India vs England | ಭಾರತದ ಟಾಪ್ ಕ್ರಮಾಂಕ ವಿಫಲವಾದಾಗ ಮಿಡ್ಲ್ ಆರ್ಡರ್ ಪುಟಿದೇಳಬೇಕು: ರಮೀಜ್ ರಾಜಾ

|

Updated on: Mar 17, 2021 | 11:21 PM

ತನ್ನ ಯೂಟ್ಯೂಬ್ ಚ್ಯಾನೆಲ್ ಮಾತಾಡಿರುವ ರಾಜಾ, ನಿರ್ದಿಷ್ಟವಾಗಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಒಮ್ಮೆ ಸೆಟ್ಲ್ ಆದ ನಂತರ ಪಂತ್ ಬಿಗ್ ಇನ್ನಿಂಗ್ಸ್ ಆಡಬೇಕು ಅಂತ ಹೇಳಿರುವ ಅವರು ಮಂಗಳವಾರದ ಪಂದ್ಯದಲ್ಲಿ ಪಾಂಡ್ಯ 15 ಎಸೆತಗಳಲ್ಲಿ 17 ರನ್ ಬಾರಿಸದ್ದು ಅವರ ಖ್ಯಾತಿಗೆ ತಕ್ಕ ಆಟವಲ್ಲ ಎಂದಿದ್ದಾರೆ.

India vs England | ಭಾರತದ ಟಾಪ್ ಕ್ರಮಾಂಕ ವಿಫಲವಾದಾಗ ಮಿಡ್ಲ್ ಆರ್ಡರ್ ಪುಟಿದೇಳಬೇಕು: ರಮೀಜ್ ರಾಜಾ
ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ
Follow us on

ನಾಳೆ (ಗುರುವಾರ) ಭಾರತ ಮತ್ತು ಇಂಗ್ಲೆಂಡ್​ ನಡುವೆ 5-ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯ ನಡೆಯಲಿದೆ. ಪ್ರವಾಸಿ ತಂಡ 2-1 ಅಂತರದಿಂದ ಮುನ್ನಡೆ ಸಾಧಿಸಿರುವುದರಿಂದ ಅತಿಥೇಯರು ನಾಳಿನ ಪಂದ್ಯವನ್ನು ಗೆಲ್ಲಲೇ ಬೇಕು. ಇಲ್ಲದೆ ಹೋದರೆ ಸರಣಿ ಆಂಗ್ಲರ ಪಾಲಾಗುತ್ತದೆ. ಭಾರತ ಆರಂಭ ಆಟಗಾರ ಕೆ ಎಲ್ ರಾಹುಲ್ ಅವರ ಸತತ ವೈಫಲ್ಯಗಳಿಂದ ಟೀಮ್ ಇಂಡಿಯಾ ಕೊಂಚ ಯೋಚನೆಗೊಳಗಾಗಿರುವುದು ಸತ್ಯ. ಆದರೆ ಪಾಕಿಸ್ತಾನದ ಮಾಜಿ ಆರಂಭ ಆಟಗಾರ ರಮೀಜ್ ರಾಜಾ, ಟಾಪ್​ ಆರ್ಡರ್ ಫೇಲಾದಾಗ ಮಿಡ್ಲ್ ಆರ್ಡರ ಕ್ಲಿಕ್ ಆಗಬೇಕು, ಮೇಲಿನ ಕ್ರಮಾಂಕದ ಆಟಗಾರರ ವೈಫಲ್ಯವನ್ನು ಕೆಳ ಕ್ರಮಾಂಕದ ಆಟಗಾರು ಉತ್ತಮವಾಗಿ ಆಡಿ ಸರಿದೂಗಿಸಬೇಕು ಅಂತ ಹೇಳಿದ್ದಾರೆ.

ತನ್ನ ಯೂಟ್ಯೂಬ್ ಚ್ಯಾನೆಲ್ ಮಾತಾಡಿರುವ ರಾಜಾ, ನಿರ್ದಿಷ್ಟವಾಗಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಒಮ್ಮೆ ಸೆಟ್ಲ್ ಆದ ನಂತರ ಪಂತ್ ಬಿಗ್ ಇನ್ನಿಂಗ್ಸ್ ಆಡಬೇಕು ಅಂತ ಹೇಳಿರುವ ಅವರು ಮಂಗಳವಾರದ ಪಂದ್ಯದಲ್ಲಿ ಪಾಂಡ್ಯ 15 ಎಸೆತಗಳಲ್ಲಿ 17 ರನ್ ಬಾರಿಸದ್ದು ಅವರ ಖ್ಯಾತಿಗೆ ತಕ್ಕ ಆಟವಲ್ಲ ಎಂದಿದ್ದಾರೆ.

