
ಚಿಕ್ಕಬಳ್ಳಾಪುರ: ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದ ಹಿನ್ನೆಲೆಯಿಂದಾಗಿ, ಚಿಕ್ಕಬಳ್ಳಾಪುರ KRDLನ AEE ಮುನೀರ್ ಅವರನ್ನು ಅಮಾನತು ಮಾಡುವಂತೆ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಈ ಸಂಬಂಧ ಜಿಲ್ಲಾಧಿಕಾರಿ ಲತಾ ಅವರ ಜೊತೆ ಮಾತನಾಡಿದ್ದು, ಮುನೀರ್ ಅಮಾನತಿಗೆ ಸೂಚಿಸಿದ್ದಾರೆ. ಈ ಮಧ್ಯೆ, ನನ್ನ ಅಮಾನತಿಗೆ ಸೂಚನೆ ನೀಡದಂತೆ AEE ಮುನೀರ್, ಸಚಿವ ಡಾ. ಸುಧಾಕರ್ ಬಳಿ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.