ಜಮೀನಿಗೆ ಟಿಸಿ ಅಳವಡಿಸಲು 45,000 ರೂ. ಲಂಚಕ್ಕೆ ಬೇಡಿಕೆ: ಜೆಸ್ಕಾಂ AEE, ಪವರ್ಮ್ಯಾನ್ ACB ಬಲೆಗೆ
ಹೂವಿನಹಡಗಲಿಯಲ್ಲಿ ಜೆಸ್ಕಾಂ ಎಇಇ ಭಾಸ್ಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಹೂವಿನಹಡಗಲಿರುವ ಜೆಸ್ಕಾಂ ಕಚೇರಿಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಂದ ಹಾಗೆ, ಭಾಸ್ಕರ್ ರೈತರೊಬ್ಬರ ಜಮೀನಿಗೆ ಟಿಸಿ ಅಳವಡಿಸಲು 45,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗಿದೆ.
ವಿಜಯನಗರ: ಹೂವಿನಹಡಗಲಿಯಲ್ಲಿ ಜೆಸ್ಕಾಂ ಎಇಇ ಭಾಸ್ಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲೆಯ ಹೂವಿನಹಡಗಲಿಯಲ್ಲಿರುವ ಜೆಸ್ಕಾಂ ಕಚೇರಿಯಲ್ಲಿ ಭಾಸ್ಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಅಂದ ಹಾಗೆ, ಭಾಸ್ಕರ್ ರೈತರೊಬ್ಬರ ಜಮೀನಿಗೆ ಟಿಸಿ ಅಳವಡಿಸಲು 45,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಹೇಳಲಾಗಿದೆ. ಜೊತೆಗೆ, ಮುಂಗಡವಾಗಿ 25 ಸಾವಿರ ರೂ. ಲಂಚ ಸಹ ಪಡೆದಿದ್ದರಂತೆ.
ಇಂದು ಬಾಕಿ ಉಳಿದಿದ್ದ 20,000 ರೂಪಾಯಿ ಲಂಚವನ್ನು ಎಇಇ ಪರವಾಗಿ ಪವರ್ಮ್ಯಾನ್ ಒಬ್ಬರು ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇದೀಗ, ಜಿಲ್ಲೆಯ ಬಸರಹಳ್ಳಿತಾಂಡಾದ ರೈತ ಉಮೇಶ್ನಿಂದ ಲಂಚ ಸ್ವೀಕಾರ ಮಾಡಿದ ಎಇಇ ಭಾಸ್ಕರ್ ಹಾಗೂ ಪವರ್ಮ್ಯಾನ್ ಮಾರುತಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಎಸಿಬಿ DySP ಎಂ.ಸಿ.ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
Published On - 6:37 pm, Fri, 19 March 21