ಬೀದರ್: ಪಂಚತಾರಾ ವಿಶ್ವ ವಿದ್ಯಾಲಯದಲ್ಲಿ ಸಿಬ್ಬಂದಿ ಕೊರತೆ; ಬರೋಬ್ಬರಿ 1269 ಹುದ್ದೆಗಳು ಖಾಲಿ!
ಗಡಿ ಜಿಲ್ಲೆ ಬೀದರ್ನಲ್ಲಿರುವ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಿ ವಿಶ್ವವಿದ್ಯಾಲಯಕ್ಕೆ ಈಗ ಅನಾಥ ಪ್ರಜ್ಞೆ ಕಾಡತೊಡಗಿದೆ. ಇಲ್ಲಿ ವಿದ್ಯಾಭ್ಯಾಸ ಪಡೆದ ಹಲವಾರು ವಿದ್ಯಾರ್ಥಿಗಳು ರಾಜ್ಯದ ಹಲವು ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ವಿಜ್ಞಾನಿಗಳೂ ಕೂಡಾ ಆಗಿದ್ದಾರೆ. ಆದರೆ ಇಂತಹ ವಿವಿಯಲ್ಲಿ ನೂರಾರು ಹುದ್ದೆಗಳು ಖಾಲಿಯಿದ್ದು ಆಡಳಿತ ಯಂತ್ರ ಇದೀಗ ಕುಸಿಯುತ್ತಿದೆ
ಬೀದರ್: ದೇಶದ 5 ಸ್ಟಾರ್ ಗ್ರೇಡ್ ಹೊಂದಿರುವ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸಿಬ್ಬಂದಿಯ ಕೊರತೆ ಕಾಡುತ್ತಿದೆ.
ಗಡಿ ಜಿಲ್ಲೆ ಬೀದರ್ನಲ್ಲಿರುವ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಈಗ ಅನಾಥ ಪ್ರಜ್ಞೆ ಕಾಡತೊಡಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಹಲವಾರು ವಿದ್ಯಾರ್ಥಿಗಳು ರಾಜ್ಯದ ಹಲವು ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ವಿಜ್ಞಾನಿಗಳೂ ಕೂಡಾ ಆಗಿದ್ದಾರೆ. ಆದರೆ ಇಂತಹ ವಿವಿಯಲ್ಲಿ ನೂರಾರು ಹುದ್ದೆಗಳು ಖಾಲಿಯಿದ್ದು ಆಡಳಿತ ಯಂತ್ರ ಇದೀಗ ಕುಸಿಯುತ್ತಿದೆ.
ಈ ವಿಶ್ವವಿದ್ಯಾಲಯ ಆರಂಭವಾದಾಗಿನಿಂದಲೂ ಇರುವ ವಿವಿಧ ಹುದ್ದೆಗಳು ಭರ್ತಿ ಮಾಡಿಲ್ಲ. ಹೀಗಾಗಿ ವಿಶ್ವ ವಿದ್ಯಾಲಯದಲ್ಲಿ ಆಫೀಸರ್ಸ್, ಟೀಚಿಂಗ್, ಟೆಕ್ನಿಕಲ್, ನಾನ್ ಟೀಚಿಂಗ್ ಸೇರಿ ಒಟ್ಟು 1,269 ಹುದ್ದೆಗಳು ಖಾಲಿಯಿದ್ದು, ಇಲ್ಲಿನ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ರಾಜ್ಯದ 5 ಕಡೆಗಳಲ್ಲಿ ಪಶುವೈದ್ಯಕೀಯ ಕಾಲೇಜು ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ರಾಜ್ಯದ ಐದು ಕಡೆಗಳಲ್ಲಿ ಪಶುವೈದ್ಯಕೀಯ ಕಾಲೇಜುಗಳಿದ್ದು, ಅಥಣಿ ಮತ್ತು ಪುತ್ತೂರಗಳಲ್ಲಿ ಈಗ ಹೊಸದಾಗಿ ಆರಂಭವಾಗಿವೆ ಎಂದು ವಿಶ್ವವಿದ್ಯಾಲಯದ ಕುಲಪತಿಯಾದ ನಾರಾಯಣ ಸ್ವಾಮಿ ತಿಳಿಸಿದರು.
