2016ರಲ್ಲಿ ನಡೆದಿದ್ದ ಪ್ರಕರಣ.. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಶಿಕ್ಷಕನಿಗೆ 10 ವರ್ಷ ಜೈಲು ಶಿಕ್ಷೆ

Mysuru 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಪರಾಧಿ ಶಿಕ್ಷಕನಿಗೆ 10 ವರ್ಷ ಜೈಲು ಮತ್ತು ₹50 ಸಾವಿರ ದಂಡ ವಿಧಿಸಿ ಮೈಸೂರಿನ ಎಫ್‌ಟಿಎಸ್‌ಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ಪ್ರಕಟಿಸಿದೆ.

2016ರಲ್ಲಿ ನಡೆದಿದ್ದ ಪ್ರಕರಣ.. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಶಿಕ್ಷಕನಿಗೆ 10 ವರ್ಷ ಜೈಲು ಶಿಕ್ಷೆ
ಪ್ರಾತಿನಿಧಿಕ ಚಿತ್ರ

Updated on: Feb 04, 2021 | 1:36 PM

ಮೈಸೂರು: 14 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಅಪರಾಧಿ ಶಿಕ್ಷಕನಿಗೆ 10 ವರ್ಷ ಜೈಲು ಮತ್ತು ₹50 ಸಾವಿರ ದಂಡ ವಿಧಿಸಿ ಮೈಸೂರಿನ ಎಫ್‌ಟಿಎಸ್‌ಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ಪ್ರಕಟಿಸಿದೆ. ಮೈಸೂರಿನಲ್ಲಿ ನವೆಂಬರ್​​​ 2016ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈಗ ಇದರ ತೀರ್ಪು ಹೊರ ಬಿದ್ದಿದ್ದು ಅಪರಾಧಿಗೆ ತಕ್ಕ ಶಿಕ್ಷೆಯಾಗಿದೆ.

ಘಟನೆ ಹಿನ್ನೆಲೆ
ಮೈಸೂರಿನ ಹುಲ್ಲಿನ ಬೀದಿಯಲ್ಲಿ ಕೆ.ಎಂ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ ಶಿಕ್ಷಕನೊಬ್ಬ SSLCಯಲ್ಲಿ ಟಾಪರ್ ಮಾಡುವುದಾಗಿ ಆಮಿಷ ಹೊಡ್ಡಿ ಬಾಲಕಿಗೆ ಕೋಚಿಂಗ್ ಹೊಡುತ್ತಿದ್ದ. ಈ ವೇಳೆ ಒಂದು ದಿನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ‌ ಕಿರುಕುಳ ನೀಡಿದ್ದ. ಈ ಸಂಬಂಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪೋಕ್ಸೋ‌ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಧೀಶರಾದ ಬಿ.ಎಸ್ ಜಯಶ್ರೀ ಅವರಿಂದ ತೀರ್ಪು ಪ್ರಕಟವಾಗಿದೆ. ಎಂ.ಎಸ್.ಮಂಜುಳಾ ಎಂಬುವವರು ಸರ್ಕಾರದ ಪರ ವಾದ ಮಂಡಿಸಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಸೂಕ್ತ ಪರಿಹಾರ ನೀಡಲು ಕೋರ್ಟ್ ಆದೇಶ ನೀಡಿದೆ.

ಮಂಡ್ಯ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಪ್ರೌಢಶಾಲಾ ಶಿಕ್ಷಕ ಅರೆಸ್ಟ್

Published On - 1:34 pm, Thu, 4 February 21