ಮೈಸೂರಿನಲ್ಲಿ ಮೆಡಿಕಲ್ ಶಾಪ್ ಧಗ ಧಗ, ಲಕ್ಷಾಂತರ ರೂ ಮೌಲ್ಯದ ಔಷಧ ಬೆಂಕಿಗೆ ಬಿತ್ತು
ಮೈಸೂರು: ಮೆಡಿಕಲ್ ಶಾಪ್‌ನಲ್ಲಿ ಭಾರಿ ಅಗ್ನಿಅವಘಡವಾಗಿರುವ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧ ಬೆಂಕಿಗಾಹುತಿಯಾಗಿದೆ. ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಕುವೆಂಪು ನಗರದಲ್ಲಿರುವ ಮೆಗಾ ಮೆಡಿಕಲ್ ಸ್ಟೋರ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಎರಡು ಮಹಡಿ ಕಟ್ಟಡದ ಔಷಧಿ ಮಳಿಗೆ ಸುಟ್ಟು ಹೋಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಲಕ್ಷಾಂತರ ರೂಪಾಯಿಗಳ ಔಷಧಿಗಳು ಸುಟ್ಟು ಭಸ್ಮವಾಗಿವೆ. ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಮೈಸೂರು: ಮೆಡಿಕಲ್ ಶಾಪ್‌ನಲ್ಲಿ ಭಾರಿ ಅಗ್ನಿಅವಘಡವಾಗಿರುವ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧ ಬೆಂಕಿಗಾಹುತಿಯಾಗಿದೆ.
ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಕುವೆಂಪು ನಗರದಲ್ಲಿರುವ ಮೆಗಾ ಮೆಡಿಕಲ್ ಸ್ಟೋರ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಎರಡು ಮಹಡಿ ಕಟ್ಟಡದ ಔಷಧಿ ಮಳಿಗೆ ಸುಟ್ಟು ಹೋಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಲಕ್ಷಾಂತರ ರೂಪಾಯಿಗಳ ಔಷಧಿಗಳು ಸುಟ್ಟು ಭಸ್ಮವಾಗಿವೆ. ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
Published On - 8:28 am, Sat, 20 June 20