ವಿಶ್ವವಿದ್ಯಾಲಯದ ರಾಜ್ಯದ ವಿವಿಧ ಭಾಗದಲ್ಲಿ ಈಗ 425 ಪದವೀಧರರು, 122 ಸ್ನಾತಕೋತ್ತರ ಪದವೀಧರರು, 24 ಪಿಎಚ್ಡಿ , 230 ಡಿಪ್ಲೋಮಾ ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಎಲ್ಲಾ ಕೆಲಸವನ್ನೂ ಇರುವ ಸಿಬ್ಬಂದಿಯವರೇ ಹಂಚಿಕೊಂಡು ನಿರ್ವಹಿಸಬೇಕಾದ್ದರಿಂದ ಕೆಲಸದ ಒತ್ತಡವೂ ಜಾಸ್ತಿಯಾಗಿದೆ. ಆದರೂ ಇಂತಹ ಸಂದಿಗ್ದ ಸ್ಥಿತಿಯ ಮಧ್ಯದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದೇವೆಂದು ವಿಶ್ವವಿದ್ಯಾಲಯದ ಕುಲಪತಿಯಾದ ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಪಶು ಸಂಗೋಪನಾ ಇಲಾಖೆಯಲ್ಲಿಯೂ ಸಿಬ್ಬಂದಿ ಸಮಸ್ಯೆ ವಿಶ್ವವಿದ್ಯಾಲಯ ಸಿಬ್ಬಂದಿ ಸಮಸ್ಯೆಯ ಜೊತೆಗೆ ಜಿಲ್ಲೆಯಲ್ಲಿರುವ ಪಶು ಸಂಗೋಪನಾ ಇಲಾಖೆಯಲ್ಲಿಯೂ ಕೂಡಾ ಸಿಬ್ಬಂದಿಯ ಕೊರತೆಯಿದೆ. ಉಪನಿರ್ದೇಶಕರು, ಮುಖ್ಯ ಪಶು ವೈದ್ಯಾಧಿಕಾರಿಗಳು, ಹಿರಿಯ ಪಶು ವೈದ್ಯಾಧಿಕಾರಿಗಳು, ಪಶು ವೈದ್ಯಾಧಿಕಾರಿ, ಜಾನುವಾರು ಅಭಿವೃದ್ಧಿ ಅಧಿಕಾರಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 184 ಪ್ರಮುಖ ಹುದ್ದೆಗಳು ಖಾಲಿಯಿದ್ದು, ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ.
ಒಟ್ಟಾರೆಯಾಗಿ ಪಶು ಸಂಗೋಪನಾ ಇಲಾಖೆ ಸಚಿವರಾಗಿರುವ ಪ್ರಭು ಚೌಹಾಣ್ ರ ಕ್ಷೇತ್ರದಲ್ಲಿ ವೈದ್ಯರ ಸಮಸ್ಯೆ ಹೆಚ್ಚಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ನಾನಾ ಯೋಜನೆಗಳ ಅನುಷ್ಠಾನಕ್ಕೂ ಕೂಡ ಹಿನ್ನಡೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲ್ಲಾಖೆಯಲ್ಲಿರುವ ಹುದ್ದೆಗಳ ಮಾಹಿತಿ:
ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಿ ವಿಶ್ವವಿದ್ಯಾಲಯದಲ್ಲಿರುವ ಹುದ್ದೆಗಳ ಮಾಹಿತಿ:
ನಕಲಿ ವಿವಿ ಹೆಸರಲ್ಲಿ ಡಾಕ್ಟರೇಟ್ ಪ್ರದಾನ.. ವೇದಿಕೆಯಲ್ಲೇ ಮೂವರ ಅರೆಸ್ಟ್
Published On - 11:25 am, Tue, 22 December 20