ಇದು ಕ್ರಿಕೆಟ್​ ಧರ್ಮ! ಭಾರತದಲ್ಲಿ ಕ್ರಿಕೆಟ್​ ಕೇವಲ ಆಟವಾಗಿ ಉಳಿದಿಲ್ಲ ಎಂಬುದಕ್ಕೆ ಕ್ರಿಕೆಟಿಗ ಸಿರಾಜ್​ ಕಣ್ಣೀರೆ ಸಾಕ್ಷಿ..

ಹೌದು.. ಕಳೆದ ವಾರವಷ್ಟೇ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಬಲಗೈ ವೇಗಿ ಸಿರಾಜ್ ರಾಷ್ಟ್ರಗೀತೆ ಹಾಡುವ ವೇಳೆ ಬಾವುಕರಾಗಿ ಕಣ್ಣೀರು ಒರೆಸುತ್ತಿದಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗುತ್ತಿದೆ.

ಇದು ಕ್ರಿಕೆಟ್​ ಧರ್ಮ! ಭಾರತದಲ್ಲಿ ಕ್ರಿಕೆಟ್​ ಕೇವಲ ಆಟವಾಗಿ ಉಳಿದಿಲ್ಲ ಎಂಬುದಕ್ಕೆ ಕ್ರಿಕೆಟಿಗ ಸಿರಾಜ್​ ಕಣ್ಣೀರೆ ಸಾಕ್ಷಿ..
ಮೊಹಮ್ಮದ್ ಸಿರಾಜ್
Edited By: ಸಾಧು ಶ್ರೀನಾಥ್​

Updated on: Jan 07, 2021 | 3:45 PM

ಸಿಡ್ನಿ: ಇದು ಕ್ರಿಕೆಟ್​ ಧರ್ಮ ಅಂದ್ರೆ..  ಭಾರತದಲ್ಲಿ ಕ್ರಿಕೆಟ್​ ಕೇವಲ ಆಟವಾಗಿ ಉಳಿದಿಲ್ಲ. ಬದಲಾಗಿ ಅದು ಪ್ರತಿಯೊಬ್ಬ ಭಾರತೀಯನ ಭಾವನೆಗಳಲ್ಲಿ ಬೆರೆತು ಹೋಗಿದೆ. ರಾಷ್ಟ್ರ ಧರ್ಮವಾಗಿದೆ. ಹೀಗಾಗಿಯೇ ಭಾರತದಲ್ಲಿ ಕ್ರಿಕೆಟ್,​ ರಾಷ್ಟ್ರೀಯ ಕ್ರೀಡೆಗಿಂತ ಹೆಚ್ಚು ಜನಮನ್ನಣೆ ಗಳಿಸಿರುವುದು. ಕೇವಲ ರೋಮಾಂಚನಗೊಳಿಸುವ ಹೊಡಿಬಡಿ ಆಟದಿಂದ ಕ್ರಿಕೆಟ್​ ಭಾರತದಲ್ಲಿ ನೆಲೆಯೂರಿಲ್ಲ. ಬದಲಿಗೆ ಕ್ರಿಕೆಟ್​ನಲ್ಲಿರುವ ಶಿಸ್ತುಬದ್ಧ ನಿಯಮಗಳೇ ಇದನ್ನು ಜಂಟಲ್​ಮೆನ್​ ಗೇಮ್​ ಎಂದು ಕರೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ.

ಅದರಲ್ಲೂ ಟೀಂ ಇಂಡಿಯಾ ಆಟಗಾರರು ಈ ಕ್ರಿಕೆಟ್​ ಜೊತೆ ಎಷ್ಟು ಅವಿನಾಭಾವ ಸಂಬಂಧ ಹೊಂದಿದ್ದಾರೆ ಎಂಬುದು ಇಡೀ ಜಗತ್ತಿಗೆ ತಿಳಿದಿರುವ ವಿಷಯವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 3ನೇ ಟೆಸ್ಟ್​ ಪಂದ್ಯದಲ್ಲಿ ನಡೆದ ಈ ಒಂದು ಘಟನೆ ಸಾಕ್ಷಿಯಾಗಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪ್ರಾರಂಭವಾಗುವ ಮುನ್ನ ಎರಡು ತಂಡದ ಆಟಗಾರರು ರಾಷ್ಟ್ರಗೀತೆ ಹೇಳುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಭಾವುಕರಾಗಿ ಕಣ್ಣೀರು ಹರಿಸಿದರು.

