ಬೆಂಗಳೂರಿನಲ್ಲಿ 250 KG ಗಾಂಜಾ ಜಪ್ತಿ, ಕಬಾಬ್ ಅಂಗಡಿ ನಡೆಸುವವನೂ ಪೆಡ್ಲರ್ ಆಗಿದ್ದಾನೆ!

  • TV9 Web Team
  • Published On - 14:50 PM, 7 Sep 2020
ಬೆಂಗಳೂರಿನಲ್ಲಿ 250 KG ಗಾಂಜಾ ಜಪ್ತಿ, ಕಬಾಬ್ ಅಂಗಡಿ ನಡೆಸುವವನೂ ಪೆಡ್ಲರ್ ಆಗಿದ್ದಾನೆ!
ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​

ಬೆಂಗಳೂರು: ರಾಜಧಾನಿಯಲ್ಲಿ ಗಾಂಜಾ ಮತ್ತು ಹೆಚ್ಚಾಗುತ್ತಿದ್ದಂತೆ ಫೀಲ್ಡಿಗಿಳಿದ ಪೊಲೀಸರು 250 ಕೆಜಿಗೂ ಹೆಚ್ಚು ಗಾಂಜಾ ಜಪ್ತಿ ಮಾಡಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತರು ಮುರುಗನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪರಪ್ಪನ ಅಗ್ರಹಾರ ಪೊಲೀಸರಿಂದ 150 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಕಬಾಬ್ ಅಂಗಡಿ ನಡೆಸುವವನ ಜತೆ ಪೆಡ್ಲರ್ ಆಗಿದ್ದ ಪೊಲೀಸರೊಬ್ಬರ ಮಗ ಕೂಡ ಇದರಲ್ಲಿ ಪೆಡ್ಲರ್ ಆಗಿದ್ದ. ಗ್ರೌಂಡ್ ಲೆವೆಲ್‌ನಲ್ಲಿ ಆಗಬಹುದಾಗಿದ್ದ ಸಮಸ್ಯೆಯನ್ನು ತಡೆದಿದ್ದಾರೆ ಎಂದರು.

ಮೊಹಮ್ಮದ್ ಯಾಕೂಬ್ ಡಾರ್ಕ್ ನೆಟ್‌ನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಬೆಂಗಳೂರು ಉತ್ತರ ಭಾಗದ ಕಾಲೇಜುಗಳ ಬಳಿ ಹ್ಯಾಶಿಶ್ ಆಯಿಲ್, MDMA ಮಾತ್ರೆ ಮಾರಾಟ ಮಾಡ್ತಿದ್ದ. ಕಾಲೇಜ್ ಡ್ರಾಪೌಟ್ ಆಗಿ ಪೆಡ್ಲರ್ ಆಗಿದ್ದ. ಯಾಕೂಬ್, ಖತಾರ್‌ನಿಂದಲೂ ಸಂಪರ್ಕ ಹೊಂದಿದ್ದ. ನಾರ್ಕೋಟಿಕ್ ಡ್ರಗ್ಸ್ ಹಿಡಿದು ಒಳ್ಳೆ ಕೆಲಸ ಮಾಡಿದ್ದಾರೆ. ಡ್ರಗ್ಸ್ ಹಾವಳಿ ತಡೆಯುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಪೊಲೀಸರನ್ನು ಹೊಗಳಿದ್ದಾರೆ.

ಇದನ್ನೂ ಓದಿ
ಮನೆಗಳ ಟೆರೇಸ್ ಮೇಲೆ.. ವೀಡ್, ಮಿಯಾಂವ್, ಪಿಲ್, ಚಾರ್ಲಿಗಳ ಕಾರುಬಾರು! ಏನಿದು?

https://www.facebook.com/BlrCityPolice/posts/3625907074110696