AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಕೋರ್ಟ್, ಯುವಕನನ್ನು ಶನಿವಾರ ಹಾಜರು ಪಡಿಸುವಂತೆ ಆದೇಶ

ರಮೇಶ್​ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದಲ್ಲಿ ಕೋರ್ಟ್​ ಪ್ರವೇಶ ಮಾಡಿದೆ. 3-4 ಎಫ್​ಐಆರ್​ಗಳನ್ನು ದಾಖಲಿಸಿಕೊಂಡು, ಅನುಮಾನದ ಮೇಲೆ ಹತ್ತಾರು ಮಂದಿಯನ್ನು ವಿಚಾರಣೆಗೆ ಕರೆಸುತ್ತಿರುವ ಪ್ರಕರಣದ ವಿಶೇಷ ತನಿಖಾ ತಂಡಕ್ಕೆ ಹೈಕೋರ್ಟ್​ ಬಿಸಿ ಮುಟ್ಟಿಸಿದೆ.

ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಕೋರ್ಟ್, ಯುವಕನನ್ನು ಶನಿವಾರ ಹಾಜರು ಪಡಿಸುವಂತೆ ಆದೇಶ
ಕರ್ನಾಟಕ ಹೈಕೋರ್ಟ್
KUSHAL V
|

Updated on:Mar 19, 2021 | 6:09 PM

Share

ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದಲ್ಲಿ ಕೋರ್ಟ್​ ಪ್ರವೇಶ ಮಾಡಿದೆ. 3-4 ಎಫ್​ಐಆರ್​ಗಳನ್ನು ದಾಖಲಿಸಿಕೊಂಡು, ಅನುಮಾನದ ಮೇಲೆ ಹತ್ತಾರು ಮಂದಿಯನ್ನು ವಿಚಾರಣೆಗೆ ಕರೆಸುತ್ತಿರುವ ಪ್ರಕರಣದ ವಿಶೇಷ ತನಿಖಾ ತಂಡಕ್ಕೆ ಹೈಕೋರ್ಟ್​ ಬಿಸಿ ಮುಟ್ಟಿಸಿದೆ. ಅಂತೆಯೇ, ಈ ಹಿಂದೆ, ಪ್ರಕರಣ ಸಂಬಂಧ ಆರೋಪಿಯೊಬ್ಬರ ಸಹೋದರನನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರಂತೆ. ಈ ಹಿನ್ನೆಲೆಯಲ್ಲಿ, ಆತನ ಪೋಷಕರು ತಮ್ಮ ಪುತ್ರ ಕಾಣೆಯಾಗಿದ್ದಾನೆ, ಹುಡುಕಿಕೊಡಿ ಎಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಆಲಿಸಿದ ನ್ಯಾಯಪೀಠವು ನಾಳೆ ಬೆಳಗ್ಗೆ 10.30ಕ್ಕೆ ಚೇತನ್​ ಎಂಬ ಯುವಕನನ್ನು ಕೋರ್ಟ್​​ ಎದುರು ಹಾಜರುಪಡಿಸಿ ಎಂದು ಸೂಚಿಸಿದೆ.

ಪ್ರಕರಣದ ಆರೋಪಿಯಾದ ಶ್ರವಣ್​ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ಆತನ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಆತನ ಸಹೋದರ ಚೇತನ್​ರನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಆದರೆ, ಆತ ಹಾಗೂ ಆರೋಪಿ ಶ್ರವಣ್ ಅವರ​ ತಂದೆ ಈ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಇಂದು ಹೈಕೋರ್ಟ್​ ವಿಚಾರಣೆ ನಡೆಸಿದೆ.