ಸಿರಾಜ್‌ಗೆ ಇದು ಭಾವನಾತ್ಮಕ ಸರಣಿ..
ಹೌದು.. ಕಳೆದ ವಾರವಷ್ಟೇ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಬಲಗೈ ವೇಗಿ ಸಿರಾಜ್ ರಾಷ್ಟ್ರಗೀತೆ ಹಾಡುವ ವೇಳೆ ಭಾವುಕರಾಗಿ ಕಣ್ಣೀರು ಒರೆಸುತ್ತಿದಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ಆಸಿಸ್​ ನೆಲದಲ್ಲಿ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಪ್ರಾರಂಭದ ಮೊದಲು ತನ್ನ ತಂದೆಯನ್ನು ಕಳೆದುಕೊಂಡ ಸಿರಾಜ್‌ಗೆ ಇದು ಒಂದು ಭಾವನಾತ್ಮಕ ಸರಣಿ ಯಾಗಿದೆ. ಸಿರಾಜ್​ಗೆ ತನ್ನ ಮನೆಗೆ ಹಿಂದಿರುಗುವ ಆಯ್ಕೆಯನ್ನು ನೀಡಲಾಗಿದ್ದರೂ ಸಹ ಅವರು ಆಸಿಸ್​ ನಾಡಲ್ಲೇ ಉಳಿದು ಟೆಸ್ಟ್​ ಆಡಲು ನಿರ್ಧರಿಸಿದರು.

ವೇಗ ಮತ್ತು ಸ್ವಿಂಗ್ ಬೌಲಿಂಗ್​ ಮಾಡುವ ಮುಖಾಂತರ ಎಲ್ಲರನ್ನೂ ಮೆಚ್ಚಿಸಿದ ಸಿರಾಜ್​, ಭಾರತ ಎರಡನೇ ಟೆಸ್ಟ್ ಪಂದ್ಯವನ್ನು ಎಂಟು ವಿಕೆಟ್‌ಗಳಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರ ನಡೆದ ಮೊಹಮ್ಮದ್ ಶಮಿ ಅವರ ಸ್ಥಾನದಲ್ಲಿ ಅವಕಾಶ ಪಡೆದ ಸಿರಾಜ್​, 2ನೇ ಟೆಸ್ಟ್​ ಮ್ಯಾಚ್​ನಲ್ಲಿ 77 ರನ್​ ನೀಡಿ ಪ್ರಮುಖ 5 ವಿಕೆಟ್​ ಪಡೆದು ಮಿಂಚಿದರು. ಸಿರಾಜ್ ಅವರ ಈ ಅದ್ಭುತ ಪ್ರದರ್ಶನದಿಂದ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಪ್ರಸ್ತುತ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್, ಆಸಿಸ್​ನ ಆರಂಭಿಕ ದೈತ್ಯ ಬ್ಯಾಟ್ಸ್​ಮನ್ ಡೇವಿಡ್​ ವಾರ್ನರ್​ ವಿಕೆಟ್​ ತೆಗಿಯುವಲ್ಲಿ ಯಶಸ್ವಿಯಾಗಿದ್ದಲ್ಲದೆ ತಂಡಕ್ಕೆ ಮತ್ತೊಮ್ಮೆ ಆಸರೆಯಾಗಿದ್ದಾರೆ.

ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರ ತಂದೆ ಆಟೋ ಡ್ರೈವರ್​ ನಿಧನ

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us