‘ಈ ಬಗೆಯ ಆರಂಭಿಕ ಜೋಡಿಯನ್ನು ಇಂಗ್ಲೆಂಡ್ ವಿರುದ್ಧ ಆಡಿಸಿದರೆ ಅವರ ಬೌಲರ್​ಗಳು ಖಂಡಿತವಾಗಿಯೂ ಅವರನ್ನು ಬೇಗ ಔಟ್ ಮಾಡುತ್ತಾರೆ. ಆಗ ಟೀಮಿನ ಮೇಲೆ ಒತ್ತಡ ತಾನಾಗಿಯೇ ಹೆಚ್ಚುತ್ತದೆ. ಇಶಾನ್ ಕಿಷನ್ ಅವರನ್ನು ಮೂರನೇ ಕ್ರಮಾಕಂದಲ್ಲಿ ಆಡಿಸಿದಾಗ ಅವರನ್ನು ಕಟ್ಟಿಹಾಕಲು ಅತ್ಯುತ್ತಮ ಯೋಜನೆಯನ್ನು ಮಾಡಿದ ಇಂಗ್ಲೆಂಡ್ ಶಾರ್ಟ್ ಎಸೆತಗಳನ್ನು ಬೌಲ್ ಮಾಡಲಾರಂಭಿಸಿತು. ಅಲ್ಲದೆ ರಿಷಬ್ ಪಂತ್ 25 ರನ್ ಗಳಿಸಿ ಔಟಾಗುತ್ತಿದ್ದಾರೆ. ಸೆಟ್ಲ್ ಆದ ನಂತರ ಅವರು ಹಾಗೆ ಔಟಾಗುತ್ತಿರುವುದು ಟೀಮಿಗೆ ಹಾನಿಯನ್ನುಂಟು ಮಾಡುತ್ತಿದೆ,’ ಎಂದು ರಾಜಾ ಹೇಳಿದ್ದಾರೆ.

ರಮೀಜ್ ರಾಜಾ

ಹಾಗೆಯೇ, ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್​ ಸದ್ದು ಮಾಡುತ್ತಿಲ್ಲ. ಅವರನ್ನು ಕಟ್ಟಿಹಾಕುವಲ್ಲಿ ಇಂಗ್ಲೆಂಡ್ ಬೌಲರ್​ಗಳು ಯಶ ಕಾಣುತ್ತಿದ್ದಾರೆ. ಪಾಂಡ್ಯ ಫುಲ್ಲರ್ ಎಸೆತಗಳನ್ನು ಮತ್ತು ಸ್ಪಿನ್ನರ್​ಗಳನ್ನು ಚೆನ್ನಾಗಿ ಆಡುತ್ತಾರೆಂದು ಅವರಿಗೆ ಗೊತ್ತಿದೆ. ಹಾಗಾಗಿ ಪಾಂಡ್ಯಗೆ ಅವರು ಶಾರ್ಟ್ ಆಫ್ ಗುಡ್ ಲೆಂಗ್ತ್ ಎಸೆತಗಳನ್ನು ಬೌಲ್ ಮಾಡುತ್ತಿದ್ದಾರೆ. ಪಾಂಡ್ಯ ಬಿಗ್ ಹಿಟ್​ ಬಾರಿಸಿಲು ಪ್ರಯತ್ನಿಸುತ್ತಿರುವರಾದರೂ ಅವರಿಗೆ ಅದು ಸಾಧ್ಯವಾಗುತ್ತಿಲ್ಲ. 20 ಎಸೆತಗಳಲ್ಲಿ ಅವರು 17 ರನ್ ಬಾರಿಸುವುದು ಖಂಡಿತವಾಗಿಯೂ ನಮಗೆ ಸ್ವೀಕೃತವಲ್ಲ. ಸ್ವಲ್ಪ ಹೊತ್ತಿನಲ್ಲೇ ಸೆಟ್ಲ್ ಆಗಿ ಎದುರಾಳಿ ಬೌಲರ್​ಗಳನ್ನು ಬಗ್ಗು ಬಡಿಯುವಂಥ ಕ್ಷಮತೆ ಪಾಂಡ್ಯ ಅವರಲ್ಲಿದೆ. ಅವರಿಂದ ನಿರೀಕ್ಷಿತ ಪ್ರದರ್ಶನಗಳು ಬರುತ್ತಿಲ್ಲವಾದ್ದರಿಂದ ಇಡೀ ಟೀಮನ್ನು ಸುಳಿಯೊಳಗೆ ನೂಕಿದಂತಾಗಿದೆ,’ ಎಂದು ರಾಜಾ ಹೇಳಿದ್ದಾರೆ.

ಇಂಗ್ಲೆಂಡ್ 2-1ರ ಮುನ್ನಡೆ ಸಾಧಿಸಿರುವುದರಿಂದ ನಾಳೆಯೇನಾದರೂ ಅದು ಗೆದ್ದರೆ ಸರಣಿಯನ್ನು ತನ್ನದಾಗಿಸಿಕೊಳ್ಳುತ್ತದೆ. ಹಾಗಾಗಿಯೇ, ನಾಳಿನ ಪಂದ್ಯ ಭಾರತಕ್ಕೆ ಬಹಳ ಮಹತ್ವಪೂರ್ಣದ್ದಾಗಿದೆ ಮತ್ತು ನಿರ್ಣಾಯಕವೂ ಅಗಿದೆ. ಸರಣಿಯನ್ನು ಜೀವಂತವಾಗಿಡಬೇಕಾದರೆ ಭಾರತ ನಾಳೆ ಗೆಲ್ಲಲೇಬೇಕು. ಈ ಫಾರ್ಮಾಟ್​ನಲ್ಲಿ ಇಂಗ್ಲೆಂಡ್ ಬಲಿಷ್ಠ ತಂಡವಾಗಿದೆ ಎಂದು ಹೇಳುವ ರಾಜಾ, ಭಾರತ ಬ್ಯಾಟಿಂಗ್ ಜೊತೆ ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಗೆಲುವು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ

ಇದನ್ನೂ ಓದಿ: ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್​ನಲ್ಲಿ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​ಮನ್​ ಅನ್ನೋದು ನಿಜವೇ?