AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಯಕಾರಕ ಪರಮೇಶ್ವರ ಭಿಕ್ಷಾಟನೆ ಮಾಡಿದ್ದು ಯಾಕೆ?

ಕೆಲ ಆಧ್ಯಾತ್ಮ ಗ್ರಂಥಗಳ ಪ್ರಕಾರ, ದಕ್ಷ ಯಜ್ಞವಾದ ನಂತರ, ಪತಿಯನ್ನು ಅವಮಾನಿಸಿದನೆಂದು ಯಜ್ಞಕುಂಡಕ್ಕೆ ಬಿದ್ದು ತನ್ನ ಜೀವವನ್ನು ಕಳೆದುಕೊಂಡ ನಂತರ ಸತಿದೇವಿ ಪಾರ್ವತಿಯಾಗಿ ಜನಿಸ್ತಾಳೆ. ಬೆಳೆದು ನಿಂತ ನಂತರ ಶಿವನನ್ನು ವಿವಾಹವಾಗಬೇಕೆಂದು ಬಯಸುತ್ತಾಳೆ. ಆ ಸಮಯದಲ್ಲಿ ಪರಶಿವನು ಹಿಮಾಲಯದಲ್ಲಿ ಘೋರ ತಪಸ್ಸನ್ನು ಮಾಡುತ್ತಿರುತ್ತಾನೆ. ಹಿಮಾಲಯದಲ್ಲಿ ಘೋರತಪೋನಿರತನಾಗಿದ್ದಾನೆಂದು ತಿಳಿದ ಪಾರ್ವತಿಯು, ಶಿವನನ್ನು ಭಕ್ತಿಯಿಂದ ಆರಾಧಿಸ್ತಾಳೆ. ಪಾರ್ವತಿಯ ಮಹಾಭಕ್ತಿಗೂ ಶಿವನ ಮನಸು ಕರಗುವುದಿಲ್ಲ. ತಪಸ್ಸಿನಿಂದ ಮೇಲೇಳುವುದಿಲ್ಲ. ಈ ಸಮಯದಲ್ಲಿ ಮನ್ಮಥನು ಶಿವನ ಮೇಲೆ ಬಾಣಪ್ರಯೋಗಿಸ್ತಾನೆ. ಮನ್ಮಥನು ಶಿವನ ಮೇಲೆ ಬಾಣ […]

ಲಯಕಾರಕ ಪರಮೇಶ್ವರ ಭಿಕ್ಷಾಟನೆ ಮಾಡಿದ್ದು ಯಾಕೆ?
ಆಯೇಷಾ ಬಾನು
|

Updated on:Nov 23, 2020 | 11:45 AM

Share

ಕೆಲ ಆಧ್ಯಾತ್ಮ ಗ್ರಂಥಗಳ ಪ್ರಕಾರ, ದಕ್ಷ ಯಜ್ಞವಾದ ನಂತರ, ಪತಿಯನ್ನು ಅವಮಾನಿಸಿದನೆಂದು ಯಜ್ಞಕುಂಡಕ್ಕೆ ಬಿದ್ದು ತನ್ನ ಜೀವವನ್ನು ಕಳೆದುಕೊಂಡ ನಂತರ ಸತಿದೇವಿ ಪಾರ್ವತಿಯಾಗಿ ಜನಿಸ್ತಾಳೆ. ಬೆಳೆದು ನಿಂತ ನಂತರ ಶಿವನನ್ನು ವಿವಾಹವಾಗಬೇಕೆಂದು ಬಯಸುತ್ತಾಳೆ.

