
ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆರಾಯನ ಆರ್ಭಟದಿಂದ ಎದುರಾಗಿರುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಕಷ್ಟದಿಂದ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಇತ್ತ ಜಿಲ್ಲೆಯ ಮೂಕಜೀವಿಗಳು ಸಹ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಅಂಥದ್ದೇ ಒಂದು ದೃಶ್ಯ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಕಂಡುಬಂದಿದೆ.
ಆದರೆ, ಕಳೆದ ಕೆಲವು ದಿನಗಳಿಂದ ದಟ್ಟ ಮಂಜು ಹಾಗೂ ಸತತ ಮಳೆಯಿಂದ ವಾಹನಗಳನ್ನು ನಿಲ್ಲಿಸಲು ಸವಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಭಾರಿ ಮಳೆಯಿಂದ ಕಾಡಿಗೂ ಹೋಗಲಾರದೇ ಇತ್ತ ಪ್ರವಾಸಿಗರಿಂದ ಆಹಾರವೂ ಸಿಗದೇ ಕೋತಿಗಳು ಕಂಗಾಲಾಗಿವೆ.