TV9 Digital Live | ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕೊರೊನಾ; ತಜ್ಞರ ಸಲಹೆ ಏನು?

ಯುವಜನರಲ್ಲಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಣಿಪಾಲದ ಇಂಜಿನಿಯರಿಂಗ್​ ಕಾಲೇಜಿನಲ್ಲಿ 80ಕ್ಕೂ ಹೆಚ್ಚಿನ ಮಕ್ಕಳಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಕುರಿತಾಗಿ ಟಿವಿ9 ಕನ್ನಡ ಡಿಜಿಟಲ್​ ಲೈವ್​ ಚರ್ಚೆ ನಡೆಸಿಕೊಟ್ಟಿದೆ.

TV9 Digital Live | ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕೊರೊನಾ; ತಜ್ಞರ ಸಲಹೆ ಏನು?
ಡಾ. ಪವನ್, ಆ್ಯಂಕರ್​ ಸೌಮ್ಯ ಹೆಗಡೆ ಮತ್ತು ಡಾ. ಶ್ರೀನಿವಾಸ್
Follow us
| Updated By: ganapathi bhat

Updated on: Mar 19, 2021 | 8:14 PM

ಮಣಿಪಾಲದ ಇಂಜಿನಿಯರಿಂಗ್​ ಕಾಲೇಜಿನಲ್ಲಿ 80ಕ್ಕೂ ಹೆಚ್ಚಿನ ಮಕ್ಕಳಿಗೆ ಕೊರೊನಾ ಪಾಸಿಟಿವ್​ ಬಂದಿದೆ. ಬೆಂಗಳೂರಿನ ಎರಡು ಕಡೆ ಹಾಸ್ಟಲ್​ನಲ್ಲಿರುವ ವಿದ್ಯಾರ್ಥಿಗಳಿಗೆ ಕೊರೊನಾ ಬಂದಿರುವುದರಿಂದ ಕೊರೊನಾ ಯುವ ಜನಾಂಗಕ್ಕೆ ದಾಳಿ ಇಡುತ್ತಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಕುರಿತಾಗಿ ಟಿವಿ9 ಕನ್ನಡ ಡಿಜಿಟಲ್ ಲೈವ್ ಕಾರ್ಯಕ್ರಮದಲ್ಲಿ ಚರ್ಚಿಸಿದೆ. ಶಿಶುವೈದ್ಯ ಡಾ. ಶ್ರೀನಿವಾಸ್ ಮತ್ತು ಶ್ವಾಸಕೋಶತಜ್ಞ ಡಾ. ಪವನ್ ಲೈವ್ ಚರ್ಚೆಯಲ್ಲಿ ಪಾಲ್ಗೊಂಡರು. ಆ್ಯಂಕರ್​ ಸೌಮ್ಯ ಹೆಗಡೆ ಚರ್ಚೆ ನಡೆಸಿಕೊಟ್ಟರು.

ಶಿಶುವೈದ್ಯ ಡಾ. ಶ್ರೀನಿವಾಸ್ ಮಾತನಾಡಿ ಜನರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಜನರ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಇದರಿಂದಾಗಿ ಮಕ್ಕಳಿಗೆ ಕೊರೊನಾ ತಗಲುತ್ತಿದೆ. ಕೊರೊನಾ ವಯಸ್ಕರಿಗೆ ಹರುಡುವುದರಿಂದ ಕೂಡ ಅವರ ಮಕ್ಕಳಿಗೆ ವೈರಸ್​ ತಗಲುತ್ತಿದೆ. ಹೆಚ್ಚಾಗಿ ತಾಯಿಯರಿಂದ ಮಕ್ಕಳಿಗೆ ವೈರಸ್​ ಹರಡುತ್ತಿದೆ. ಮಕ್ಕಳನ್ನು ಜಾಗೃತವಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.

ಕೊರೊನಾದಿಂದ ಏನೂ ಆಗುವುದಿಲ್ಲ ಎಂಬ ನಿರ್ಲಕ್ಷ್ಯ ಜನರಲ್ಲಿ ಮೂಡಿದೆ. ಇದು ಮಾರಣಾಂತಿಕವೋ ಅಲ್ಲವೋ ಎಂಬುದನ್ನು ಕೊರೊನಾದಿಂದ ತೀವ್ರ ತೊಂದರೆಗೆ ಒಳಗಾದ ಅಥವಾ ಕೊರೊನಾದಿಂದ ಮರಣಿಸಿರುವ ಜನರ ಕುಟುಂಬ ನೋಡಿ ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಾದರೂ ಜನ ಕಾಳಜಿ ವಹಿಸಬೇಕು. ಜನರು ಎಚ್ಚರಿಕೆಯಿಂದ ಇರುವುದು ಮುಖ್ಯವಾಗಿರುತ್ತದೆ ಎಂದು ಶ್ರೀನಿವಾಸ್ ತಿಳಿಸಿದರು.

ಲಾಕ್ ಡೌನ್ ಮಾಡುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಜೀವನ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. ಹಾಗಿದ್ದಾಗ ದುಡಿಯುವುದು ಅನಿವಾರ್ಯ. ಆದರೆ, ಕೊವಿಡ್-19 ಹರಡುವಿಕೆಯ ಪ್ರಮಾಣ ಯಾರಿಗೆ ಹೆಚ್ಚಾಗಿದೆ ಎಂಬುದರ ಕುರಿತಾಗಿಯೂ ಗಂಭೀರವಾಗಿ ಗಮನಹರಿಸಬೇಕು ಎಂದು ಹೇಳಿದರು.

