ಸೋಂಕಿತ ಕಳ್ಳನನ್ನು 15ದಿನ ಕಸ್ಟಡಿಯಲ್ಲಿಟ್ಟು ಎಡವಟ್ಟು, ಪೊಲೀಸ್ ಸಿಬ್ಬಂದಿಗೆ ಶುರುವಾಯ್ತು ಆತಂಕ

ಹುಬ್ಬಳ್ಳಿ: ಕೊರೊನಾ ನಮಗೆ ಅರಿವೇ ಇಲ್ಲದೆ ನಮ್ಮ ಒಳಗೆ ಸೇರಿಕೊಂಡಿರುತ್ತೆ. ಸುಳಿವೂ ಕೊಡದೆ ನಮ್ಮ ಉಸಿರು ನಿಲ್ಲಿಸುತ್ತೆ. ಮಹಾಮಾರಿ ಕೊರೊನಾ ಜನರನ್ನು ಕಪಿಮುಷ್ಠಿಯಲ್ಲಿ ಬಂಧಿಸಿದೆ. ಹೀಗಾಗಿ ಜನ ತುಂಬ ಮುನ್ನೆಚ್ಚರಿಕೆಯಿಂದಿರಬೇಕು. ಆದರೆ ಇಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸರು ಆತನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸದೆ 15ದಿನಗಳ ಕಾಲ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ. ಈ ಎಡವಟ್ಟಿನಿಂದ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ಕಳ್ಳತನ ಕೇಸ್​ನಲ್ಲಿ ಬಂಧಿಸಿದ್ದ ಗದಗ ಮೂಲದ ವ್ಯಕ್ತಿಯನ್ನು ಹುಬ್ಬಳ್ಳಿಯ ಉಪನಗರ ಇನ್ಸ್ಪೆಕ್ಟರ್ ಎಸ್.ಕೆ ಹೊಳೆಣ್ಣವರ್ ಟೆಸ್ಟ್​ಗೆ ಒಳಪಡಿಸದೇ ಕಳೆದ 15 […]

ಸೋಂಕಿತ ಕಳ್ಳನನ್ನು 15ದಿನ ಕಸ್ಟಡಿಯಲ್ಲಿಟ್ಟು ಎಡವಟ್ಟು, ಪೊಲೀಸ್ ಸಿಬ್ಬಂದಿಗೆ ಶುರುವಾಯ್ತು ಆತಂಕ
Follow us
ಆಯೇಷಾ ಬಾನು
|

Updated on: Jul 01, 2020 | 8:27 AM

ಹುಬ್ಬಳ್ಳಿ: ಕೊರೊನಾ ನಮಗೆ ಅರಿವೇ ಇಲ್ಲದೆ ನಮ್ಮ ಒಳಗೆ ಸೇರಿಕೊಂಡಿರುತ್ತೆ. ಸುಳಿವೂ ಕೊಡದೆ ನಮ್ಮ ಉಸಿರು ನಿಲ್ಲಿಸುತ್ತೆ. ಮಹಾಮಾರಿ ಕೊರೊನಾ ಜನರನ್ನು ಕಪಿಮುಷ್ಠಿಯಲ್ಲಿ ಬಂಧಿಸಿದೆ. ಹೀಗಾಗಿ ಜನ ತುಂಬ ಮುನ್ನೆಚ್ಚರಿಕೆಯಿಂದಿರಬೇಕು. ಆದರೆ ಇಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸರು ಆತನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸದೆ 15ದಿನಗಳ ಕಾಲ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ. ಈ ಎಡವಟ್ಟಿನಿಂದ ದೊಡ್ಡ ಸಂಕಷ್ಟವೊಂದು ಎದುರಾಗಿದೆ.

ಕಳ್ಳತನ ಕೇಸ್​ನಲ್ಲಿ ಬಂಧಿಸಿದ್ದ ಗದಗ ಮೂಲದ ವ್ಯಕ್ತಿಯನ್ನು ಹುಬ್ಬಳ್ಳಿಯ ಉಪನಗರ ಇನ್ಸ್ಪೆಕ್ಟರ್ ಎಸ್.ಕೆ ಹೊಳೆಣ್ಣವರ್ ಟೆಸ್ಟ್​ಗೆ ಒಳಪಡಿಸದೇ ಕಳೆದ 15 ದಿನದಿಂದ ಠಾಣೆ ಪಕ್ಕದ ಲಾಡ್ಜ್​ನಲ್ಲಿ ಇರಿಸಿದ್ದರು. 15 ದಿನಗಳ ಬಳಿಕ ಕೊವಿಡ್ ಟೆಸ್ಟ್ ಮಾಡಿದಾಗ ಆತನಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಹೀಗಾಗಿ ಈಗ ಸುಮಾರು 24ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಕೊರೊನಾ ಆತಂಕ ಉಂಟಾಗಿದೆ. ಇಷ್ಟಾದ್ರು ಪೊಲೀಸರನ್ನ ಕೊವಿಡ್ ಟೆಸ್ಟ್ ಮಾಡಲು ಹಿಂದೇಟು ಹಾಕಲಾಗಿದೆ. ಕೊರೊನಾ ಗುಣ ಲಕ್ಷಣ ಕಂಡ್ರೆ ಮಾತ್ರ ಟೆಸ್ಟ್ ಮಾಡೋದಾಗಿ ಹೇಳಿದ್ದಾರಂತೆ. ಇದರಿಂದಾಗಿ ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಆತಂಕ ಶುರುವಾಗಿದೆ.

ಸೋಂಕಿತ ಕಳ್ಳನ ಜೊತೆ 24 ಸಿಬ್ಬಂದಿ ಸಂಪರ್ಕದಲ್ಲಿದ್ದರು. ಜೊತೆಗೆ ಇನ್ಸ್ಪೆಕ್ಟರ್ ಕೂಡಾ ಕಳ್ಳನನ್ನ ವಿಚಾರಣೆ ಮಾಡಿದ್ದರು. ಅಲ್ಲದೆ ಪೊಲೀಸ್ ಕಮೀಷನರ್ ಕಚೇರಿಗೂ ಭೇಟಿ ನೀಡಿದ್ದರು. ಇಷ್ಟೆಲ್ಲಾ ಆದ್ರು ಪೊಲೀಸರ ಕೊವಿಡ್ ಟೆಸ್ಟ್ ಮಾಡದೇ ಇರೋದೆ ಆತಂಕ ಸೃಷ್ಟಿಸಿದೆ. ಇನ್ಸ್ಪೆಕ್ಟರ್ ಮಾಡಿದ ಏಡವಟ್ಟಿಗೆ ಇಡೀ ಠಾಣೆಯೇ ಸಿಬ್ಬಂದಿಗೆ ಆತಂಕದಲ್ಲಿದ್ದಾರೆ. ಅಲ್ಲದೆ ಆತ‌ ಕದ್ದ ವಸ್ತುಗಳನ್ನ ರಿಕವರಿ ಮಾಡಲು ಕೊರೊನಾ ರೋಗಿಯನ್ನ ಕರೆದುಕೊಂಡು ಬೇರೆ ಬೇರೆ ಊರಿಗೆ ಪೊಲೀಸರು‌ ಹೊಗಿದ್ದರು.

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