ಮುಖ್ಯಾಧಿಕಾರಿ ಸಹಿ ಮಾಡಿಲ್ಲ ಅಂತ ಬೆಂಬಲಿಗನ ಜೊತೆ ಬಂದು ಸದಸ್ಯನಿಂದ ಹಲ್ಲೆ

|

Updated on: Jan 20, 2021 | 9:01 AM

ಪುರಸಭೆಯ ಮುಖ್ಯಾಧಿಕಾರಿ ಅಭಯ್ ಮೇಲೆ ಚಿಂಚೋಳಿ ಪುರಸಭೆಯ ಸದಸ್ಯನಾಗಿರುವ ಆನಂದ್ ಟೈಗರ್, ತನ್ನ ಬೆಂಬಲಿಗ ಶಶಿಕುಮಾರ್ ಜತೆ ಆಗಮಿಸಿ ಹಲ್ಲೆ ಮಾಡಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಖ್ಯಾಧಿಕಾರಿ ಸಹಿ ಮಾಡಿಲ್ಲ ಅಂತ ಬೆಂಬಲಿಗನ ಜೊತೆ ಬಂದು ಸದಸ್ಯನಿಂದ ಹಲ್ಲೆ
ಪುರಸಭೆ ಮುಖ್ಯಾಧಿಕಾರಿಯ ಮೇಲೆ ಸದಸ್ಯನಿಂದ ಹಲ್ಲೆ
Follow us on

ಕಲಬುರಗಿ: ಪುರಸಭೆಯ ಮುಖ್ಯಾಧಿಕಾರಿ ಮೇಲೆ ಪುರಸಭೆ ಸದಸ್ಯ ಗುಂಡಾಗಿರಿ ಪ್ರದರ್ಶಿಸಿರುವ ಘಟನೆ ಜಿಲ್ಲೆಯ ಚಿಂಚೋಳಿ ಪಟ್ಟಣದ ಪುರಸಭೆ ಕಚೇರಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಪುರಸಭೆ ಮುಖ್ಯಾಧಿಕಾರಿಯ ಮೇಲೆ ಸದಸ್ಯ ಹಲ್ಲೆ ನಡೆಸಿದ್ದಾನೆ.

ಪುರಸಭೆಯ ಮುಖ್ಯಾಧಿಕಾರಿ ಅಭಯ್ ಮೇಲೆ ಚಿಂಚೋಳಿ ಪುರಸಭೆಯ ಸದಸ್ಯನಾಗಿರುವ ಆನಂದ್ ಟೈಗರ್, ತನ್ನ ಬೆಂಬಲಿಗ ಶಶಿಕುಮಾರ್ ಜತೆ ಆಗಮಿಸಿ ಹಲ್ಲೆ ಮಾಡಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಕಲಿ ಬಿಲ್‌ಗಳಿಗೆ ಸಹಿ ಮಾಡಿ ಚೆಕ್ ನೀಡಲು ಆನಂದ್ ಬೇಡಿಕೆ ಇಟ್ಟಿದ್ದ.

ಮುಖ್ಯಾಧಿಕಾರಿ ಅಭಯ್ ಮೇಲೆ ಒತ್ತಡ ಹಾಕಿದ್ದ. ಇವನ ಮಾತಿಗೆ ಮಣಿಯದೆ ಸಹಿ ಮಾಡದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ. ಸದಸ್ಯ ಆನಂದ್ ಮತ್ತು ಆತನ ಸಹಚರ ಶಶಿಕುಮಾರ್ ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಮೀನು ವಿಚಾರ: ಬಾಮೈದನ ಮೇಲೆ ಇಬ್ಬರು ಭಾವಂದಿರಿಂದ ಹಲ್ಲೆ, ಯಾವೂರಲ್ಲಿ?