
ರಾಮನಗರ:ಇತ್ತೀಚೆಗೆ ಅರ್ಕಾವತಿ ನದಿಯಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಪ್ರಸ್ತಾಪ ಮಾಡಿದ ಹೆಚ್‌ಡಿ ಕುಮಾರಸ್ವಾಮಿ ಅರ್ಕಾವತಿ ನದಿಯಲ್ಲಿ ಮರಳು ದಂಧೆಗೆ 15 ರಿಂದ 20 ಅಡಿ ಗುಂಡಿ ತೋಡಿದ್ದಾರೆ. ಸಂಸದ ಮತ್ತು ಅವನ ಚೇಲಾಗಳು ಮರಳು ದಂಧೆ ಮಾಡ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ರಾಮನಗರ ತಾಲೂಕಿನ ಕೂನಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ HD ಕುಮಾರಸ್ವಾಮಿ, ಕಾಂಗ್ರೆಸ್ನ 5 ವರ್ಷಗಳ ಅವಧಿಯಲ್ಲಿ ಮರಳು ದಂಧೆ ನಡೆಸಲಾಗಿದೆ. ನಾನು ಶಾಸಕನಾಗಿದ್ದರೂ ಕೂಡ ಕಾಂಗ್ರೆಸ್ ಸರ್ಕಾರ ಇತ್ತು. ಮರಳು ದಂಧೆಗೆ ಕಡಿವಾಣ ಹಾಕಲು ನನ್ನಿಂದ ಆಗಲಿಲ್ಲ. ಕಾಂಗ್ರೆಸ್ನವರೇ ಮರಳು ದಂಧೆ ಮಾಡುತ್ತಿರುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಮರಳು ದಂಧೆ ನಡೆಸದಂತೆ ನನ್ನ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ
Published On - 4:30 pm, Thu, 5 November 20