ಆಯುಧ ಪೂಜೆ ದಿನವೇ ಹನುಮನ ದೇವಸ್ಥಾನದಲ್ಲಿ ಕಳ್ಳತನ.. ಯಾವೂರಲ್ಲಿ?

ದಾವಣಗೆರೆ: ಆಯುಧ ಪೂಜೆ ದಿನವೇ ಆಂಜನೇಯ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ರಾತ್ರಿ ಒಂದು ಗಂಟೆ ಸುಮಾರಿಗೆ ನಿಟ್ಟುವಳ್ಳಿ ಚಾಮುಂಡೇಶ್ವರಿ ಚಿತ್ರಮಂದಿರದ ಬಳಿ ಇರುವ ದೇವಸ್ಥಾ‌ನದಲ್ಲಿ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಖದೀಮರು ದೇವಸ್ಥಾ‌ನದ ಹುಂಡಿ ಹೊಡೆದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಸುಮಾರು ಒಂದು ಲಕ್ಷ ಹಣ ಕಳ್ಳತನವಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಶ್ವಾನದಳ, ಬೆರಳಚ್ಚು ತಜ್ಞರಿಂದ ದೇವಸ್ಥಾನದ ಪರಿಶೀಲನೆ ನಡೆಯುತ್ತಿದೆ. ಇನ್ನು ಕೆಟಿಜೆ ನಗರ ಠಾಣಾ ವ್ಯಾಪ್ತಿಯಲ್ಲಿ […]

ಆಯುಧ ಪೂಜೆ ದಿನವೇ ಹನುಮನ ದೇವಸ್ಥಾನದಲ್ಲಿ ಕಳ್ಳತನ.. ಯಾವೂರಲ್ಲಿ?

Updated on: Oct 25, 2020 | 10:03 AM

ದಾವಣಗೆರೆ: ಆಯುಧ ಪೂಜೆ ದಿನವೇ ಆಂಜನೇಯ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ರಾತ್ರಿ ಒಂದು ಗಂಟೆ ಸುಮಾರಿಗೆ ನಿಟ್ಟುವಳ್ಳಿ ಚಾಮುಂಡೇಶ್ವರಿ ಚಿತ್ರಮಂದಿರದ ಬಳಿ ಇರುವ ದೇವಸ್ಥಾ‌ನದಲ್ಲಿ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ.

ಖದೀಮರು ದೇವಸ್ಥಾ‌ನದ ಹುಂಡಿ ಹೊಡೆದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಸುಮಾರು ಒಂದು ಲಕ್ಷ ಹಣ ಕಳ್ಳತನವಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಶ್ವಾನದಳ, ಬೆರಳಚ್ಚು ತಜ್ಞರಿಂದ ದೇವಸ್ಥಾನದ ಪರಿಶೀಲನೆ ನಡೆಯುತ್ತಿದೆ.

ಇನ್ನು ಕೆಟಿಜೆ ನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಕಳೆದ ವಾರ ಇದೇ ಪ್ರದೇಶದ ಕೊಟ್ಟೂರೇಶ್ವರ ದೇವಸ್ಥಾನ ಹಾಗೂ ಒಂದು ಮನೆ ಕಳುವಾಗಿತ್ತು. ಇಂದು ಆಂಜನೇಯ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಸದ್ಯ ಕಳ್ಳರಿಗಾಗಿ ಕೆಟಿಜೆ ನಗರ ಠಾಣೆ ಪೋಲೀಸರು ಪತ್ತೆಗಾಗಿ ಜಾಲ ಬೀಸಿದ್ದಾರೆ.

Published On - 8:52 am, Sun, 25 October 20