ದಾವಣಗೆರೆ: ಸಚಿವ ಜಗದೀಶ್ ಶೆಟ್ಟರ್ ಅವರ ಪುತ್ರ ಚಲಾಯಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿರುವ ಘಟನೆ ನಗರದ ಹಳೇ ಕುಂದುವಾಡ ಬಳಿಯಿರುವ NH 4 ನಲ್ಲಿ ನಡೆದಿದೆ.
ಜಗದೀಶ್ ಶೆಟ್ಟರ್ ಪುತ್ರ ಪ್ರಶಾಂತ್ ಶೆಟ್ಟರ್ ಮತ್ತು ಪ್ರಶಾಂತ್ ಪತ್ನಿ ಅಂಚಲ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಡೊಡ್ಡ ಅನಾಹುತದಿಂದ ಪಾರಾದಂತಾಗಿದೆ. NH 4ನ ಡಿವೈಡರ್ ಬಳಿ KA 05 AR 6577 ನಂಬರ್ ಲಾರಿ ಹಾಗೂ ಶೆಟ್ಟರ್ರ KA 03 NE 8 ನಂಬರ್ನ ಲ್ಯಾಂಡ್ ರೋವರ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಹೈಟೆಕ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ದಾವಣಗೆರೆಯಿಂದ ತಮ್ಮ ಹುಬ್ಬಳ್ಳಿ ನಿವಾಸಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಿಷಯ ತಿಳಿದ ಕೂಡಲೇ ಸ್ಥಳಾಕ್ಕಾಗಮಿಸಿದ ದಕ್ಷಿಣ ಸಂಚಾರ ಪೊಲೀಸ್ ಠಾಣೆ PSI ಕಿರಣ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Published On - 5:11 pm, Tue, 10 November 20