ನಾವು ಸೇವಿಸುವ ಆಹಾರ ಮತ್ತು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳುವುದರಿಂದ ರೋಗ ತಗುಲಿದರೂ ಎದುರಿಸುವ ಶಕ್ತಿ ಮತ್ತು ಸದೃಢತೆ ಜನರಲ್ಲಿ ಬರುತ್ತದೆ. ಕಳೆದ ಬಾರಿ ವಯಸ್ಕರಲ್ಲಿ ಕೊರೊನಾ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಆದರೆ, ಈಗ ಯುವ ಸಮುದಾಯದಲ್ಲಿಯೂ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಅದರಿಂದ ಕಡಿಮೆ ಪ್ರಮಾಣದ ಹಾನಿ ಉಂಟಾಗಬಹುದು. ಆದರೆ, ಸೋಂಕು ತಗುಲದಂತೆ ನೋಡಿಕೊಳ್ಳುವುದೇ ಒಳ್ಳೆಯದು ಎಂದು ಅವರು ತಿಳಿಸಿದರು.

ಡಾ. ಪವನ್ ಮಾತನಾಡಿ, ಮೊದಲು ಕೊರೊನಾ ಎಂಬ ಪದ ಹಾಗೂ ವೈರಸ್​ ಎಲ್ಲರಿಗೆ ಹೊಸದಾಗಿತ್ತು. ಆದರೆ ಇದೀಗ ಒಂದು ವರ್ಷದ ಬಳಿಕ ಕೊರೊನಾ ಹೋಗಲಾಡಿಸುವ ಕುರಿತಾಗಿ ಅಥವಾ ತಡೆಗಟ್ಟುವ ಕುರಿತಾಗಿ ನಮಗೆ ತಿಳಿದಿದೆ. ಮೊದಲನೇ ಹಂತದ ಕೊರೊನಾ ವೈರಸ್​ ಹರಡಿದಾಗ ಯಾವ ರೀತಿ ಸಿದ್ಧರಾಗಿದ್ದೆವೋ ಅದೇ ರೀತಿ ಮುನ್ನೆಚ್ಚರಿಕಾ ಕ್ರಮವನ್ನು ಸರಿಯಾಗಿ ಪಾಲಿಸಿದರೆ ಈಗಲೂ ಕೊರೊನಾ ತಗುಲದಂತೆ ನೋಡಿಕೊಳ್ಳಬಹುದು. ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೊರೊನಾ ವೈರಸ್ ರೂಪಾಂತರ ಹೊಂದುತ್ತದೆ. ರೂಪಾಂತರ ಹೊಂದಿದ ವೈರಸ್ ಕ್ರಮೇಣ ದುರ್ಬಲವಾಗುತ್ತಾ ಹೋಗುತ್ತದೆ. ಮೊದಲ ಹಂತದಲ್ಲಿ ವೈರಸ್​ ಹರಡುವಿಕೆ ವಯಸ್ಕರಿಗೆ ಹೆಚ್ಚು ಕಾಣಿಸಿಕೊಂಡಿತ್ತು. ಕೊರೊನಾ ಎರಡನೇ ಅಲೆ ಮಕ್ಕಳಿಗೆ, ಯುವಕರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಮಯಸ್ಕರಿಗೂ ವೈರಸ್​ ಹರಡುತ್ತಿದೆ. ಮೊದಲ ಅಲೆಯ ಕೊರೊನಾ ಎದುರಿಸಿದವರು, ಎರಡನೇ ಅಲೆ ಬರುವುದಿಲ್ಲ ಎಂದು ನಿರ್ಲಕ್ಷಿಸಬೇಡಿ. ಜಾಗೃತರಾಗಿದ್ದರೆ ಕೊರೊನಾ ತಡೆಯಬಹುದು. ಆದರೆ, ಮುನ್ನೆಚ್ಚರಿಕಾ ಕ್ರಮ ಬೇಕು. ಮೊದಲನೇ ಹಂತದಲ್ಲಿ ಕೊರೊನಾ ಬಂದಿತ್ತು.‌ ಲಸಿಕೆ ಪಡೆದಿದ್ದೇವೆ, ಇದೀಗ ಎರಡನೇ ಅಲೆ ಹರಡುವುದಿಲ್ಲ ಎಂಬ ನಿರ್ಲಕ್ಷ್ಯ ಬಿಟ್ಟು, ಕೊರೊನಾ ಬಾರದಂತೆ ತಡೆಗಟ್ಟುವ ಕ್ರಮದ ಕುರಿತು ಯೋಚಿಸಿ. ಪ್ರತಿಯೊಬ್ಬರೂ ಹುಷಾರಾಗಿರಿ ಎಂದು ಸೂಚಿಸಿದರು.

ಇದನ್ನೂ ಓದಿ: TV9 Digital Live: ಸಿಡಿ ಪ್ರಕರಣದ ರೂವಾರಿ ಎಂದು ಶಂಕಿಸಲಾದ ನರೇಶ್​ ಗೌಡ ಹೇಳಿಕೆಯ ವಿಡಿಯೋ ಬಿಡುಗಡೆ; ಹೊಸ ತಿರುವು ಪಡೆದ ಕೇಸ್

TV9 Digital Live: ಸಿಡಿ ಪ್ರಕರಣದ ರೂವಾರಿ ಎಂದು ಶಂಕಿಸಲಾದ ನರೇಶ್​ ಗೌಡ ಹೇಳಿಕೆಯ ವಿಡಿಯೋ ಬಿಡುಗಡೆ; ಹೊಸ ತಿರುವು ಪಡೆದ ಕೇಸ್

‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