ಡಿಜೆ ಹಳ್ಳಿ ಗಲಭೆ ಆರೋಪಿಯ ಮೊಬೈಲ್‌ನಲ್ಲಿ ಯಾರದೆಲ್ಲಾ ನಂಬರುಗಳಿವೆ ಗೊತ್ತಾ?
ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಆರೋಪಿ ಸಮೀವುದ್ದೀನ್ ಮೊಬೈಲ್ ಪರಿಶೀಲಿಸಿದ ಅಧಿಕಾರಿಗಳು ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ ಆತನ ಮೊಬೈಲ್‌ನಲ್ಲಿದ್ದ ಕಾಂಟ್ಯಾಕ್ಟ್ ನಂಬರ್ಸ್. ಹೌದು ಆರೋಪಿ ಸಮಿವುದ್ದೀನ್ ಮೊಬೈಲ್ ಪರಿಶೀಲಿಸಿದ ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ಆತನ ಮೊಬೈಲ್‌ನಲ್ಲಿ ಬೆಂಗಳೂರಿನ ಹಲವಾರು ಪೊಲೀಸ್ ಅಧಿಕಾರಿಗಳ ನಂಬರ್ಸ್ ಪತ್ತೆಯಾಗಿವೆ. ಅದೂ ಪರ್ಸನಲ್ ನಂಬರ್ಸ್. ಬೆಂಗಳೂರಿನಲ್ಲಿ ಕೆಲಸ ಮಾಡುವ ಪೊಲೀಸ್ ಪೇದೆಯಿಂದ ಹಿಡಿದು ಡಿಸಿಪಿಗಳ ವರೆಗಿನ ನಂಬರ್ಸ್ ಆತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಇದಲ್ಲದೆ […]

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಆರೋಪಿ ಸಮೀವುದ್ದೀನ್ ಮೊಬೈಲ್ ಪರಿಶೀಲಿಸಿದ ಅಧಿಕಾರಿಗಳು ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ ಆತನ ಮೊಬೈಲ್‌ನಲ್ಲಿದ್ದ ಕಾಂಟ್ಯಾಕ್ಟ್ ನಂಬರ್ಸ್.
ಹೌದು ಆರೋಪಿ ಸಮಿವುದ್ದೀನ್ ಮೊಬೈಲ್ ಪರಿಶೀಲಿಸಿದ ತನಿಖಾಧಿಕಾರಿಗಳೇ ದಂಗಾಗಿದ್ದಾರೆ. ಆತನ ಮೊಬೈಲ್‌ನಲ್ಲಿ ಬೆಂಗಳೂರಿನ ಹಲವಾರು ಪೊಲೀಸ್ ಅಧಿಕಾರಿಗಳ ನಂಬರ್ಸ್ ಪತ್ತೆಯಾಗಿವೆ. ಅದೂ ಪರ್ಸನಲ್ ನಂಬರ್ಸ್. ಬೆಂಗಳೂರಿನಲ್ಲಿ ಕೆಲಸ ಮಾಡುವ ಪೊಲೀಸ್ ಪೇದೆಯಿಂದ ಹಿಡಿದು ಡಿಸಿಪಿಗಳ ವರೆಗಿನ ನಂಬರ್ಸ್ ಆತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ.
ಇದಲ್ಲದೆ ಹಲವು ಬಾರಿ ಆರೋಪಿ ಸಮಿವುದ್ದೀನ್ ಪೊಲೀಸ್ ಕಮೀಷನರ್ ಕಚೇರಿಗೂ ಭೇಟಿ ನೀಡಿದ್ದು ಬೆಳಕಿಗೆ ಬಂದಿದೆ. ಎನ್‌ಜಿಓ ಕೆಲಸದ ನೆಪದಲ್ಲಿ ಹಲವು ಬಾರಿ ಬೆಂಗಳೂರು ಕಮೀಷನರ್ ಕಚೇರಿಗೆ ಈತ ಭೇಟಿ ನೀಡಿದ್ದ ಎನ್ನಲಾಗಿದೆ.
ನಿಷೇಧಿತ ಸಂಘಟನೆ ಅಲ್ ಹಿಂದ್ ಜೊತೆ ಸಂಪರ್ಕದ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ಸಮೀವುದ್ದೀನ್, ಘಟನೆ ದಿನ ಕೆಜಿ ಹಳ್ಳಿ ಪೊಲೀಸ್ ಠಾಣೆ ಬಳಿ ಕಾಣಿಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಮೀವುದ್ದೀನ್‌ನನ್ನು ಬಂಧಿಸಿರುವ ಪೊಲೀಸರು ಆತನ ವಿಚಾರಣೆ ನಡೆಸಿದ್ದಾರೆ.



