
ಬೆಂಗಳೂರು: ರಾಜಧಾನಿಯಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಮನೆಯ ಟೆರೇಸ್ನಲ್ಲಿ ಪಾಟ್ಗಳಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ಹೊಲ, ಗದ್ದೆಗಳಲ್ಲಿ ಗಾಂಜಾ ಬೆಳೆ ಬೆಳೆದ್ರೆ ಸಿಕ್ಕಿಬೀಳುತ್ತೇವೆ ಎಂದು ಗಾಂಜಾ, ಡ್ರಗ್ಸ್ಗೆ ಎಂಬಿಎ, ಇಂಜಿನಿಯರಿಂಗ್, ಬಿಬಿಎಂ, ಬಿಸಿಎ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಮನೆಯ ಟೆರೇಸ್ನಲ್ಲಿ ಪಾಟ್ಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆಯಂತೆ. ಡ್ರಗ್ಸ್ಗೆ ಪ್ರತ್ಯೇಕ ಕೋಡ್ ವರ್ಡ್ ಬಳಕೆ ಮಾಡಿ ಮಾರಾಟ ಮಾಡಲಾಗುತ್ತಿದೆಯಂತೆ.
ಗಾಂಜಾಗೆ ವೀಡ್, ಎಂಡಿಎಂಎಗೆ ಮಿಯಾಂವ್, ಪಿಲ್, ಕೊಕೇನ್ಗೆ ಶುಗರ್, ಚಾರ್ಲಿ ಎಂದು ಕೋಡ್ ವರ್ಡ್ಗಳನ್ನು ಬಳಸಿಕೊಂಡು ದಂಧೆ ನಡೆಸಲಾಗುತ್ತಿದೆ, ಕೋಡ್ವರ್ಡ್ ಬಳಸುವುದರಿಂದ ಸಾಮಾನ್ಯರಿಗೆ ಇದರ ಬಗ್ಗೆ ಗೊತ್ತಾಗುತ್ತಿರಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಕೋಡ್ ವರ್ಡ್ಗಳನ್ನು ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ
ಬೆಂಗಳೂರಿನಲ್ಲಿ 250 KG ಗಾಂಜಾ ಜಪ್ತಿ, ಕಬಾಬ್ ಅಂಗಡಿ ನಡೆಸುವವನೂ ಪೆಡ್ಲರ್ ಆಗಿದ್ದಾನೆ!
Published On - 2:36 pm, Mon, 7 September 20