ಲ್ಯಾಪ್​ಟಾಪ್​ಗಾಗಿ ಕಳ್ಳತನ ಮಾಡಿ, ಭಿಕ್ಷೆಯಾದ್ರೂ ಬೇಡಿ: HOD ಉಡಾಫೆಗೆ ವಿದ್ಯಾರ್ಥಿಗಳ ಆಕ್ರೋಶ

ಬೆಂಗಳೂರು: ಈ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಗ್ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಮುಂದಿನ ವಾರದರೊಳಗೆ ಲ್ಯಾಪ್ ಟಾಪ್ ತರಲೇ ಬೇಕು. ಇಲ್ಲ ಅಂದ್ರೆ ನೋ ಎಕ್ಸಾಂ ಎಂದು ವಿದ್ಯಾರ್ಥಿಗಳಿಗೆ MVJ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ HOD ಆರ್ಡರ್ ಮಾಡಿದ್ದಾರೆ. ಕಷ್ಟ ಹೇಳಿಕೊಂಡ ವಿದ್ಯಾರ್ಥಿಗಳಿಗೆ ಪ್ರೊಫೆಸರ್ ಸಲಹೆ ನೀಡೋದು ಬಿಟ್ಟು ಉಡಾಫೆಯಾಗಿ ವರ್ತಿಸಿದ್ದಾರೆ. ಲ್ಯಾಪ್​ಟಾಪ್​ ತರ್ಲೇ ಬೇಕು ಇಲ್ಲ ಅಂದ್ರೆ ಪರೀಕ್ಷೆ ಮಿಸ್ ಆನ್​ಲೈನ್ ಕ್ಲಾಸ್ ವೇಳೆ ಎಂವಿಜೆ ಕಾಲೇಜು ಹೆಚ್‌ಒಡಿ ಪ್ರೊ.ಮುರಳೀಧರ್ ವಿದ್ಯಾರ್ಥಿಗಳು ಕಡ್ಡಾಯವಾಗಿ ಲ್ಯಾಪ್‌ಟಾಪ್ […]

ಲ್ಯಾಪ್​ಟಾಪ್​ಗಾಗಿ ಕಳ್ಳತನ ಮಾಡಿ, ಭಿಕ್ಷೆಯಾದ್ರೂ ಬೇಡಿ:  HOD ಉಡಾಫೆಗೆ ವಿದ್ಯಾರ್ಥಿಗಳ ಆಕ್ರೋಶ
Follow us
ಆಯೇಷಾ ಬಾನು
|

Updated on:Jun 05, 2020 | 3:16 PM

ಬೆಂಗಳೂರು: ಈ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಗ್ ಟೆನ್ಷನ್ ಶುರುವಾಗಿದೆ. ಯಾಕಂದ್ರೆ ಮುಂದಿನ ವಾರದರೊಳಗೆ ಲ್ಯಾಪ್ ಟಾಪ್ ತರಲೇ ಬೇಕು. ಇಲ್ಲ ಅಂದ್ರೆ ನೋ ಎಕ್ಸಾಂ ಎಂದು ವಿದ್ಯಾರ್ಥಿಗಳಿಗೆ MVJ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ HOD ಆರ್ಡರ್ ಮಾಡಿದ್ದಾರೆ. ಕಷ್ಟ ಹೇಳಿಕೊಂಡ ವಿದ್ಯಾರ್ಥಿಗಳಿಗೆ ಪ್ರೊಫೆಸರ್ ಸಲಹೆ ನೀಡೋದು ಬಿಟ್ಟು ಉಡಾಫೆಯಾಗಿ ವರ್ತಿಸಿದ್ದಾರೆ. ಲ್ಯಾಪ್​ಟಾಪ್​ ತರ್ಲೇ ಬೇಕು ಇಲ್ಲ ಅಂದ್ರೆ ಪರೀಕ್ಷೆ ಮಿಸ್ ಆನ್​ಲೈನ್ ಕ್ಲಾಸ್ ವೇಳೆ ಎಂವಿಜೆ ಕಾಲೇಜು ಹೆಚ್‌ಒಡಿ ಪ್ರೊ.ಮುರಳೀಧರ್ ವಿದ್ಯಾರ್ಥಿಗಳು ಕಡ್ಡಾಯವಾಗಿ ಲ್ಯಾಪ್‌ಟಾಪ್ ತರಲೇಬೇಕು ಎಂದು ಆರ್ಡರ್ ಮಾಡಿದ್ದಾರೆ. ಮುಂದಿನ ವಾರದೊಳಗೆ ಎಲ್ಲರೂ ಲ್ಯಾಪ್‌ಟಾಪ್ ತರಬೇಕು. ಮುಂದಿನ ವಾರದಲ್ಲಿ ಇಂಟರ್ನಲ್ ಪರೀಕ್ಷೆಯಿದೆ. ಇಲ್ಲದಿದ್ದರೆ ಪರೀಕ್ಷೆ ಮಿಸ್ ಮಾಡ್ಕೋತಿರಾ. ಲ್ಯಾಪ್‌ಟಾಪ್‌ನಲ್ಲಿ ಸಾಫ್ಟ್‌ವೇರ್‌ ಬಳಸಿ ಪರೀಕ್ಷೆ ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಆದರೆ ಹೆಚ್‌ಒಡಿಯ ಸೂಚನೆಗೆ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಲ್ಯಾಪ್​ಟಾಪ್​ಗಾಗಿ ಕಳ್ಳತನವಾದ್ರೂ ಮಾಡಿ, ಭಿಕ್ಷೆಯಾದ್ರೂ ಬೇಡಿ ಲ್ಯಾಪ್​ಟಾಪ್ ತರಬೇಕು ಎಂದು ಹೆಚ್‌ಒಡಿ ಆರ್ಡರ್ ಮಾಡಿದಾಗ ಕೆಲ ವಿದ್ಯಾರ್ಥಿಗಳು ಲ್ಯಾಪ್​ಟಾಪ್ ಕೊಂಡುಕೊಳ್ಳಲು ನಮ್ಮ ಬಳಿ ಹಣ ಇಲ್ಲ ಸಾರ್ ಎಂದಿದ್ದಾರೆ. ಇದಕ್ಕೆ ಹೆಚ್‌ಒಡಿ ಊಟ ಮಾಡೋಕೆ, ತಿಂಡಿ ತಿನ್ನೋಕೆ, ಸಿನಿಮಾ ನೋಡೋಕೆ ಹಣ ಇರುತ್ತೆ, ಲ್ಯಾಪ್​ಟಾಪ್ ತಗೊಳ್ಳೋಕೆ ಹಣ ಇಲ್ವಾ’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಲ್ಯಾಪ್​ಟಾಪ್​ಗಾಗಿ ಕಳ್ಳತನವಾದ್ರೂ ಮಾಡಿ, ಭಿಕ್ಷೆಯಾದ್ರೂ ಬೇಡಿ, ಖರೀದಿಯಾದ್ರೂ ಮಾಡಿ ಆದ್ರೆ ಲ್ಯಾಪ್​ಟಾಪ್ ತರಲೇ ಬೇಕು ಎಂದು ಹೇಳಿದ್ದಾರೆ. ಕಷ್ಟ ಹೇಳಿಕೊಂಡ ಹಳ್ಳಿ ವಿದ್ಯಾರ್ಥಿಗಳ ಜೊತೆ ಉಪನ್ಯಾಸಕನ ಉಡಾಫೆ ಮಾತಿಗೆ ವಿರೋಧ ವ್ಯಕ್ತವಾಗಿದೆ.

Published On - 11:09 am, Fri, 5 June 20

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