ಮಹಿಳೆ ಮೇಲೆ ದೌರ್ಜನ್ಯ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ದ FIR
ಮಹಿಳೆ ಮೇಲೆ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ FIR ದಾಖಲಾಗಿದೆ.
ಬೆಂಗಳೂರು: ಮಹಿಳೆ ಮೇಲೆ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ FIR ದಾಖಲಾಗಿದೆ. ಈ ಹಿಂದೆ ಚಿಕ್ಕಪೇಟೆ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ನ ಕಾರ್ಪೊರೇಟರ್ ಅಗಿದ್ದ ಧನರಾಜ್, ಲಾಲ್ ಬಾಗ್ ರಸ್ತೆಯಲ್ಲಿನ ಕಲ್ಕತ್ ಟ್ಯೂಬ್ ಶಾಪ್ಗೆ ನುಗ್ಗಿ ದಾಂದಲೆ ಮಾಡಿದ್ದರು ಎಂಬ ಆರೋಪವಿದೆ.
ಅಂಗಡಿಗೆ ಬಂದ ಧನರಾಜ್ ಪೈಪ್ ಕೊಟೇಷನ್ ಕೇಳಿ ಕಡಿಮೆ ಬೆಲೆಗೆ ನೀಡಿ ಎಂದು ಕಿರಿಕ್ ಮಾಡಿದ್ದರು. ತನಗೆ ಬೇಕಾದ ಬ್ರಾಂಡ್ ಮೆಟೀರಿಯಲ್ಸ್ ಕಡಿಮೆ ಬೆಲೆಗೆ ನೀಡುವಂತೆ ಅಂಗಡಿ ಮಾಲೀಕ ಸಾವರ್ ಮಲ್ ಅಗರ್ವಾಲ್ ಮೇಲೆ ಧಮ್ಕಿ ಹಾಕಿದ್ದರು.
ಈ ವೇಳೆ ಪ್ರಶ್ನೆ ಮಾಡಿದ ಸೊಸೆ ಪೂಜಾ ಅಗರ್ವಾಲ್ ಮೇಲೆ ಧನರಾಜ್ ದೌರ್ಜನ್ಯ ಮಾಡಿದ್ದರು. ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ FIR ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
Published On - 10:21 am, Tue, 22 December 20