ಬೇಟೆಗೆ ತೆರಳಿದ್ದ ವ್ಯಕ್ತಿಗೆ ಗುಂಡು ತಗುಲಿ ಸಾವು, ಇದು ಕೊಲೆಯೆಂದ ಮೃತನ ಸಹೋದರ
ಬೇಟೆಗೆ ಕರೆದೊಯ್ದು ನನ್ನ ಸಹೋದರನನ್ನು ಹತ್ಯೆಗೈದಿದ್ದಾರೆ ಎಂದು ಮೃತನ ತಮ್ಮ ಕೆ.ಹೆಚ್.ಕೀರ್ತಿ ಆರೋಪ ಮಾಡುತ್ತಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹೀಗಾಗಿ ಬೆಳ್ಯಪ್ಪ ವಿರುದ್ಧ ಮೃತನ ತಮ್ಮ ಕೆ.ಹೆಚ್.ಕೀರ್ತಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೊಡಗು: ಬೇಟೆಗೆ ತೆರಳಿದ್ದ ವೇಳೆ ಗುಂಡು ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದಲ್ಲಿ ನಡೆದಿದೆ.
ಕೆ.ಹೆಚ್. ಪರಮೇಶ್ವರ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು, ಮದೆನಾಡು ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. ಬೇಟೆಗೆ ತೆರಳಿದ್ದ ವೇಳೆ ಜೊತೆಗಾರ ಎ.ಎಂ. ಬೆಳ್ಳಿಯಪ್ಪ ಹಾರಿಸಿದ ಗುಂಡು ತಗುಲಿ ಕೆ.ಹೆಚ್. ಪರಮೇಶ್ವರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಆದರೆ ಬೇಟೆಗೆ ಕರೆದೊಯ್ದು ನನ್ನ ಸಹೋದರನನ್ನು ಹತ್ಯೆಗೈದಿದ್ದಾರೆ ಎಂದು ಮೃತನ ತಮ್ಮ ಕೆ.ಹೆಚ್. ಕೀರ್ತಿ ಆರೋಪ ಮಾಡುತ್ತಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹೀಗಾಗಿ ಬೆಳ್ಳಿಯಪ್ಪ ವಿರುದ್ಧ ಮೃತನ ತಮ್ಮ ಕೆ.ಹೆಚ್.ಕೀರ್ತಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲಿ ಕೋವಿ ಹಬ್ಬದ ಸಂಭ್ರಮ: ಬಂದೂಕಿಗೆ ಪೂಜೆ ಸಲ್ಲಿಸಿ, ನೃತ್ಯ ಪ್ರದರ್ಶಿಸಿ ಫುಲ್ ಮಸ್ತಿ..
Published On - 11:11 am, Tue, 22 December 20