ಬೆಂಗಳೂರು: ಪದೇ ಪದೇ ಎಡವಟ್ಟು ಮಾಡಿ ಜನರ ಕಣ್ಣಿಗೆ ಗುರಿಯಾಗುತ್ತಿದ್ದ ಶಾಸಕ ಜಮೀರ್ ಅಹ್ಮದ್ ಖಾನ್‌ರಿಂದ ಮತ್ತೊಂದು ಎಡವಟ್ಟು ನಡೆದಿದೆ. ಈ ಮೊದಲೇ ಪಾರರಾಯನಪುಂಡರಿಗೆ ಸಾಥ್ ನೀಡಿ ಜನರ ಆಕ್ರೋಶಕ್ಕೆ ಕಾರಣರಾಗಿದ್ರು. ಈಗ ಸೋಶಿಯಲ್ ಮೀಡಿಯಾ ಪೇಜ್‌ಗೆ ಚಾಲನೆ ನೀಡುವ ವೇಳೆ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಬೆಂಬಲಿಗರ ಜತೆ ಗುಂಪಾಗಿ ಸೇರಿ ಮೀಡಿಯಾ ಪೇಜ್‌ಗೆ ಚಾಲನೆ ನೀಡಿದ್ದಾರೆ. ಕೊರೊನಾ ಅಟ್ಟಹಾಸವನ್ನು ಮರೆತು, ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸಾಮಾಜಿಕ ಅಂತರ ಮರೆತು ಗುಂಪಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದರ ನಡುವೆ ಬೆಂಬಲಿಗರಿಂದ ಪಾದ ಪೂಜೆ ಮಾಡಿಸಿಕೊಂಡಿದ್ದಾರೆ. ಜೂನ್ 28ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಯಾಗಿ ಜಮೀರ್ ಅಹ್ಮದ್ ಕೊರೊನಾ ನಿಯಂತ್ರಣ ನಿಯಮವನ್ನು ಗಾಳಿಗೆ ತೂರಿದ್ದಾರೆ. ಕೊವಿಡ್ ಪ್ರಕರಣ ಹೆಚ್ಚುತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಬೆಂಬಲಿಗರಿಂದ ಪಾದಪೂಜೆ ಮಾಡಿಸಿಕೊಂಡಿದ್ದಾರೆ.
Published On - 7:33 am, Wed, 1 July 20