ಆರೋಗ್ಯ ಇಲಾಖೆಯಲ್ಲಿ ಸಮನ್ವಯತೆ ಕೊರತೆ, ಅಧಿಕಾರಿಗೆ 15 ದಿನ ಸುದೀರ್ಘ ರಜೆ

ಕೊಪ್ಪಳ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸಮನ್ವಯತೆ ಕೊರತೆ ಎದುರಾಗಿದೆ. ಸಮನ್ವಯತೆ ಇಲ್ಲದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಜನ್‌ ಡಾ.ದಾನರೆಡ್ಡಿರನ್ನ ದೀರ್ಘ ರಜೆ ನೀಡಿ ಜಿಲ್ಲಾಡಳಿತ ಕಳಿಸಿದೆ. ಹೌದು ಕಿಮ್ಸ್ ನಿರ್ದೇಶಕ ವೈಜನಾಥ್ ಇಟಗಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ದಾನರೆಡ್ಡಿ ನಡುವೆ ಸಮನ್ವಯದ ಕೊರತೆ ಉಂಟಾಗಿದೆ. ಕೊರೊನಾ ಮಧ್ಯೆಯೂ ಇಬ್ಬರ ಕಿತ್ತಾಟ ಜೋರಾಗಿದೆ. ಹೀಗಾಗಿ ಇಬ್ಬರ ಜಗಳ ತಿಳಿಗೊಳಿಸಲು ಹಾಗೂ ಡಾ.ದಾನರೆಡ್ಡಿ ತಾವು ಹೇಳಿದ್ದೇ ನಡೆಯಬೇಕೆಂದು ಹಠ ಮಾಡ್ತಿದ್ರು. ಮತ್ತೊಂದೆಡೆ ಕೊವಿಡ್ ವಾರ್ಡ್‌ನಲ್ಲಿ ಕೆಲಸ ಮಾಡಲು ಆರೋಗ್ಯ ನೆಪ ಹೇಳಿ […]

ಆರೋಗ್ಯ ಇಲಾಖೆಯಲ್ಲಿ ಸಮನ್ವಯತೆ ಕೊರತೆ, ಅಧಿಕಾರಿಗೆ 15 ದಿನ ಸುದೀರ್ಘ ರಜೆ
Edited By:

Updated on: Aug 27, 2020 | 12:14 PM

ಕೊಪ್ಪಳ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸಮನ್ವಯತೆ ಕೊರತೆ ಎದುರಾಗಿದೆ. ಸಮನ್ವಯತೆ ಇಲ್ಲದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಜನ್‌ ಡಾ.ದಾನರೆಡ್ಡಿರನ್ನ ದೀರ್ಘ ರಜೆ ನೀಡಿ ಜಿಲ್ಲಾಡಳಿತ ಕಳಿಸಿದೆ.

ಹೌದು ಕಿಮ್ಸ್ ನಿರ್ದೇಶಕ ವೈಜನಾಥ್ ಇಟಗಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ದಾನರೆಡ್ಡಿ ನಡುವೆ ಸಮನ್ವಯದ ಕೊರತೆ ಉಂಟಾಗಿದೆ. ಕೊರೊನಾ ಮಧ್ಯೆಯೂ ಇಬ್ಬರ ಕಿತ್ತಾಟ ಜೋರಾಗಿದೆ. ಹೀಗಾಗಿ ಇಬ್ಬರ ಜಗಳ ತಿಳಿಗೊಳಿಸಲು ಹಾಗೂ ಡಾ.ದಾನರೆಡ್ಡಿ ತಾವು ಹೇಳಿದ್ದೇ ನಡೆಯಬೇಕೆಂದು ಹಠ ಮಾಡ್ತಿದ್ರು. ಮತ್ತೊಂದೆಡೆ ಕೊವಿಡ್ ವಾರ್ಡ್‌ನಲ್ಲಿ ಕೆಲಸ ಮಾಡಲು ಆರೋಗ್ಯ ನೆಪ ಹೇಳಿ ಹಿಂದೇಟು ಹಾಕ್ತಿದ್ರು.

ಹೀಗಾಗಿ ಜಿಲ್ಲಾಡಳಿತ ಡಾ.ದಾನರೆಡ್ಡಿಗೆ 15 ದಿನ ದೀರ್ಘ ರಜೆ ನೀಡಿ ಮನೆಗೆ ಕಳಿಸಿದೆ. ತಾವು ಹೇಳಿದ್ದೇ ನಡೆಯಬೇಕೆಂದು ಅಧಿಕಾರಿಗಳು ಕಿತ್ತಾಡ್ತಿದ್ದಾರೆ. ಅಧಿಕಾರಿಗಳಿಬ್ಬರ ಕಿತ್ತಾಟದಿಂದ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹದಿನೈದು ದಿನಗಳ ಅವಧಿಯಲ್ಲಿ ಇದು ಎರಡನೇ ಬಾರಿಗೆ ದೀರ್ಘ ರಜೆ ಹಾಕಿದ್ದಾರೆ. 2 ದಿನದ ಹಿಂದಷ್ಟೇ ರಜೆ ಮುಗಿಸಿಕೊಂಡು ವಾಪಸಾಗಿದ್ದರು. ಈಗ ಮತ್ತೆ ರಜೆ ನೀಡಲಾಗಿದೆ.