ಇನ್‌ಸ್ಟಾಗ್ರಾಮ್‌ನಲ್ಲೂ ಧೋನಿಯದ್ದೇ ಹವಾ..! ಅತೀ ಹೆಚ್ಚು ಫಾಲೋವರ್ಸ್‌ ಪಡೆದ 2ನೇ ಭಾರತೀಯ ಕ್ರಿಕೆಟಿಗ ಕ್ಯಾಪ್ಟನ್​ ಕೂಲ್​..

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 10, 2021 | 1:05 PM

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಿವೃತ್ತಿಯ ವಿಚಾರವನ್ನು ಧೋನಿ ಸರಳವಾದ ಪೋಸ್ಟ್ ಮಾಡುವ ಮೂಲಕ ಘೋಷಿಸಿದ್ದರು. ಧೋನಿಯ ನಿವೃತ್ತಿ ಫೋಸ್ಟ್​ ಇಲ್ಲಿಯವರೆಗೆ 3.72 ಕೋಟಿ ವೀಕ್ಷಣೆಗಳನ್ನು ಗಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ತೊಡಗಿಸಿಕೊಳ್ಳದ ವ್ಯಕ್ತಿ ಧೋನಿ.

ಇನ್‌ಸ್ಟಾಗ್ರಾಮ್‌ನಲ್ಲೂ ಧೋನಿಯದ್ದೇ ಹವಾ..! ಅತೀ ಹೆಚ್ಚು ಫಾಲೋವರ್ಸ್‌ ಪಡೆದ 2ನೇ ಭಾರತೀಯ ಕ್ರಿಕೆಟಿಗ ಕ್ಯಾಪ್ಟನ್​ ಕೂಲ್​..
ಮಹೇಂದ್ರ ಸಿಂಗ್ ಧೋನಿ (ಸಂಗ್ರಹ ಚಿತ್ರ)
Follow us on

ಎಂ.ಎಸ್.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್​ನ ನಿವೃತ್ತಿಯ ನಂತರವೂ ಸುದ್ದಿಯಲ್ಲಿದ್ದಾರೆ. ಭಾರತೀಯ ಕ್ರಿಕೆಟಿಗ ಇನ್​ಸ್ಟಾಗ್ರಾಮ್​ನಲ್ಲೂ 3 ಕೋಟಿ ಅನುಯಾಯಿಗಳನ್ನು ಗಳಿಸಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ವಾಸ್ತವವಾಗಿ ಧೋನಿ ಸಾಮಾಜಿಕ ಜಾಲತಾಣಗಳಿಂದ ಕೊಂಚ ದೂರವೇ ಇದ್ದರು ಸಹ ಫಾಲೋವರ್ಸ್​ಗಳಿಗೇನು ಕಡಿಮೆ ಇಲ್ಲ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿವೃತ್ತಿಯ ವಿಚಾರವನ್ನು ಧೋನಿ ಸರಳವಾದ ಪೋಸ್ಟ್ ಮಾಡುವ ಮೂಲಕ ಘೋಷಿಸಿದ್ದರು. ಧೋನಿಯ ನಿವೃತ್ತಿ ಫೋಸ್ಟ್​ ಇಲ್ಲಿಯವರೆಗೆ 3.72 ಕೋಟಿ ವೀವ್ಸ್​ ಗಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ತನ್ನನ್ನು ಹೆಚ್ಚು ತೊಡಗಿಸಿಕೊಳ್ಳದ ವ್ಯಕ್ತಿ ಧೋನಿ. ವಾಸ್ತವವಾಗಿ, ಧೋನಿ ಇನ್​ಸ್ಟಾಗ್ರಾಮ್​ಗೆ ಸೇರಿದಾಗಿನಿಂದ, ಕೇವಲ 108 ಬಾರಿ ಪೋಸ್ಟ್ ಮಾಡಿದ್ದಾರೆ. ಇದಲ್ಲದೆ, ಕಳೆದ ಒಂದು ವರ್ಷದಲ್ಲಿ, ಧೋನಿ ಇನ್​ಸ್ಟಾಗ್ರಾಮ್​ನಲ್ಲಿ ಕೇವಲ ಮೂರು ಬಾರಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಖಾತೆಯಲ್ಲಿ ಸದಾ ಸಕ್ರಿಯರಾಗಿರದಿದ್ದರು ಧೋನಿ ಇಷ್ಟರ ಮಟ್ಟಿಗೆ ಫಾಲೋವರ್ಸ್ ಹೊಂದಿರುವುದು ಬಹಳ ವಿಶೇಷವಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ, ವಿರಾಟ್ ಕೊಹ್ಲಿ ಪ್ರಸ್ತುತ 8.87 ಕೋಟಿ ಫಾಲೋವರ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ. ವಾಸ್ತವವಾಗಿ ಹೇಳಬೇಕೆಂದರೆ ಇನ್​ಸ್ಟಾಗ್ರಾಮ್​ನಲ್ಲಿ 8 ಕೋಟಿ ಅನುಯಾಯಿಗಳನ್ನು ಹೊಂದಿರುವ ಏಕೈಕ ಭಾರತೀಯ ಕೊಹ್ಲಿ ಆಗಿದ್ದಾರೆ. ಧೋನಿಗೆ ತದ್ವಿರುದ್ಧವಾಗಿ, ಕೊಹ್ಲಿ ಇನ್​ಸ್ಟಾಗ್ರಾಮ್​ನಲ್ಲಿ 1109 ಬಾರಿ ಪೋಸ್ಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ, ಎಂ.ಎಸ್.ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಇನ್​ಸ್ಟಾಗ್ರಾಮ್​ ಅನ್ನು ಅಕ್ಷರಶಃ ಆಳುತ್ತಿದ್ದಾರೆ. ಧೋನಿ ಮತ್ತು ಕೊಹ್ಲಿ ನಂತರ ಮೂರನೇ ಸ್ಥಾನವನ್ನು ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಆಕ್ರಮಿಸಿಕೊಂಡಿದ್ದಾರೆ. ‘ಗಾಡ್ ಆಫ್ ಕ್ರಿಕೆಟ್’ ಇನ್‌ಸ್ಟಾಗ್ರಾಮ್‌ನಲ್ಲಿ 2.75 ಕೋಟಿ ಫಾಲೋವರ್ಸ್ ಹೊಂದಿದ್ದಅರೆ. ಖಾತೆಯಲ್ಲಿ ಆಗಾಗ್ಗೆ ಪೋಸ್ಟ್‌ಗಳೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಚಿನ್ ಇದುವರೆಗೂ ಇನ್‌ಸ್ಟಾಗ್ರಾಮ್‌ನಲ್ಲಿ 786 ಬಾರಿ ಪೋಸ್ಟ್ ಮಾಡಿದ್ದಾರೆ.

ಧೋನಿ ತೋಟದಲ್ಲಿ ಬೆಳೆದ ಕ್ಯಾಬೇಜ್​, ಟೊಮ್ಯಾಟೋಕ್ಕೆ ಭರ್ಜರಿ ಬೇಡಿಕೆ..; ಶೀಘ್ರವೇ ದುಬೈಗೆ ರಫ್ತು!