ಮಂಗ ಮಾಯ ಮಾಡಿಬಿಟ್ರು!

| Updated By:

Updated on: May 24, 2020 | 11:20 AM

ಕೋಲಾರ: ವಲಸೆ ಕಾರ್ಮಿಕರ ದಾಳಿಗೆ ಕ್ಷಣಾರ್ಧದಲ್ಲಿ ಸ್ನ್ಯಾಕ್ಸ್ ಪಾಕೆಟ್ಸ್ ಖಾಲಿಯಾದ ದೃಶ್ಯ ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರ ರೈಲನ್ನು ಬಂಗಾರಪೇಟೆ ರೈಲ್ವೆ ನಿಲ್ದಾಣದ ಬಳಿ ನಿಲ್ಲಿಸಲಾಯ್ತು. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಮಾರಾಟಕ್ಕೆ ತಂದಿದ್ದ ಸ್ನ್ಯಾಕ್ಸ್ ಬಾಕ್ಸ್​ಗಳ ಮೇಲೆ ವಲಸೆ ಕಾರ್ಮಿಕರು ದಾಳಿ ನಡೆಸಿದ್ರು. ಸ್ನ್ಯಾಕ್ಸ್​ಗೆ ಕೈ ಹಾಕಿ ರೈಲ್ವೆ ಪೊಲೀಸರಿಂದ ಲಾಠಿ ಏಟು ತಿಂದ್ರು. ಅನ್ನ ನೀರು ಸಿಗದ ವಲಸೆ ಕಾರ್ಮಿಕರು ಮಾರಾಟಕ್ಕೆ ತಂದಿದ್ದ […]

ಮಂಗ ಮಾಯ ಮಾಡಿಬಿಟ್ರು!
Follow us on

ಕೋಲಾರ: ವಲಸೆ ಕಾರ್ಮಿಕರ ದಾಳಿಗೆ ಕ್ಷಣಾರ್ಧದಲ್ಲಿ ಸ್ನ್ಯಾಕ್ಸ್ ಪಾಕೆಟ್ಸ್ ಖಾಲಿಯಾದ ದೃಶ್ಯ ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರಿನಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರ ರೈಲನ್ನು ಬಂಗಾರಪೇಟೆ ರೈಲ್ವೆ ನಿಲ್ದಾಣದ ಬಳಿ ನಿಲ್ಲಿಸಲಾಯ್ತು.

ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಮಾರಾಟಕ್ಕೆ ತಂದಿದ್ದ ಸ್ನ್ಯಾಕ್ಸ್ ಬಾಕ್ಸ್​ಗಳ ಮೇಲೆ ವಲಸೆ ಕಾರ್ಮಿಕರು ದಾಳಿ ನಡೆಸಿದ್ರು. ಸ್ನ್ಯಾಕ್ಸ್​ಗೆ ಕೈ ಹಾಕಿ ರೈಲ್ವೆ ಪೊಲೀಸರಿಂದ ಲಾಠಿ ಏಟು ತಿಂದ್ರು. ಅನ್ನ ನೀರು ಸಿಗದ ವಲಸೆ ಕಾರ್ಮಿಕರು ಮಾರಾಟಕ್ಕೆ ತಂದಿದ್ದ ತಿಂಡಿಯನ್ನ, ಲೇಸ್, ಕ್ರಂಚ್, ಕುರ್ ಕುರೆ ಬಾಚಿಕೊಂಡು ಪರಾರಿಯಾದ ದೃಶ್ಯ ರೈಲ್ವೆ ನಿಲ್ದಾಣದಲ್ಲಿ ಕಂಡು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

Published On - 8:04 am, Sun, 24 May 20