ಬೆಂಗಳೂರಿಗರೇ ಎಚ್ಚರ.. ಡಿಸೆಂಬರ್ ನಂತರ ಎದುರಾಗಲಿದೆ ಕೊರೊನಾ ಮಹಾ ಕಂಟಕ

ಬೆಂಗಳೂರು: ರಾಜಧಾನಿ ಜನರೇ ಎಚ್ಚರ ಎಚ್ಚರ.. ಮಹಮಾರಿ ಕೊರೊನಾ ಆರ್ಭಟಕ್ಕೆ ತಜ್ಞರು ಬೆಚ್ಚಿಬಿದ್ದಿದ್ದಾರೆ. ಡಿಸೆಂಬರ್​​ವರೆಗೂ ಹೆಮ್ಮಾರಿ ಅಟ್ಟಹಾಸ ಮತ್ತಷ್ಟು ಭಾದಿಸಲಿದೆಯಂತೆ. ಇನ್ಮುಂದೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆಯಂತೆ. ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮತ್ತಷ್ಟು ಜಾಸ್ತಿಯಾಗಿದೆ. ಕೇವಲ ಹತ್ತು ದಿನಗಳಲ್ಲಿ 35 ಸಾವಿರದ 599 ಕೇಸ್​ಗಳು ಪತ್ತೆಯಾಗಿವೆ. ಕೇವಲ 10 ದಿನಗಳಲ್ಲಿ 280 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮತ್ತೆ ಹೆಚ್ಚಾಗ್ತಿದೆ ಸಾವಿನ ಸಂಖ್ಯೆ ಹಾಗೂ ಸೋಂಕಿತರ ಸಂಖ್ಯೆ. ಚಳಿಗಾಲ ಶುರುವಾಗ್ತಿದ್ದು […]

ಬೆಂಗಳೂರಿಗರೇ ಎಚ್ಚರ.. ಡಿಸೆಂಬರ್ ನಂತರ ಎದುರಾಗಲಿದೆ ಕೊರೊನಾ ಮಹಾ ಕಂಟಕ

Updated on: Oct 06, 2020 | 7:27 AM

ಬೆಂಗಳೂರು: ರಾಜಧಾನಿ ಜನರೇ ಎಚ್ಚರ ಎಚ್ಚರ.. ಮಹಮಾರಿ ಕೊರೊನಾ ಆರ್ಭಟಕ್ಕೆ ತಜ್ಞರು ಬೆಚ್ಚಿಬಿದ್ದಿದ್ದಾರೆ. ಡಿಸೆಂಬರ್​​ವರೆಗೂ ಹೆಮ್ಮಾರಿ ಅಟ್ಟಹಾಸ ಮತ್ತಷ್ಟು ಭಾದಿಸಲಿದೆಯಂತೆ. ಇನ್ಮುಂದೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆಯಂತೆ.

ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಮತ್ತಷ್ಟು ಜಾಸ್ತಿಯಾಗಿದೆ. ಕೇವಲ ಹತ್ತು ದಿನಗಳಲ್ಲಿ 35 ಸಾವಿರದ 599 ಕೇಸ್​ಗಳು ಪತ್ತೆಯಾಗಿವೆ. ಕೇವಲ 10 ದಿನಗಳಲ್ಲಿ 280 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮತ್ತೆ ಹೆಚ್ಚಾಗ್ತಿದೆ ಸಾವಿನ ಸಂಖ್ಯೆ ಹಾಗೂ ಸೋಂಕಿತರ ಸಂಖ್ಯೆ.

ಚಳಿಗಾಲ ಶುರುವಾಗ್ತಿದ್ದು ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗಲಿವೆ. ಕೊರೊನಾ ಅಟ್ಯಾಕ್ ಆದ್ರೆ ನ್ಯೂಮೋನಿಯಾ ಇದ್ದವರ ಪ್ರಾಣಕ್ಕೆ ಕಂಟಕವಾಗಲಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆ ಅಸ್ತಮಾ ರೋಗಿಗಳಿಗೆ ಮೂರು ತಿಂಗಳು ಬಲು ಡೇಂಜರ್. ವಾತವರಣದಲ್ಲಿ ಶೀತಾಂಶವಿದ್ದು ಕೊರೊನಾ ಕಾಟ ಹೆಚ್ಚಾಗಲಿದೆ. ಹೀಗಾಗಿ ಮುಂದಿನ ಮೂರು ತಿಂಗಳು ತುಂಬಾ ಎಚ್ಚರಿಕೆಯಿಂದಿರಬೇಕು ಅಂತಿದ್ದಾರೆ ತಜ್ಞ ವೈದ್ಯರು.