ಈ ವೇಳೆ, ಮಾರ್ಚ್​ 16ರಿಂದ ನನ್ನ ಪುತ್ರ ಚೇತನ್ ನಾಪತ್ತೆಯಾಗಿದ್ದಾರೆ. ಚೇತನ್​ನನ್ನು ಪೊಲೀಸರು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ. ಕಬ್ಬನ್​ ಪಾರ್ಕ್​ ಠಾಣೆಗೆ ಹೋಗಿದ್ದ ಚೇತನ್​ ಮಾರ್ಚ್​ 16ರಿಂದ ಮರಳಿ ಬಂದಿಲ್ಲವೆಂದು ಯುವಕನ ತಂದೆ ಸೂರ್ಯಕುಮಾರ್​ ಪರ ವಕೀಲರು ತಮ್ಮ ವಾದ ಮಂಡಿಸಿದರು. ಇದಕ್ಕೆ, ಚೇತನ್​ ಎಲ್ಲಿದ್ದಾನೆ ಎಂದು ಹೈಕೋರ್ಟ್​ ಸರ್ಕಾರಿ ವಕೀಲರಿಗೆ ಪ್ರಶ್ನಿಸಿತು.

ಚೇತನ್ ಅವರ ಹೇಳಿಕೆ ಪಡೆಯಲು ಆತನನ್ನು ಠಾಣೆಗೆ ಕರೆಸಲಾಗಿತ್ತು. ಮಾರ್ಚ್​ 18ರಂದು ಚೇತನ್​ ವಿಚಾರಣೆಗೆ ಬಂದಿದ್ದ. ಈ ವೇಳೆ, ಮತ್ತೆ, ಮಾರ್ಚ್​ 20ರಂದು ಹಾಜರಾಗುವಂತೆ ಸೂಚಿಸಲಾಗಿತ್ತು. ಚೇತನ್​ರನ್ನು ನಾವು ಬಂಧಿಸಿಲ್ಲ ಎಂದು ಸರ್ಕಾರಿ ವಕೀಲರು ಪೀಠಕ್ಕೆ ತಿಳಿಸಿದರು. ಇದಲ್ಲದೆ, ಅವರ ಆಂಟಿ ಅಂಬುಜಾಕ್ಷಿಯವರ ಜೊತೆ ಕಳಿಸಲಾಗಿದೆ. ಆತ ಅಕ್ರಮ ಬಂಧನದಲ್ಲಿ ಇಲ್ಲ ಎಂದು ಸರ್ಕಾರಿ ವಕೀಲರು ಕೋರ್ಟ್​ಗೆ ತಿಳಿಸಿದರು. ನೋಟಿಸ್​ನಲ್ಲಿ ಸೂಚಿಸಿದ ಹಾಗೆ, ಆತ ಮಾ. 15, 16,18 ರಂದು ಹಾಜರಾಗಿದ್ದ. ಈ ಕುರಿತು, ಪ್ರಮಾಣ ಪತ್ರ ಸಲ್ಲಿಸುವುದಾಗಿ ವಕೀಲರು ತಿಳಿಸಿದರು.

ಅಂತಿಮವಾಗಿ, ನಾಳೆ ಬೆಳಗ್ಗೆ 10.30ಕ್ಕೆ ಚೇತನ್​ರನ್ನು ಹೈಕೋರ್ಟ್​ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ. ನ್ಯಾ.ಬಿ.ವಿ.ನಾಗರತ್ನ, ನ್ಯಾ.ಸಂಜಯ್ ಗೌಡರವರಿದ್ದ ಪೀಠ ಸೂಚನೆ ನೀಡಿದೆ.

ಇದನ್ನೂ ಓದಿ: ಸಿಡಿ ಪ್ರಕರಣ: ಸೂತ್ರಧಾರಿಗಳ ಹೆಸರು ಬಹಿರಂಗವಾಗುವ ಸಾಧ್ಯತೆ, ನಾಳೆ ಪ್ರತ್ಯಕ್ಷವಾಗಲಿದ್ದಾರಾ ಯುವತಿ ಪೋಷಕರು?

Published On - 6:01 pm, Fri, 19 March 21

Follow Us
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