ತಮ್ಮ ಗೂಡು ಸೇರಲು ಮೆಜೆಸ್ಟಿಕ್​ನತ್ತ ವಲಸೆ ಕಾರ್ಮಿಕರ ಹೆಜ್ಜೆ

|

Updated on: May 04, 2020 | 7:24 AM

ಬೆಂಗಳೂರು: ವಲಸೆ ಕಾರ್ಮಿಕರನ್ನು ಉಚಿತವಾಗಿ ತಮ್ಮ ತಮ್ಮ ಗೂಡಿಗೆ ಸೇರಿಸಲು ಬಸ್​ಗಳು ರೆಡಿಯಾಗಿವೆ. ಇಂದು ಬೆಳಗ್ಗೆ7 ಗಂಟೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ನಿನ್ನೆ ಮೆಜೆಸ್ಟಿಕ್​ನಿಂದ 500 ಬಸ್​ಗಳು ಸಂಚಾರ ಮಾಡಿದ್ವು. ಒಂದು ಬಸ್​ಗೆ 30 ಜನ ಪ್ರಯಾಣಿಕರಂತೆ, 15,000 ಜನ ಪ್ರಯಾಣ ಮಾಡಿ ತಮ್ಮ ಊರುಗಳನ್ನು ಸೇರಿದ್ದಾರೆ. ಇಂದು ಕೂಡ ಉಚಿತ ಬಸ್​ ಸೇವೆ ಇದ್ದು, ಅನೇಕ ಕಾರ್ಮಿಕರು ಗಂಟು ಮೂಟೆ ಸಮೇತ ತಮ್ಮ ಊರಿಗೆ ಹೋಗಲು ಧಾವಿಸಿದ್ದಾರೆ. ಅರಮನೆ ಮೈದಾನದ ಬಳಿ […]

ತಮ್ಮ ಗೂಡು ಸೇರಲು ಮೆಜೆಸ್ಟಿಕ್​ನತ್ತ ವಲಸೆ ಕಾರ್ಮಿಕರ ಹೆಜ್ಜೆ
Follow us on

ಬೆಂಗಳೂರು: ವಲಸೆ ಕಾರ್ಮಿಕರನ್ನು ಉಚಿತವಾಗಿ ತಮ್ಮ ತಮ್ಮ ಗೂಡಿಗೆ ಸೇರಿಸಲು ಬಸ್​ಗಳು ರೆಡಿಯಾಗಿವೆ. ಇಂದು ಬೆಳಗ್ಗೆ7 ಗಂಟೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ನಿನ್ನೆ ಮೆಜೆಸ್ಟಿಕ್​ನಿಂದ 500 ಬಸ್​ಗಳು ಸಂಚಾರ ಮಾಡಿದ್ವು.

ಒಂದು ಬಸ್​ಗೆ 30 ಜನ ಪ್ರಯಾಣಿಕರಂತೆ, 15,000 ಜನ ಪ್ರಯಾಣ ಮಾಡಿ ತಮ್ಮ ಊರುಗಳನ್ನು ಸೇರಿದ್ದಾರೆ. ಇಂದು ಕೂಡ ಉಚಿತ ಬಸ್​ ಸೇವೆ ಇದ್ದು, ಅನೇಕ ಕಾರ್ಮಿಕರು ಗಂಟು ಮೂಟೆ ಸಮೇತ ತಮ್ಮ ಊರಿಗೆ ಹೋಗಲು ಧಾವಿಸಿದ್ದಾರೆ.

ಅರಮನೆ ಮೈದಾನದ ಬಳಿ ಜನರ ಆಗಮನ:
ಅರಮನೆ ಮೈದಾನದ ಬಳಿ ನೂರಾರು ಜನ ಆಗಮಿಸಿದ್ದಾರೆ. ರಾಜಸ್ಥಾನಕ್ಕೆ ಹೋಗಲು ವಿಶೇಷ ರೈಲು ವ್ಯವಸ್ಥೆ ಇದೆ. ಹೀಗಾಗಿ ಅರಮನೆ ಮೈದಾನಕ್ಕೆ ಬನ್ನಿ ಎಂದು ಜಯನಗರ ಪೊಲೀಸರು ಮಾಹಿತಿ ನೀಡಿದ ಹಿನ್ನೆಲೆ ಬೆಂಗಳೂರಿನ ಅರಮನೆ ಮೈದಾನ ಬಳಿ ಜನ ಜಮಾವಣೆಗೊಂಡಿದ್ದಾರೆ.

Published On - 7:23 am, Mon, 4 May 20