗರದಲ್ಲಿ ಮಾಸ್ಕ್ ಹಾಕದೆ ಓಡಾಡೋರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ನಗರಸಭೆ ಮತ್ತು ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ನಗರಸಭೆ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡುತ್ತಿದ್ದು ಒಂದು ವೇಳೆ ಕೊರೊನಾ ಪಾಸಿಟಿವ್ ಬಂದ್ರೆ ವ್ಯಕ್ತಿ ಹೋಂ ಐಸೋಲೇಷನ್ ಅಥವಾ ಆಸ್ಪತ್ರೆಗೆ ಶಿಫ್ಟ್ ಆಗ್ತಾನೆ. ನಗರಸಭೆಯ ಈ ಕ್ರಮದಿಂದ ಇದೀಗ ಸಾರ್ವಜನಿಕರು ಮಾಸ್ಕ್ ಧರಿಸಿ ಓಡಾಡಲು ಮುಂದಾಗಿದ್ದಾರೆ.