‘ಜಾನುವಾರು ಸಾಕಲು ಆಗಲ್ಲ ಅಂದ್ರೆ BJP ಕಚೇರಿಗೆ, ನನ್ನ ಮನೆ ಬಳಿ ತಂದು ಬಿಡಿ.. ನಾನು ಸಾಕುತ್ತೇನೆ’

ಜಾನುವಾರು ಸಾಕಲು ಆಗಲ್ಲ ಅಂದ್ರೆ ನಾನು ಸಾಕುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬಿಜೆಪಿ ಕಚೇರಿ ಬಳಿ ತಂದು ಬಿಡಿ ಇಲ್ಲಾ ನನ್ನ ಮನೆಗೆ ತಂದು ಬಿಡಿ. ನಾವು ಗಂಡು ಕರು, ವಯಸ್ಸಾದ ಹಸುಗಳನ್ನು ಸಾಕುತ್ತೇವೆ ಎಂದು ಅಶೋಕ್​ ಹೇಳಿದ್ದಾರೆ.

‘ಜಾನುವಾರು ಸಾಕಲು ಆಗಲ್ಲ ಅಂದ್ರೆ BJP ಕಚೇರಿಗೆ, ನನ್ನ ಮನೆ ಬಳಿ ತಂದು ಬಿಡಿ.. ನಾನು ಸಾಕುತ್ತೇನೆ’
‘ಜಾನುವಾರು ಸಾಕಲು ಆಗಲ್ಲ ಅಂದ್ರೆ BJP ಕಚೇರಿಗೆ, ನನ್ನ ಮನೆ ಬಳಿ ತಂದು ಬಿಡಿ.. ನಾನು ಸಾಕುತ್ತೇನೆ’

Updated on: Dec 11, 2020 | 2:12 PM

ಬೆಂಗಳೂರು: ಜಾನುವಾರು ಸಾಕಲು ಆಗಲ್ಲ ಅಂದ್ರೆ ನಾನು ಸಾಕುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬಿಜೆಪಿ ಕಚೇರಿ ಬಳಿ ತಂದು ಬಿಡಿ ಇಲ್ಲಾ ನನ್ನ ಮನೆಗೆ ತಂದು ಬಿಡಿ. ನಾವು ಗಂಡು ಕರು, ವಯಸ್ಸಾದ ಹಸುಗಳನ್ನು ಸಾಕುತ್ತೇವೆ. ಜೊತೆಗೆ, ನಿಮ್ಮ ಹಿರಿಯರನ್ನು ಕೂಡ ಸಾಕುತ್ತೇವೆ, ಕಳುಹಿಸಿಕೊಡಿ ಎಂದು ಅಶೋಕ್​ ಹೇಳಿದ್ದಾರೆ.

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಿದ್ದಾರೆ’
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಿದ್ದಾರೆ. ಗೋವುಗಳನ್ನ ಸಾಕಲಾಗದಿದ್ದರೆ ಗೋ ಶಾಲೆಗೆ ತಂದು ಬಿಡಿ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

‘ತುರ್ತು ಪರಿಸ್ಥಿತಿಯನ್ನು ತಂದವರು ಕಾಂಗ್ರೆಸ್‌ನವರು’
ತುರ್ತು ಪರಿಸ್ಥಿತಿಯನ್ನು ತಂದವರು ಕಾಂಗ್ರೆಸ್‌ನವರು. ಅವರಿಂದ ನಾವು ಪಾಠ ಕಲಿಯವು ಅವಶ್ಯಕತೆ ಇಲ್ಲ ಎಂದು ಕಂದಾಯ ಸಚಿವ R.ಅಶೋಕ್ ಹೇಳಿದರು.

ಪರಿಷತ್‌ನಲ್ಲಿ ನೀವು ಏನು ಮಾಡ್ತೀರಾ ಎಂದು ಗೊತ್ತಿತ್ತು. ನಾವೇನು ಗುಲ್ಡುಗಳಲ್ಲ, ನಾವೂ ರಾಜಕೀಯ ಚಾಣಾಕ್ಷರೇ. ಚಾಣಾಕ್ಷರಾಗಿರುವುದಕ್ಕೆ ನಾವು ಸರ್ಕಾರ ಮಾಡಿರೋದು. ಗೋಹತ್ಯೆ ನಿಷೇಧ ತಿದ್ದುಪಡಿ ಬಿಲ್ ಜಾರಿ ಮಾಡುತ್ತೇವೆ. ಅದನ್ನು ಹೇಗೆ ಜಾರಿ ಮಾಡಬೇಕು ಎಂದು ನಮಗೆ ಗೊತ್ತು ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದರು.

