ಕೊರೊನಾ ದೃಢಪಡುತ್ತಿದ್ದಂತೆ ಸೋಂಕಿತನನ್ನು ನಡುರಾತ್ರಿಯಲ್ಲಿ ಹೊರದಬ್ಬಿದ ಖಾಸಗಿ ಆಸ್ಪತ್ರೆ!

|

Updated on: Jul 01, 2020 | 9:43 AM

ಬೆಂಗಳೂರು: ನಗರದಲ್ಲಿ ಮಹಾಮಾರಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದರ ಜೊತೆಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಸಹ ಹೆಚ್ಚುತ್ತಿದೆ. ಈಗ ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಆಸ್ಪತ್ರೆಯ ಅತಿ ಕರಾಳ ಮುಖ ಅನಾವರಣಗೊಂಡಿದೆ. ಕೆಮ್ಮು, ಲೋ ಬಿಪಿಯಿಂದ ಬಳಲುತ್ತಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಬ್ ಟೆಸ್ಟ್ ಮಾಡಿಸಿದ್ದ. ನಂತರ ಬಂದ ವರದಿಯಲ್ಲಿ ಆತನಿಗೆ ಸೋಂಕು ಇರುವುದ ದೃಢಪಟ್ಟಿದೆ. ಹೀಗಾಗಿ ಸಂಬಂಧಿಕರಿಗೆ ಸೋಂಕು ತಗುಲಿರುವುದ ತಿಳಿಸದೆ. ಬೇರೆ ಆಸ್ಪತ್ರೆಗೆ ಸೋಂಕಿತ ವ್ಯಕ್ತಿಯನ್ನ ಶಿಪ್ಟ್ ಮಾಡಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆ […]

ಕೊರೊನಾ ದೃಢಪಡುತ್ತಿದ್ದಂತೆ ಸೋಂಕಿತನನ್ನು ನಡುರಾತ್ರಿಯಲ್ಲಿ ಹೊರದಬ್ಬಿದ ಖಾಸಗಿ ಆಸ್ಪತ್ರೆ!
Follow us on

ಬೆಂಗಳೂರು: ನಗರದಲ್ಲಿ ಮಹಾಮಾರಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದರ ಜೊತೆಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯ ಸಹ ಹೆಚ್ಚುತ್ತಿದೆ. ಈಗ ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಆಸ್ಪತ್ರೆಯ ಅತಿ ಕರಾಳ ಮುಖ ಅನಾವರಣಗೊಂಡಿದೆ.

ಕೆಮ್ಮು, ಲೋ ಬಿಪಿಯಿಂದ ಬಳಲುತ್ತಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಬ್ ಟೆಸ್ಟ್ ಮಾಡಿಸಿದ್ದ. ನಂತರ ಬಂದ ವರದಿಯಲ್ಲಿ ಆತನಿಗೆ ಸೋಂಕು ಇರುವುದ ದೃಢಪಟ್ಟಿದೆ. ಹೀಗಾಗಿ ಸಂಬಂಧಿಕರಿಗೆ ಸೋಂಕು ತಗುಲಿರುವುದ ತಿಳಿಸದೆ. ಬೇರೆ ಆಸ್ಪತ್ರೆಗೆ ಸೋಂಕಿತ ವ್ಯಕ್ತಿಯನ್ನ ಶಿಪ್ಟ್ ಮಾಡಲು ಸೂಚಿಸಲಾಗಿದೆ.

ಖಾಸಗಿ ಆಸ್ಪತ್ರೆ ನಡುರಾತ್ರಿಯೇ ಸೋಂಕಿತನನ್ನು ಬೀದಿಗೆ ತಳ್ಳಿದೆ. ರೋಗಿ ಮೂರ್ನಾಲ್ಕು ಗಂಟೆ ಌಂಬುಲೆನ್ಸ್​ನಲ್ಲಿ ನರಳಾಡಿದ್ದಾರೆ. ಈ ಅಮಾನವೀಯ ಘಟನೆಗೆ ನಾಗರಬಾವಿ ಖಾಸಗಿ ಆಸ್ಪತ್ರೆ ವಿರುದ್ಧ ರೋಗಿ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ. ಬೆಡ್ ಇಲ್ಲ ಅಂತ ಹೇಳಿ ಸತತ ಮೂರು ಗಂಟೆಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ್ದಾರೆ. ಕೊನೆಗೆ ಪೊಲೀಸರ ಸಹಾಯದಿಂದ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎರಡೇ ದಿನಕ್ಕೆ 1 ಲಕ್ಷ ವಸೂಲಿ
ಅಲ್ಲದೆ ಎರಡೇ ದಿನಕ್ಕೆ ಬರೋಬ್ಬರಿ ಒಂದು ಲಕ್ಷ ಹಣ ವಸೂಲಿ ಮಾಡಲಾಗಿದೆ. ಐಸಿಯು ಚಾರ್ಜ್ 1ದಿನಕ್ಕೆ 35 ಸಾವಿರ ವಸೂಲಿ ಮಾಡಿದ್ದಾರೆಂದು ನಾಗರಬಾವಿ ಖಾಸಗಿ ಆಸ್ಪತ್ರೆ ವಿರುದ್ಧ ರೋಗಿ ಸಂಬಂಧಿಕರ ಆರೋಪಿಸಿದ್ದಾರೆ.

Published On - 9:28 am, Wed, 1 July 20