ನಮ್ಮ ಸರ್ಕಾರದ ದೌರ್ಭಾಗ್ಯವೇ ಇಷ್ಟು.. ಏನ್ ಮಾಡೋದು -ಅಸಮಾಧಾನಿತ BJP ಶಾಸಕರ ನಡೆಗೆ B.Y.ರಾಘವೇಂದ್ರ ಬೇಸರ
ನಮ್ಮ ಸರ್ಕಾರದ ದೌರ್ಭಾಗ್ಯವೇ ಇಷ್ಟು ಏನ್ ಮಾಡೋದು ಎಂದು ಅಸಮಾಧಾನಿತ ಬಿಜೆಪಿ ಶಾಸಕರ ನಡೆಗೆ ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.
ದಾವಣಗೆರೆ: ನಮ್ಮ ಸರ್ಕಾರದ ದೌರ್ಭಾಗ್ಯವೇ ಇಷ್ಟು ಏನ್ ಮಾಡೋದು ಎಂದು ಅಸಮಾಧಾನಿತ ಬಿಜೆಪಿ ಶಾಸಕರ ನಡೆಗೆ ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ನಮ್ಮ ಶಾಸಕರಿಗೆ ಸಚಿವರಾಗಬೇಕು ಅನ್ನುವ ಆಸೆ ಇರುತ್ತದೆ. ಆದ್ರೆ ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬಂದಿರಲಿಲ್ಲ. ಹೀಗಾಗಿ, ಬೇರೆ ಪಕ್ಷದವರು ರಾಜೀನಾಮೆ ನೀಡಿ ಬಂದಿದ್ದರು. ಅವರು ನಮ್ಮ ಪಕ್ಷಕ್ಕೆ ಬಂದಿದ್ದರಿಂದ ಅಧಿಕಾರಕ್ಕೆ ಬಂದೆವು. ಈಗ ಮಾತು ಕೊಟ್ಟಂತೆ ನಡೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ನಮ್ಮ ಮನೆಯ ಮಕ್ಕಳು ಹೊಂದಿಕೊಂಡು ಹೋಗಬೇಕಿದೆ. ನಾನು ರೇಣುಕಾಚಾರ್ಯರನ್ನು ಸಮಧಾನಪಡಿಸಲು ಬಂದಿಲ್ಲ. ಸಹಜವಾಗಿ ಹೊನ್ನಾಳಿಗೆ ಬಂದಿದ್ದರಿಂದ ರೇಣುಕಣ್ಣನ ಮನೆಗೆ ಬಂದು ಕಾಫಿ ಕುಡಿದು ಹೋಗ್ತಿನಿ. ಅವರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ, ಎಲ್ಲ ಸರಿಯಾಗುತ್ತದೆ. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಜೊತೆಗೆ, ರೇಣುಕಾಚಾರ್ಯ ಯಾವತ್ತೂ ಪಕ್ಷ ಹಾಗೂ ಯಡಿಯೂರಪ್ಪನವರ ಪರವಾಗಿ ಗೌರವ ಇಟ್ಟುಕೊಂಡ ಯುವನಾಯಕರು ಎಂದು ಸಹ ಹೇಳಿದರು.
ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯಬೇಕಿರಲಿಲ್ಲ -ಮಂಡ್ಯ ಸೋಲನ್ನು ಮರೆಯದ ನಿಖಿಲ್ ಕುಮಾರಸ್ವಾಮಿ