‘ಉಳುವವನೇ ಭೂಮಿ ಒಡೆಯ ಕಾಯ್ದೆ ಬದಲಿಸಿಲ್ಲ’
ದಲಿತರ ಜಮೀನು ದಲಿತರಿಗೆ ಮಾತ್ರ ಮಾರಬೇಕು. ಸರ್ಕಾರದ ಅನುಮತಿ ಪಡೆದೇ ಖರೀದಿ ಮಾಡಬೇಕು. ಉಳುವವನೇ ಭೂಮಿ ಒಡೆಯ ಕಾಯ್ದೆ ಬದಲಿಸಿಲ್ಲ. ಸಿದ್ದರಾಮಯ್ಯ ದಾರಿ ತಪ್ಪಿಸುವ ಕೆಲಸ ಮಾಡೋದು ಬೇಡ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದರು. ಮಧ್ಯವರ್ತಿಗಳು ಜಮೀನು ಲೂಟಿ ಮಾಡುತ್ತಿದ್ದರು. ಈಗ ರೈತರೇ ತಮ್ಮ ಜಮೀನು ಮಾರಾಟ ಮಾಡಬಹುದು‌. ರೈತನಿಗೆ ಈಗ ಸಂಪೂರ್ಣ ಅಧಿಕಾರ ಕೊಡಲಾಗಿದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದರು

ಭೂಸುಧಾರಣಾ ತಿದ್ದುಪಡಿ ವಿಧೇಯಕ ಜಾರಿ ವಿಚಾರವಾಗಿ ರಾಜ್ಯದಲ್ಲಿ 1,76,189 ಎಕರೆ ಜಾಗದ ವಿಚಾರದಲ್ಲಿ ಕೇಸ್, ಸುಮಾರು 83 ಸಾವಿರ ಪ್ರಕರಣಗಳು ದಾಖಲಾಗಿದ್ದವು. ಆದರೆ ಯಾವುದೇ ಪ್ರಕರಣಗಳನ್ನು ಇತ್ಯರ್ಥ ಮಾಡಿಲ್ಲ. ಕಾಂಗ್ರೆಸ್ ಕಾಯ್ದೆಯನ್ನು ಸರಿಯಾಗಿ ಜಾರಿಗೆ ತಂದಿರಲಿಲ್ಲ ಎಂದು ಸಹ ಹೇಳಿದರು.

ರಾಜ್ಯದ 11 ಲಕ್ಷ 79 ಸಾವಿರ ಹೆಕ್ಟೇರ್‌ನಲ್ಲಿ ಕೃಷಿ ಮಾಡ್ತಿಲ್ಲ. ನಾವು ಬೇರೆ ರಾಜ್ಯದಂತೆ ರಫ್ತು ಮಾಡುವ ಕೆಲಸ ಮಾಡ್ತಿಲ್ಲ. ಹಳ್ಳಿ ಕಡೆಗೆ ಬನ್ನಿ ಅನ್ನೋ ಸಂದೇಶವನ್ನು ಕೊಡುತ್ತಿದ್ದೇವೆ. ವಿದ್ಯಾವಂತರು ಕೃಷಿಗೆ ಬರಬೇಕು ಅನ್ನೋದು ನಮ್ಮ ಆಶಯ. ಕಾಶ್ಮೀರದಲ್ಲಿ ಜಮೀನು ತೆಗೆದುಕೊಳ್ಳಬಹುದು. ಆದ್ರೆ ನಮ್ಮಲ್ಲಿ ಮಾತ್ರ ನಾವು ನಿರ್ಬಂಧ ಹಾಕುತ್ತಿದ್ದೇವೆ. ಕಾಂಗ್ರೆಸ್ ಇದ್ದಾಗ ಏಕೆ 79AB ಜಾರಿ ಮಾಡಲಿಲ್ಲ? ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳಲ್ಲಿ ಜಾರಿಗೆ ತರಲಿ. ಕಾಂಗ್ರೆಸ್‌ಗೆ ತಾಕತ್ತಿದ್ದರೆ 79AB ಜಾರಿ ಮಾಡಲಿ. ಬಿ.ಡಿ.ಜತ್ತಿ ತಂದ ಕಾಯ್ದೆಯಲ್ಲಿ 79AB ಇರಲಿಲ್ಲ. ಇದನ್ನು ಬದಲಾವಣೆ ಮಾಡಿದ್ದು ಕಾಂಗ್ರೆಸ್‌ನವರೇ. ಈ ಕಾಯ್ದೆಗೆ 3 ಬಾರಿ ಬದಲಾವಣೆ ಮಾಡಿದ್ದು ಕಾಂಗ್ರೆಸ್ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಗೋಹತ್ಯೆ ನಿಷೇಧ ಕಾಯ್ದೆಗೆ ಹಿನ್ನಡೆ: ಕುತೂಹಲ ಮೂಡಿಸಿದ ಅಶೋಕ್ ಹೇಳಿಕೆ

Published On - 1:56 pm, Fri, 11 December 20

KUSHAL V
Loading...
Unable to load recommendations.
Follow Us