ಆ ಸಮಯದಲ್ಲಿ ಪರಶಿವನು ಹಿಮಾಲಯದಲ್ಲಿ ಘೋರ ತಪಸ್ಸನ್ನು ಮಾಡುತ್ತಿರುತ್ತಾನೆ. ಹಿಮಾಲಯದಲ್ಲಿ ಘೋರತಪೋನಿರತನಾಗಿದ್ದಾನೆಂದು ತಿಳಿದ ಪಾರ್ವತಿಯು, ಶಿವನನ್ನು ಭಕ್ತಿಯಿಂದ ಆರಾಧಿಸ್ತಾಳೆ. ಪಾರ್ವತಿಯ ಮಹಾಭಕ್ತಿಗೂ ಶಿವನ ಮನಸು ಕರಗುವುದಿಲ್ಲ. ತಪಸ್ಸಿನಿಂದ ಮೇಲೇಳುವುದಿಲ್ಲ. ಈ ಸಮಯದಲ್ಲಿ ಮನ್ಮಥನು ಶಿವನ ಮೇಲೆ ಬಾಣಪ್ರಯೋಗಿಸ್ತಾನೆ. ಮನ್ಮಥನು ಶಿವನ ಮೇಲೆ ಬಾಣ ಪ್ರಯೋಗಿಸಿದ ನಂತರ ತಪಸ್ಸಿನಲ್ಲಿದ್ದ ಶಿವನು ಬಹಳಷ್ಟು ಕುಪಿತನಾಗ್ತಾನೆ. ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಭಸ್ಮ ಮಾಡ್ತಾನೆ.

ಮನ್ಮಥನನ್ನು ಭಸ್ಮ ಮಾಡಿದ ನಂತರ ಶಿವನು ಮತ್ತೊಂದು ಪ್ರದೇಶಕ್ಕೆ ಹೋಗಿ ತಪಸ್ಸು ಮಾಡಲು ನಿರ್ಧರಿಸಿ, ಪಯಣವನ್ನು ಬೆಳೆಸ್ತಾನೆ. ಭಿಕ್ಷಾಟನೆ ಮಾಡುತ್ತಾ, ತಪಸ್ಸಿಗಾಗಿ ಸೂಕ್ತವಾದ ಸ್ಥಳವನ್ನು ಹುಡುಕುತ್ತಾ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೆಜ್ಜೆಗಳನ್ನಾಕುತ್ತಿರುತ್ತಾನೆ ಶಿವಪರಮಾತ್ಮ. ಶಿವನ ಧ್ಯಾನದಲ್ಲಿ, ಶಿವನ ಪ್ರೇಮದಲ್ಲಿ ಮುಳುಗಿ ಹೋದ ಪಾರ್ವತಿದೇವಿಗೆ ಇನ್ನೂ ಶಿವದರ್ಶನ ಆಗಲಿಲ್ಲವಲ್ಲಾ ಎಂಬ ನೋವು ಕಾಡಲು ಶುರುವಾಗುತ್ತೆ. ಏನೂ ತೋಚದಂತಹ ಸ್ಥಿತಿ ಎದುರಾಗುತ್ತೆ.

ಪಾರ್ವತಿದೇವಿಯ ನೋವನ್ನು ಅರಿತ ನಾರದ ಮುನಿಗಳು ಪಾರ್ವತಿದೇವಿಯು ಇರುವಲ್ಲಿಗೆ ಬಂದು ಶಿವನ ಬಗ್ಗೆ ಕೆಲವೊಂದು ವಿಚಾರಗಳನ್ನು ಹೇಳುತ್ತಾರೆ. ಶಿವಪರಮಾತ್ಮನು ತಪಸ್ಸಿಗಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಾ, ಭಿಕ್ಷಾಟನೆಯನ್ನು ಮಾಡುತ್ತಾ ಅಲೆಯುತ್ತಿದ್ದಾನೆ. ನೀನು ಪವಿತ್ರವಾದ ಕಾಶಿಕ್ಷೇತ್ರಕ್ಕೆ ಹೋಗಿ ಪ್ರತಿಯೊಬ್ಬ ಭಕ್ತನಿಗೂ ಅನ್ನದಾನವನ್ನು ಮಾಡುತ್ತಾ, ಅನ್ನಪೂರ್ಣೆಯಾಗಿರಲು ಹೇಳುತ್ತಾರೆ. ಜೊತೆಗೆ ಶಿವಪರಮಾತ್ಮ ಕಾಶಿಕ್ಷೇತ್ರಕ್ಕೆ ಬಂದು ಭಿಕ್ಷೆಯನ್ನು ಬೇಡುತ್ತಾನೆಂದು ದೈವ ರಹಸ್ಯದಲ್ಲಿ ಹೇಳಲಾಗಿದೆ.

