ಮತದಾನ ಮಾಡುವ ಉತ್ಸಾಹದಲ್ಲಿ ಕೊರೊನಾವನ್ನೇ ಮರೆತ ಜನ.. ನಿಯಮ ಉಲ್ಲಂಘನೆ

| Updated By: ಸಾಧು ಶ್ರೀನಾಥ್​

Updated on: Dec 22, 2020 | 10:50 AM

ನರೇಂದ್ರ ಗ್ರಾಮದ ಜನ ಕೊರೊನಾ ವೈರಸ್​ ಸಾಂಕ್ರಾಮಿಕ ರೋಗವನ್ನು ಮರೆತು ಮಾಸ್ಕ್​ ಇಲ್ಲದೇ ಮತಗಟ್ಟೆಗೆ ಬಂದು ಮತಚಲಾಯಿಸುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ..

ಮತದಾನ ಮಾಡುವ ಉತ್ಸಾಹದಲ್ಲಿ ಕೊರೊನಾವನ್ನೇ ಮರೆತ ಜನ.. ನಿಯಮ ಉಲ್ಲಂಘನೆ
ಸೀರೆ ಸೆರಗನ್ನೇ ಮೂಗಿಗೆ ಕಟ್ಟಿಕೊಂಡ ಮಹಿಳೆಯರು..
Follow us on

ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ  ಉತ್ಸಾಹದಲ್ಲಿ ಜನರು ಕೊರೊನಾ ವೈರಸನ್ನೂ ಮರೆಯುತ್ತಿದ್ದಾರೆ.. ಇಲ್ಲಿನ ನರೇಂದ್ರ ಗ್ರಾಮದ ಮತಗಟ್ಟೆಗೆ ಮತ ಚಲಾಯಿಸಲು ಬರುತ್ತಿರುವ ಬಹುತೇಕರು ಮಾಸ್ಕ್ ಧರಿಸಿಲ್ಲ.. ಸಾಮಾಜಿಕ ಅಂತರ ನಿಯಮವೂ ಪಾಲನೆ ಆಗುತ್ತಿಲ್ಲ.

ಗ್ರಾಮ ಪಂಚಾಯತಿ ಚುನಾವಣೆ ನಿಮಿತ್ತ ಎಲ್ಲ ಮತಗಟ್ಟೆಗಳಲ್ಲೂ ಹೆಚ್ಚಾಗಿ ಜನರು ಸೇರುತ್ತಿದ್ದಾರೆ.. ಗುಂಪುಗೂಡುತ್ತಿದ್ದಾರೆ. ಮತದಾರರು ಕೊರೊನಾ ನಿಯಂತ್ರಣ ನಿಯಮಗಳ ಪಾಲನೆ ಮಾಡದೆ ಇದ್ದರೂ ಅವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇನ್ನು ಕೆಲವೆಡೆ ಪೊಲೀಸರ ಕಣ್ಣುತಪ್ಪಿಸಲು ಕೆಲವು ಮಹಿಳೆಯರು ಉಟ್ಟಿದ್ದ ಸೀರೆ ಸೆರಗನ್ನೇ ಮೂಗಿಗೆ ಕಟ್ಟಿಕೊಂಡಿದ್ದು ಕಂಡುಬಂದಿದೆ.

ರಾಮನಗರ: ಗ್ರಾಮ ಪಂಚಾಯತಿಗೆ 7ನೇ ಬಾರಿ ಅವಿರೋಧ ಆಯ್ಕೆಯಾಗಿ ದಾಖಲೆ ಬರೆದ ಮಹಿಳೆ

Published On - 10:37 am, Tue, 22 December 20