ಭಾರತಕ್ಕೆ ಬಂತಾ ಬಣ್ಣ ಬದಲಿಸಿದ ಹೆಮ್ಮಾರಿ? ಬ್ರಿಟನ್‌ನಿಂದ ಚೆನ್ನೈ, ದೆಹಲಿಗೆ ಮರಳಿದವರಿಗೆ ಕೊರೊನಾ!
ಕಳೆದ ಕೆಲವು ದಿನಗಳ ಹಿಂದೆ ಪತ್ತೆಯಾಗಿದ್ದ ಕೊರೊನಾವೈರಸ್ನ ಹೊಸ ಪ್ರಬೇಧ ಇದೀಗ ದೇಶಕ್ಕೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬ್ರಿಟನ್‌ನಿಂದ ಚೆನ್ನೈಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.
ಚೆನ್ನೈ: ಕಳೆದ ಕೆಲವು ದಿನಗಳ ಹಿಂದೆ ಪತ್ತೆಯಾಗಿದ್ದ ಕೊರೊನಾ ವೈರಸ್ನ ಹೊಸ ಪ್ರಭೇದ ಇದೀಗ ದೇಶಕ್ಕೆ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬ್ರಿಟನ್‌ನಿಂದ ಚೆನ್ನೈಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.
ಬ್ರಿಟನ್‌ನಿಂದ ಮರಳಿದ್ದ ಈ ವ್ಯಕ್ತಿ ದೆಹಲಿ ಮೂಲಕ ಚೆನ್ನೈಗೆ ಆಗಮಿಸಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗೆ ಚೆನ್ನೈನಿಂದ ಬ್ರಿಟನ್‌ಗೆ ತೆರಳಿದ್ದ ಸೋಂಕಿತ ಮರಳಿದ ನಂತರ RT-PCR ಟೆಸ್ಟ್‌ಗೆ ಒಳಗಾದ ಸೋಂಕು ದೃಢಪಟ್ಟಿದೆ. ಸದ್ಯ, ನಗರದ ಕಿಂಗ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ, ಸೋಂಕಿತ ಇತ್ತೀಚೆಗಷ್ಟೇ ಇಂಗ್ಲೆಂಡ್ಗೆ ಹೋಗಿದ್ದರಿಂದ ಈತನಿಗೆ ಕೊರೊನಾವೈರಸ್ನ ಹೊಸ ಪ್ರಭೇದ ತಗುಲಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ.
ಇತ್ತ, ಬ್ರಿಟನ್‌ನಿಂದ ದೆಹಲಿಗೆ ಆಗಮಿಸಿದ್ದ ಐವರಿಗೆ ಸೋಂಕು ದೃಢವಾಗಿದೆ. ಲಂಡನ್‌ನಿಂದ ಬಂದಿದ್ದ 266 ಜನ ಪೈಕಿ ಐವರಿಗೆ ಸೋಂಕು ಪತ್ತೆಯಾಗಿದೆ. ಜೊತೆಗೆ, ಲಂಡನ್‌ನಿಂದ ಕೋಲ್ಕತ್ತಾಗೆ ವಾಪಸ್ ಆದ 6 ಜನರಿಗೆ ಕೊರೊನಾ ದೃಢವಾಗಿದೆ. ಹಾಗಾಗಿ, ಅಲ್ಲೂ ಸಹ ಹೊಸ ಪ್ರಭೇದದ ಸೋಂಕಿನ ಬಗ್ಗೆ ಆತಂಕ ಹುಟ್ಟಿದೆ.
ರಾಜ್ಯದಲ್ಲಿ ಸದ್ಯಕ್ಕೆ ನೈಟ್ ಕರ್ಫ್ಯೂ ಅಗತ್ಯವಿಲ್ಲ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟನೆ
Published On - 11:38 am, Tue, 22 December 20