ಮಹಮದ್ ಸಿರಾಜ್, ಹೈದ್ರಾಬಾದ್ನ ಗಲ್ಲಿಯೊಂದರಲ್ಲಿ ಬಡತನಗಳ ನಡುವೆ ಅರಳಿದ ಪ್ರತಿಭೆ. ಸಿರಾಜ್ ಆಸಿಸ್ ಪ್ರವಾಸಕ್ಕೆ ತೆರಳುವವರೆಗೆ ಕ್ರಿಕೆಟ್ ಪ್ರೇಮಿಗಳಲ್ಲಿ ಗುರುತಿಸಿಕೊಂಡಿದ್ದು ತೀರಾ ಕಡಿಮೆ. ಆದರೆ ಆಸಿಸ್ ಪ್ರವಾಸದಲ್ಲಿ ಆತನಿಗೆ ಆದ ಮಾನಸಿಕ ಹಿಂಸೆ, ತಂದೆಯ ಅಗಲಿಕೆಯ ನೋವು, ಜನಾಂಗೀಯ ನಿಂದನೆಗಳ ನಡುವೆ ಆತ ತೋರಿದ ಮಾನವಿಯತೆಯ ಮುಖ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದೆ.
ಸಿಡ್ನಿಯಲ್ಲಿ ನಡೆದ ಭಾರತ- ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯದ ವೇಳೆ ಆಸಿಸ್ ತಂಡದ ಸ್ಫಿನ್ನರ್ ಕ್ಯಾಮರೂನ್ ಗ್ರೀನ್, ಕ್ರಿಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಜಸ್ಪ್ರಿತ್ ಬುಮ್ರಾಗೆ ಬೌಲಿಂಗ್ ಮಾಡಿದರು. ಗ್ರೀನ್ ಎಸೆದ ಚೆಂಡನ್ನು ಬುಮ್ರಾ ರಬಸವಾಗಿ ಬಾರಿಸಿದರು. ಬುಮ್ರಾ ಬ್ಯಾಟ್ನಿಂದ ಸಿಡಿದ ಚೆಂಡು ನೇರವಾಗಿ ಗ್ರೀನ್ ಕಡೆಗೆ ಹಾರಿಬಂತು. ರಬಸವಾಗಿ ಬಂದ ಚೆಂಡನ್ನು ಗ್ರೀನ್ ಹಿಡಿಯಲು ಯತ್ನಿಸಿದರು. ಆ ಯತ್ನದಲ್ಲಿ ಗ್ರೀನ್ ಕೈಗೆ ತಗುಲಿದ ಚೆಂಡು ಕೈತಪ್ಪಿ ಗ್ರೀನ್ ತಲೆಗೆ ರಬಸವಾಗಿ ಬಡಿಯಿತು.
ಚೆಂಡು ತಲೆಗೆ ಬಡಿದ ಕೂಡಲೇ ಗ್ರೀನ್ ಅಲ್ಲಿಯೇ ಕುಸಿದು ಬಿದ್ದರು. ಕೂಡಲೇ ನಾನ್ ಸ್ರ್ಟೈಕ್ನಲ್ಲಿ ನಿಂತಿದ್ದ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಮಹಮದ್ ಸಿರಾಜ್ ಕೂಡಲೇ ರನ್ ಗಳಿಸುವುದನ್ನು ಬಿಟ್ಟು, ತಮ್ಮ ಕೈನಲ್ಲಿದ್ದ ಬ್ಯಾಟ್ ಎಸೆದು ಗ್ರೀನ್ ನೆರವಿಗೆ ದಾವಿಸಿದರು. ನೋವಿನಿಂದ ಓದ್ದಾಡುತ್ತಿದ್ದ ಗ್ರೀನ್ನನ್ನು, ಸಿರಾಜ್ ಸಂತೈಸಿದರು. ಸಿರಾಜ್ ಅವರ ಈ ಕ್ರೀಡಾ ಸ್ಫೂರ್ತಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.
ಮೊಹಮದ್ ಸಿರಾಜ್ರ ಮಾನವೀಯ ಮುಖವನ್ನು ಬಿಂಬಿಸುವ ವಿಡಿಯೊ ಹಂಚಿಕೊಂಡಿರುವ ಹಲವರು, ಜನಾಂಗೀಯ ನಿಂದನೆಯನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯನ್ನರು, ‘ಜನಾಂಗೀಯ ನಿಂದನೆ ಮಾಡಿರುವ ಕೆಲವೇ ದುಷ್ಟರು ಇಡೀ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುವುದಿಲ್ಲ. ನಾವು ಕ್ರಿಕೆಟ್ ಇಷ್ಟಪಡುತ್ತೇವೆ’ ಎಂದು ಹೇಳಿದ್ದಾರೆ.
ಇಲ್ಲಿದೆ ವಿಡಿಯೊ
Very sad for Indian players but especially for Mohammed Siraj – how quickly people forget his quick act of compassion & care for Cameron Green just over a month ago pic.twitter.com/CWi9cguF3e
— yolobolo (@yolobol47807946) January 10, 2021
India vs Australia Test Series | 5 ವಿಕೆಟ್ ಪಡೆದ ಸಿರಾಜ್ ಅಪರೂಪದ ಸಾಧನೆಗೆ ಅಪ್ಪನ ನೆನಪೇ ಆಸರೆ
Published On - 4:55 pm, Thu, 21 January 21