ವಿಡಿಯೋ ಮಾಡ್ತೀಯಾ.. ಪುಡಿ ರೌಡಿಗಳ ಪುಂಡಾಟಕ್ಕೆ ಕಾರು ಭಸ್ಮ

ಆನೇಕಲ್: ಪುಡಿ ರೌಡಿಗಳ ಪುಂಡಾಟದಿಂದ ಕಾರು ಭಸ್ಮವಾಗಿರುವ ಘಟನೆ ದೊಡ್ಡಕಮ್ಮನಹಳ್ಳಿ ಬಳಿ ನಡೆದಿದೆ. ನಿನ್ನೆ ಮಧ್ಯೆ ರಾತ್ರಿ ಪುಡಿರೌಡಿಗಳು ಕಾರಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ನಿನ್ನೆ ಪುಡಿ ರೌಡಿಗಳು ಕಳ್ಳತನಕ್ಕೆ ಬಂದಿದ್ದರು. ಈ ವೇಳೆ ನಾರಾಯಣಪ್ಪ ಎಂಬುವವರು ಕಳ್ಳತನ ಮಾಡುವುದನ್ನು ವಿಡಿಯೋ ಮಾಡುತ್ತಿದ್ದರು. ಇದನ್ನು ತಿಳಿದ ಕಳ್ಳರು ವಿಡಿಯೋ ಮಾಡ್ತೀಯಾ ಎಂದು ನಾರಾಯಣಪ್ಪನವರ ಮೇಲೆ ಹಲ್ಲೆಗೆ ಯತ್ನಿಸಿ ಮನೆಯ ಮುಂದೆ ನಿಂತಿದ್ದ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ನಾರಾಯಣಪ್ಪ ಎಂಬುವರಿಗೆ ಸೇರಿದ ಕಾರು ಸುಟ್ಟು ಭಸ್ಮವಾಗಿದೆ. […]

ವಿಡಿಯೋ ಮಾಡ್ತೀಯಾ.. ಪುಡಿ ರೌಡಿಗಳ ಪುಂಡಾಟಕ್ಕೆ ಕಾರು ಭಸ್ಮ

Updated on: Jun 05, 2020 | 3:15 PM

ಆನೇಕಲ್: ಪುಡಿ ರೌಡಿಗಳ ಪುಂಡಾಟದಿಂದ ಕಾರು ಭಸ್ಮವಾಗಿರುವ ಘಟನೆ ದೊಡ್ಡಕಮ್ಮನಹಳ್ಳಿ ಬಳಿ ನಡೆದಿದೆ. ನಿನ್ನೆ ಮಧ್ಯೆ ರಾತ್ರಿ ಪುಡಿರೌಡಿಗಳು ಕಾರಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ.

ನಿನ್ನೆ ಪುಡಿ ರೌಡಿಗಳು ಕಳ್ಳತನಕ್ಕೆ ಬಂದಿದ್ದರು. ಈ ವೇಳೆ ನಾರಾಯಣಪ್ಪ ಎಂಬುವವರು ಕಳ್ಳತನ ಮಾಡುವುದನ್ನು ವಿಡಿಯೋ ಮಾಡುತ್ತಿದ್ದರು. ಇದನ್ನು ತಿಳಿದ ಕಳ್ಳರು ವಿಡಿಯೋ ಮಾಡ್ತೀಯಾ ಎಂದು ನಾರಾಯಣಪ್ಪನವರ ಮೇಲೆ ಹಲ್ಲೆಗೆ ಯತ್ನಿಸಿ ಮನೆಯ ಮುಂದೆ ನಿಂತಿದ್ದ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ನಾರಾಯಣಪ್ಪ ಎಂಬುವರಿಗೆ ಸೇರಿದ ಕಾರು ಸುಟ್ಟು ಭಸ್ಮವಾಗಿದೆ. ಮಾದು ಅಲಿಯಾಸ್ ಮಾದೇಶ, ಶ್ರೀಕಾಂತ್, ಅಪ್ಪಿ ಎಂಬುವವರೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 9:48 am, Fri, 5 June 20