ನಾರದ ಮಹರ್ಷಿಗಳು ಹೇಳಿದಂತೆ ಪಾರ್ವತಿದೇವಿ ಕಾಶಿಕ್ಷೇತ್ರದಲ್ಲಿ ಅನ್ನದಾನ ಮಾಡುತ್ತಾ, ಅನ್ನಪೂರ್ಣೆಯಾಗಿ ಭಕ್ತರಿಂದ ಆರಾಧಿಸಲ್ಪಡುತ್ತಾಳೆ. ನಾರದ ಮಹರ್ಷಿಗಳು ಮೊದಲೇ ಹೇಳಿದಂತೆ ಶಿವಪರಮಾತ್ಮ ಕಾಶಿಕ್ಷೇತ್ರಕ್ಕೆ ಬರುತ್ತಾನೆ. ಅನ್ನಪೂರ್ಣೆಯ ಮುಂದೆ ನಿಂತು ಭಿಕ್ಷೆಯನ್ನು ಬೇಡುತ್ತಾನೆ. ದೈವನಿರ್ಣಯವೆಂಬಂತೆ ಶಿವಪರಮಾತ್ಮ ಅನ್ನಪೂರ್ಣೆಯ ಮುಂದೆ ಭಿಕ್ಷೆಯನ್ನು ಬೇಡಲು ನಿಂತಾಗ, ಅನ್ನಪೂರ್ಣೆಗೆ ಇವರೇ ನನ್ನ ಪತಿ ಎಂಬುವುದು, ಇವರೇ ಶಿವಪರಮಾತ್ಮರೆಂಬುವುದು ತಿಳಿದುಬಿಡುತ್ತೆ. ಭಿಕ್ಷೆ ಬೇಡಲು ತಮ್ಮ ಮುಂದೆ ನಿಂತ ವ್ಯಕ್ತಿಯೇ ಶಿವಪರಮಾತ್ಮನೆಂಬುವುದನ್ನು ತಿಳಿದ ಅನ್ನಪೂರ್ಣದೇವಿ ಶಿವನ ಕೈಗಳನ್ನು ಹಿಡಿಯುತ್ತಾಳೆ.

ಅನ್ನಪೂರ್ಣದೇವಿಯ ಕೈಗಳನ್ನು ಹಿಡಿದ ಕೂಡಲೇ, ಮಹಾಶಿವನಿಗೆ ಸಕಲವೂ ಅರ್ಥವಾಗಿಬಿಡುತ್ತೆ. ಅನ್ನಪೂರ್ಣೆಯೇ ಪಾರ್ವತಿದೇವಿ ಅನ್ನೋದು ತಿಳಿದುಬಿಡುತ್ತೆ. ಅನ್ನಪೂರ್ಣೆಯೇ ಪಾರ್ವತಿ ಅನ್ನೋದು ತಿಳಿದ ಕೂಡಲೇ ಶಿವಪರಮಾತ್ಮ ಅನ್ನಪೂರ್ಣೆಯ ಜೊತೆಯಾಗ್ತಾನೆ. ಹೀಗೆ ಅನ್ನಪೂರ್ಣಾದೇವಿ ಶಿವನಿಗೆ ಭಿಕ್ಷೆ ಹಾಕಿದ್ದಳು ಅನ್ನೋದನ್ನು ಹಲವು ಆಧ್ಯಾತ್ಮ ಗ್ರಂಥಗಳು ಸಾರುತ್ತವೆ. ಆ ನಂತರ ಶಿವಪರಮಾತ್ಮ ಕಾಶಿ ವಿಶ್ವೇಶ್ವರನಾಗಿ, ಪಾರ್ವತಿದೇವಿ ಅನ್ನಪೂರ್ಣೆಯಾಗಿ ಕಾಶಿಕ್ಷೇತ್ರದಲ್ಲಿ ನೆಲೆಸಿದರೆಂದು ಸ್ಥಳಪುರಾಣ ಹೇಳುತ್ತೆ.

Published On - 3:44 pm, Mon, 7 September 20