ಕಲಬುರಗಿ ಮಹಾಮಳೆ: ಪ್ರವಾಹದಲ್ಲಿ ಸಿಲುಕಿದ್ದ 6 ಶಾಲಾ ಸಿಬ್ಬಂದಿ ರಕ್ಷಣೆ..

ಕಲಬುರಗಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಕಷ್ಟ ಪಡುತ್ತಿದೆ. ಪ್ರವಾಹಕ್ಕೆ ಸಿಲುಕಿ ನರಳುತ್ತಿದೆ. ಕಾಗಿಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಶಾಲೆ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಸೇಡಂ ತಾಲೂಕಿನ ಮಳಖೇಡ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ಜನ ಸಿಬ್ಬಂದಿ ಸಿಲುಕಿದ್ದರು. ಅವರನ್ನು NDRF ತಂಡ ರಕ್ಷಿಸಿದೆ. ನಿನ್ನೆ ಬೆಳಗ್ಗೆ ಶಾಲೆಗೆ ಕಾಗಿಣಾ ನದಿಯ ನೀರು ನುಗ್ಗಿ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದರು. ವಸತಿ ಶಾಲೆಯಿಂದ ಬರಲಾಗದೆ ರಕ್ಷಣೆಗಾಗಿ ಪರಿತಪಿಸುತ್ತಿದ್ದರು. ಸದ್ಯ ಇಂದು […]

ಕಲಬುರಗಿ ಮಹಾಮಳೆ: ಪ್ರವಾಹದಲ್ಲಿ ಸಿಲುಕಿದ್ದ 6 ಶಾಲಾ ಸಿಬ್ಬಂದಿ ರಕ್ಷಣೆ..

Updated on: Oct 15, 2020 | 7:06 AM

ಕಲಬುರಗಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಕಷ್ಟ ಪಡುತ್ತಿದೆ. ಪ್ರವಾಹಕ್ಕೆ ಸಿಲುಕಿ ನರಳುತ್ತಿದೆ. ಕಾಗಿಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಶಾಲೆ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಸೇಡಂ ತಾಲೂಕಿನ ಮಳಖೇಡ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ಜನ ಸಿಬ್ಬಂದಿ ಸಿಲುಕಿದ್ದರು. ಅವರನ್ನು NDRF ತಂಡ ರಕ್ಷಿಸಿದೆ.

ನಿನ್ನೆ ಬೆಳಗ್ಗೆ ಶಾಲೆಗೆ ಕಾಗಿಣಾ ನದಿಯ ನೀರು ನುಗ್ಗಿ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದರು. ವಸತಿ ಶಾಲೆಯಿಂದ ಬರಲಾಗದೆ ರಕ್ಷಣೆಗಾಗಿ ಪರಿತಪಿಸುತ್ತಿದ್ದರು. ಸದ್ಯ ಇಂದು ಬೆಳಗಿನ ಜಾವ 4. ಗಂಟೆಯ ಸಮಯಕ್ಕೆ NDRF ತಂಡದ ಸಿಬ್ಬಂದಿ ರಕ್ಷಣೆ ಮಾಡಿ 6 ಜನ ಶಾಲೆ ಸಿಬ್ಬಂದಿಯ ಪ್ರಾಣ ಉಳಿಸಿದೆ.