ನಿಷ್ಠಾವಂತ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ -ಸಾಮೂಹಿಕ ರಾಜೀನಾಮೆಗೆ ಮುಂದಾದ ತನ್ವೀರ್ ಸೇಠ್ ಬೆಂಬಲಿಗರು

|

Updated on: Mar 19, 2021 | 7:14 PM

ಶಾಸಕರ ಬೆಂಬಲಿಗರನ್ನು ಅಮಾನತು ಮಾಡಿರುವ ವಿಚಾರವಾಗಿ ಇದೀಗ ಅಜೀಜ್ ಸೇಠ್ ಬ್ಲಾಕ್​ನ ಕಾಂಗ್ರೆಸ್ ಕಾರ್ಯಕರ್ತರು ಸಿಟ್ಟಿಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ, ಅಜೀಜ್ ಸೇಠ್ ಬ್ಲಾಕ್​ನ ಎಲ್ಲಾ 9 ವಾರ್ಡ್​​ಗಳ ಅಧ್ಯಕ್ಷರು ಹಾಗೂ 141 ಬೂತ್ ಅಧ್ಯಕ್ಷರು ರಾಜೀನಾಮೆ ನೀಡಲು‌ ನಿರ್ಧರಿಸಿದ್ದಾರೆ.

ನಿಷ್ಠಾವಂತ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ -ಸಾಮೂಹಿಕ ರಾಜೀನಾಮೆಗೆ ಮುಂದಾದ ತನ್ವೀರ್ ಸೇಠ್ ಬೆಂಬಲಿಗರು
ತನ್ವೀರ್ ಸೇಠ್
Follow us on

ಮೈಸೂರು: ಮೂವರು ತನ್ವೀರ್​ ಸೇಠ್​ ಬೆಂಬಲಿಗರ ಅಮಾನತು ವಿಚಾರವಾಗಿ ಕೆಪಿಸಿಸಿ ನಡೆಗೆ ನಗರದಲ್ಲಿ ಪಕ್ಷದ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಶಾಸಕರ ಬೆಂಬಲಿಗರನ್ನು ಅಮಾನತು ಮಾಡಿರುವ ವಿಚಾರವಾಗಿ ಇದೀಗ ಅಜೀಜ್ ಸೇಠ್ ಬ್ಲಾಕ್​ನ ಕಾಂಗ್ರೆಸ್ ಕಾರ್ಯಕರ್ತರು ಸಿಟ್ಟಿಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ, ಅಜೀಜ್ ಸೇಠ್ ಬ್ಲಾಕ್​ನ ಎಲ್ಲಾ 9 ವಾರ್ಡ್​​ಗಳ ಅಧ್ಯಕ್ಷರು ಹಾಗೂ 141 ಬೂತ್ ಅಧ್ಯಕ್ಷರು ರಾಜೀನಾಮೆ ನೀಡಲು‌ ನಿರ್ಧರಿಸಿದ್ದಾರೆ. ಈ ಮೂಲಕ, ಸೇಠ್ ಬೆಂಬಲಿಗರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ನಿಷ್ಠಾವಂತ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ. ಸೂಕ್ತ ಪರಿಶೀಲನೆ ನಡೆಸದೇ ಅವರನ್ನು ಅಮಾನತು ಮಾಡಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸೈಯದ್ ಇಕ್ಬಾಲ್, ರಹಮಾನ್ ಖಾನ್, ನಿಸ್ಸಾರ್ ಅಹ್ಮದ್ ಮತ್ತು ರಸೂಲ್ ಸೇರಿದಂತೆ ಇತರರು ಸಹ ರಾಜೀನಾಮೆ ನೀಡಲು ನಿರ್ಧಾರ ಕೈಗೊಂಡಿದ್ದಾರೆ.

ಅಂದ ಹಾಗೆ, ತಮ್ಮ ಬೆಂಬಲಿಗರ ಅಮಾನತಿನಿಂದಾಗಿ ಶಾಸಕ ತನ್ವೀರ್ ಸೇಠ್ ಆಕ್ರೋಶಗೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸಿದ್ದರಾಮಯ್ಯ ವಿರುದ್ಧ ಸೇಠ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಪ್ತರ ಎದುರು ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜಕಾರಣ ಮುಖ್ಯ ಅಲ್ಲ, ಸ್ವಾಭಿಮಾನ ಬಹಳ ಮುಖ್ಯ. ಸಿದ್ದರಾಮಯ್ಯರನ್ನ ನಾವು ಅಭಿಮಾನದಿಂದ ನೋಡಿದ್ದೆವು. ಅವರಿಗೆ ನಮ್ಮ ಅಭಿಮಾನದ ಬೆಲೆ ಗೊತ್ತಿಲ್ಲ ಎಂದು ತನ್ವೀರ್​ ಕಿಡಿಕಾರಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ, ಮೈಸೂರಿಗೂ ರಿಜ್ವಾನ್ ಅರ್ಷದ್​ಗೂ ಏನು ಸಂಬಂಧ? ಎಂದು ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ವಿಚಾರದಲ್ಲಿ ರಿಜ್ವಾನ್ ಅರ್ಷದ್ ಹಸ್ತಕ್ಷೇಪ ಮಾಡಿರುವ ಕುರಿತು ತನ್ವೀರ್ ಸೇಠ್​ ತಮ್ಮ ಸಿಟ್ಟು ಹೊರಹಾಕಿದ್ದಾರಂತೆ. ಇದಲ್ಲದೆ, ಸಿದ್ದರಾಮಯ್ಯ ಜೊತೆ ಮಾತುಕತೆಗೂ ತನ್ವೀರ್ ನಿರಾಕರಿಸಿದ್ದಾರಂತೆ. ಅಂದ ಹಾಗೆ, ನಿನ್ನೆ ತನ್ವೀರ್ ಸೇಠ್ ಬೆಂಬಲಿಗರನ್ನು ಪಕ್ಷದಿಂದ ಅಮಾನತು ಮಾಡಿ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹಮದ್ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಜಮೀನಿಗೆ ಟಿಸಿ ಅಳವಡಿಸಲು 45,000 ರೂ. ಲಂಚಕ್ಕೆ ಬೇಡಿಕೆ: ಜೆಸ್ಕಾಂ AEE, ಪವರ್​ಮ್ಯಾನ್​ ACB ಬಲೆಗೆ

Published On - 7:09 pm, Fri, 19 March 21