ಬೆಳಗಾವಿ: ಕೊರೊನಾದಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆಯಲ್ಲಿ ಮಹಾ ಎಡವಟ್ಟು ನಡೆದಿದೆ. ಜಿಲ್ಲಾಡಳಿತದ ಎಡವಟ್ಟಿಗೆ ಬೆಳಗಾವಿಯಲ್ಲಿ ಟೆನ್ಷನ್ ಹೆಚ್ಚಾಗಿದೆ. ನಿನ್ನೆ ಸದಾಶಿವನಗರದ ವಿದ್ಯುತ್ ಚಿತಾಗಾರದಲ್ಲಿ ರೋಗಿ 15272 ಅಂತ್ಯಕ್ರಿಯೆ ಮಾಡಲಾಗಿತ್ತು. ಆದರೆ ಅಂತ್ಯಕ್ರಿಯೆ ಬಳಿಕ ಆವರಣವನ್ನ ಸ್ಯಾನಿಟೈಸರ್ ಮಾಡದೆ ನಿರ್ಲಕ್ಷ್ಯವಹಿಸಲಾಗಿದೆ.
ಜಿಲ್ಲಾಧಿಕಾರಿಗಳೇ ಇದೇನಾ ನಿಮ್ಮ ಜವಾಬ್ದಾರಿ? ಯಾಕಿಷ್ಟು ನಿರ್ಲಕ್ಷ್ಯತನ?ಎಂಬುವುದು ಗೊತ್ತಾಗುತ್ತಿಲ್ಲ. ಕೊರೊನಾ ಸಂಕಷ್ಟದಲ್ಲಿರುವಾಗ ಅಧಿಕಾರಿಗಳ ನಿರ್ಲಕ್ಷ್ಯ ಮತ್ತಷ್ಟು ಜೀವ ಹಾನಿಗೆ ಕಾರಣವಾಗಬಹುದು. ತೀವ್ರ ಉಸಿರಾಟದ ಸಮಸ್ಯೆಯಿಂದ 72 ವರ್ಷದ ವೃದ್ಧ ಮೃತಪಟ್ಟಿದ್ದರು. ಹೀಗಾಗಿ ಬೆಳಗಾವಿಯ ಸದಾಶಿವನಗರದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ.
ಈ ವೇಳೆ ಪಿಪಿಇ ಕಿಟ್ ಧರಿಸದೇ ವೃದ್ಧನ ಪುತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದನಂತೆ. ನಿನ್ನೆ ಸಂಜೆ ಅಂತ್ಯಕ್ರಿಯೆಯಾಗಿದೆ. ಆದರೆ ಬೆಳಗ್ಗೆಯಾದರೂ ಏರಿಯಾದಲ್ಲಿ ಸ್ಯಾನಿಟೈಸರ್ ಮಾಡಿಲ್ಲ ಎಂದು ಸ್ಮಶಾನದ ಕಾವಲುಗಾರ ತಿಳಿಸಿದ್ದಾರೆ. ನನಗೂ ಯಾವುದೇ ಮಾಸ್ಕ್, ಹ್ಯಾಂಡ್ ಗ್ಲೌಸ್ ನೀಡಿಲ್ಲ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾವಲುಗಾರ ಆಕ್ರೋಶ ಹೊರ ಹಾಕಿದ್ದಾರೆ. ಹೀಗೇನಾ ಅಂತ್ಯಕ್ರಿಯೆ ನಡೆಸೋದು?ಸಾಮಾನ್ಯರಿಗೂ, ಕೊರೊನಾನಿಂದ ಮೃತಪಟ್ಟವರಿಗೂ ಒಂದೇ ಕಡೆ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಜೀವಭಯದಲ್ಲೇ ಸ್ಮಶಾನದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.